T20 World Cup 2026 Tickets: ಜಸ್ಟ್‌ 500 ರೂಪಾಯಿಯಲ್ಲಿ ಟಿ20 ವಿಶ್ವಕಪ್‌ ಟಿಕೆಟ್!‌ ಖರೀದಿಸೋದು ಹೇಗೆ?

ಇನ್ನೇನು ಕೆಲವೇ ತಿಂಗಳಲ್ಲಿ ಹೊಸ ವರ್ಷ ಬರಲಿದೆ. ಇದೀಗ ಹೊಸ ವರ್ಷದ ಆಗಮನವಾಗುತ್ತಿದ್ದಂತೆ ಕ್ರಿಕೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಇನ್ನೇನು ಎರಡು ತಿಂಗಳಲ್ಲಿ ಇಡೀ ವಿಶ್ವವೇ ಕಾತುರದಲ್ಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್‌ ಪಂದ್ಯಾಟ (ICC T20 World Cup) ನಡೆಯಲಿದೆ. ಈಗಾಗಲೇ ವಿಶ್ವಕಪ್‌ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲಾಗಿದ್ದು, ಇದೀಗ ಟಿಕೆಟ್‌ ಮಾರಾಟ ಕೂಡಾ ಆರಂಭವಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India-South Africa) ನಡುವಿನ ಎರಡನೇ ಟಿ20 ಪಂದ್ಯದ ದಿನದಂದು ಐಸಿಸಿ, ವಿಶ್ವಕಪ್‌ ಲೀಗ್‌ ಹಂತದ ಪಂದ್ಯಗಳ ಟಿಕೆಟ್‌ನ ಮೊದಲ ಕಂತಿನ ಮಾರಾಟವನ್ನು ಶುರು ಮಾಡಿದೆ. ಅದರಲ್ಲೂ ಬಹುನಿರೀಕ್ಷಿತ ಪಂದ್ಯ ಭಾರತ-ಪಾಕಿಸ್ತಾನ (India-Pakistan) ನಡುವಿನ ಪಂದ್ಯದ ಟಿಕೆಟ್‌ಗಳು ಕ್ಷಣಮಾತ್ರದಲ್ಲಿ ಸೇಲ್‌ ಆಗಿದೆ ಎಂದು ವರದಿಯಾಗಿದೆ.

ಜಸ್ಟ್‌ 500 ರೂಪಾಯಿಯಲ್ಲಿ ಟಿ20 ವಿಶ್ವಕಪ್‌ ಟಿಕೆಟ್!‌ ಖರೀದಿಸೋದು ಹೇಗ

20 ತಂಡಗಳ ನಡುವೆ ನಡೆಯಲಿರುವ ಸೆಣಸಾಟಕ್ಕೆ ಈಗಾಗಲೇ ಭಾರತ ಮತ್ತು ಶ್ರೀಲಂಕಾ ಸಜ್ಜಾಗಿದೆ. ಐಸಿಸಿ ಮೆಗಾ ಟೂರ್ನಿ ಫೆಬ್ರವರಿ 7 ರಿಂದ ಆರಂಭವಾಗಲಿದ್ದು, ಇದರ ವೀಕ್ಷಣಾ ಅನುಭವ ಪಡೆಯಲು ಟಿಕೆಟ್‌ ಮಾರಾಟವನ್ನೂ ಆರಂಭಿಸಿದೆ.

ಭಾರೀ ಅಗ್ಗದಲ್ಲಿ ಟಿ20 ವಿಶ್ವಕಪ್‌ ಟಿಕೆಟ್‌ಗಳು!
ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಈ ಬಾರಿ ಟಿ20 ವಿಶ್ವಕಪ್‌ ಫೆಬ್ರವರಿ 7 ರಿಂದ ಮಾರ್ಚ್‌ 8 ರವರೆಗೆ ನಡೆಯಲಿದೆ. ಇದೀಗ 2026ರ ಐಸಿಸಿ T20 ವಿಶ್ವಕಪ್‌ನ ಟಿಕೆಟ್ ಮಾರಾಟ ಡಿಸೆಂಬರ್ 11ರಂದು ಸಂಜೆ 6.45 IST (ಭಾರತ/ಶ್ರೀಲಂಕಾ ಸಮಕಾಲೀನ ಸಮಯ, ಮಧ್ಯಾಹ್ನ 1.15 GMT) ಕ್ಕೆ ಆರಂಭವಾಗಿದೆ.

ಮೊದಲ ಹಂತದ ಟಿಕೆಟ್‌ಗಳು ಭಾರತದ ಆಯ್ದ ಕ್ರೀಡಾಂಗಣಗಳಲ್ಲಿ ₹100 (ಸರಿಸುಮಾರು USD 1.1) ರಿಂದ, ಶ್ರೀಲಂಕಾದಲ್ಲಿ LKR 1,000 (ಸರಿಸುಮಾರು USD 3.2) ರಿಂದ ಲಭ್ಯವಿವೆ ಎಂದು ಐಸಿಸಿ ಗುರುವಾರ ವರದಿ ಮಾಡಿದೆ. ಎರಡನೇ ಹಂತದ ಟಿಕೆಟ್‌ ಮಾರಾಟದ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಿದ್ದು, ಟಿಕೆಟ್‌ಗಳನ್ನು tickets.cricketworldcup.com ನಲ್ಲಿ ಖರೀದಿಸಬಹುದು ಎಂದು ಹೇಳಲಾಗಿದೆ.

ಐಸಿಸಿ ಸಿಇಒ ಸಂಜೋಗ್ ಗುಪ್ತಾ ಅವರು ಈ ಕುರಿತು ಮಾತನಾಡಿದ್ದು, "ಮೊದಲ ಹಂತದ ಟಿಕೆಟ್‌ ಮಾರಾಟವು, ಐಸಿಸಿ ಟೂರ್ನಿಯನ್ನು ಅತ್ಯಂತ ಸುಲಭವಾಗಿ ಲಭ್ಯವಾಗುವಂತೆ ಮಾಡುವ, ನಮ್ಮ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲು" ಎಂದು ಹೇಳಿದರು.

"2026ರ ಐಸಿಸಿ ಪುರುಷರ T20 ವಿಶ್ವಕಪ್‌ ಅನ್ನು ನೇರವಾಗಿ ನೋಡುವುದಲ್ಲದೇ, ಯಾವುದೇ ಹಿನ್ನೆಲೆ, ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೇ ನೋಡುವಂತಾಗಬೇಕು ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು..

100 ರೂ.ನಿಂದ ಟಿಕೆಟ್‌ ಆರಂಭ!
ಗುಪ್ತಾ ಅವರು, "ಕೇವಲ ₹100 ಮತ್ತು LKR 1,000 ದಿಂದ ಟಿಕೆಟ್‌ಗಳು ಪ್ರಾರಂಭವಾಗುವುದರೊಂದಿಗೆ, ನಾವು ಕೈಗೆಟುಕುವ ದರಕ್ಕೆ ಆದ್ಯತೆ ನೀಡಿದ್ದೇವೆ. ಇದು ಕ್ರಿಕೆಟ್‌ನ ಲಕ್ಷಾಂತರ ಜನರಿಗೆ ಮುಕ್ತ ಆಹ್ವಾನ ನೀಡುವ ಬಗ್ಗೆ, ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ, ಕ್ರೀಡಾಂಗಣದಲ್ಲಿ ಹೊಸ ಶಕ್ತಿ ನಿರ್ಮಾಣವಾಗಲಿದೆ. ಅಲ್ಲದೇ ಎಲ್ಲರಿಗೂ ಉತ್ತಮ ಅನುಭವ ನೀಡಲಿದೆ" ಎಂದು ವಿವರಿಸಿದರು.

2026ರ T20 ವಿಶ್ವಕಪ್ 20 ತಂಡಗಳ 55 ಪಂದ್ಯಗಳನ್ನು ಒಳಗೊಂಡಿದೆ. 2024ರ ಆವೃತ್ತಿಯಂತೆಯೇ, ನಾಲ್ಕು ಗುಂಪುಗಳಲ್ಲಿ ತಲಾ ಐದು ತಂಡಗಳನ್ನು ವಿಂಗಡಿಸಲಾಗಿದೆ. ಪಂದ್ಯಗಳು ಬೆಳಿಗ್ಗೆ 11ಕ್ಕೆ (0530 GMT), ಮಧ್ಯಾಹ್ನ 3ಕ್ಕೆ (0930 GMT) ಮತ್ತು ಸಂಜೆ 7ಕ್ಕೆ IST (1330 GMT) ಆರಂಭವಾಗಲಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+