FASTag Offer: ಕೊಳಕಾಗಿರುವ ಶೌಚಾಲಯದ ಫೋಟೋ ತೆಗೆಯಿರಿ, ಅಪ್‌ಲೋಡ್‌ ಮಾಡಿ; ನಿಮ್ಮ ಫಾಸ್ಟ್ಯಾಗ್‌ ಖಾತೆಗೆ ಬರುತ್ತೆ 1 ಸಾವಿರ ಹಣ!

FASTag, 2016 ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಾರಿಗೆ ತಂದಿದ್ದು, 2021 ರಿಂದ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿದೆ. ಆದರೂ ಕೆಲವು ವಾಹನಗಳು ಫಾಸ್ಟ್ಯಾಗ್‌ ಸ್ಟಿಕ್ಕರ್‌ಗಳನ್ನು (FASTag) ಅಂಟಿಸದೆಯೇ ಸಂಚರಿಸುತ್ತಾರೆ. ಅಂಥವರಿಗೆ ದಂಡ ಕೂಡಾ ವಿಧಿಸಲಾಗುತ್ತೆ. ಆದ್ರೆ ಇದೀಗ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಹೆದ್ದಾರಿಗಳನ್ನು ಸ್ವಚ್ಛವಾಗಿ ಮತ್ತು ಪ್ರಯಾಣಿಕರಿಗೆ ಅನುಕೂಲಕರವಾಗುವಂತೆ ವಿಶೇಷ ಅಭಿಯಾನವೊಂದನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಯಾರಾದರೂ ಟೋಲ್ ಪ್ಲಾಜಾಗಳಲ್ಲಿನ ಶೌಚಾಲಯಗಳಲ್ಲಿ ಕೊಳಕು (Dirty Toilet), ಕಸಗಳನ್ನು ಕಂಡರೆ, ಅದರ ಬಗ್ಗೆ ವರದಿ ಮಾಡಬೇಕು. ಇದನ್ನು ವರದಿ ಮಾಡುವ ಮೂಲಕ 1,000 ರೂಪಾಯಿಗಳ FASTag ರೀಚಾರ್ಜ್ ಪಡೆಯಬಹುದು.

FASTag ಬಳಕೆದಾರರಿಗೆ 1 ಸಾವಿರ ಫ್ರೀ ರೀಚಾರ್ಜ್?

ಅಕ್ಟೋಬರ್‌ 31 ರವರೆಗೆ ಮಾತ್ರ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂದಿರುವ ಈ ಯೋಜನೆ ಅಕ್ಟೋಬರ್ 31, 2025 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಸ್ವಚ್ಛತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಸ್ವಚ್ಛ ಹೆದ್ದಾರಿಗಳ ಕಡೆಗೆ NHAI ಯ ಈ ಕ್ರಮವು ಪ್ರಯಾಣಿಕರಿಗೂ ಅನುಕೂಲವಾಗಲಿದೆ, ಜೊತೆಗೆ 1 ಸಾವಿರ ರೂಪಾಯಿ ಬಹುಮಾನವನ್ನೂ ಗೆಲ್ಲಬಹುದು.

1,000 ರೂ. FASTag ರೀಚಾರ್ಜ್ ಪಡೆಯುವುದು ಹೇಗೆ?
1 ಸಾವಿರ ರೂಪಾಯಿ ಉಚಿತ FASTag ರೀಚಾರ್ಜ್‌ ಬಹುಮಾನ ಪಡೆಯಲು, ಪ್ರಯಾಣಿಕರು "ರಾಜ್‌ಮಾರ್ಗ್ ಯಾತ್ರಾ" ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಬೇಕು ಮತ್ತು ಬಳಸುತ್ತಿರಬೇಕು. ಈ ಅಪ್ಲಿಕೇಶನ್‌ ಅನ್ನು ನೀವು Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲೂ ಡೌನ್‌ಲೋಡ್‌ ಮಾಡುವ ಅವಕಾಶವಿದೆ.

ಬಹುಮಾನ ಪಡೆಯಲು ಈ ಹಂತ ಫಾಲೋ ಮಾಡಿ:
ಹಂತ 1: ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್ ಓಪನ್‌ ಮಾಡಿ ಮತ್ತು "Report Dirty Toilet" ಆಯ್ಕೆಯನ್ನು ಸರ್ಚ್‌ ಮಾಡಿ.

ಹಂತ 2: NHAI ಟೋಲ್ ಪ್ಲಾಜಾದಲ್ಲಿನ ಕೊಳಕು ಅಥವಾ ಸ್ವಚ್ಛತೆಯಿಲ್ಲದ ಶೌಚಾಲಯದ ಸ್ಪಷ್ಟ, ಸಮಯದ ಅಂಚೆಚೀಟಿ (time-stamped) ಇರುವ ಫೋಟೋಗಳನ್ನು ತೆಗೆಯಿರಿ.

ಹಂತ 3: ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ (VRN), ಮತ್ತು ಲೊಕೇಶನ್‌ ವಿವರಗಳೊಂದಿಗೆ ಫೋಟೋವನ್ನು ಅಪ್‌ಲೋಡ್ ಮಾಡಿ.

ಹಂತ 4: ನಿಮ್ಮ ವರದಿ ಪರಿಶೀಲಿಸಲ್ಪಟ್ಟರೆ, 1,000 ರೂಪಾಯಿಗಳ FASTag ರೀಚಾರ್ಜ್‌ ನಿಮ್ಮ ಲಿಂಕ್ ಮಾಡಲಾದ ಅಕೌಂಟ್‌ಗೆ ಜಮಾ ಮಾಡಲಾಗುತ್ತದೆ.

ಈ ನಿಯಮಗಳನ್ನು ಫಾಲೋ ಮಾಡಿ:
ಫೋಟೋ ಅಪ್‌ಲೋಡ್‌ ಮಾಡುವ ಮೊದಲು NHAI ನಿಗದಿಪಡಿಸಿದ ಕೆಲವು ನಿಯಮಗಳ ಬಗ್ಗೆ ತಿಳಿದಿರಬೇಕು:

  1. ಈ ಬಹುಮಾನವು NHAI ನಿರ್ಮಿಸಿದ ಅಥವಾ ನಿರ್ವಹಿಸುವ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ರೆಸ್ಟೋರೆಂಟ್‌ಗಳು, ಇಂಧನ ಪಂಪ್‌ಗಳು ಅಥವಾ ಧಾಬಾಗಳಲ್ಲಿನ ಶೌಚಾಲಯಗಳಿಗೆ ಅನ್ವಯಿಸುವುದಿಲ್ಲ.
  2. ಒಂದೇ ದಿನ ಅನೇಕ ಪ್ರಯಾಣಿಕರು ಒಂದೇ ಶೌಚಾಲಯದ ಬಗ್ಗೆ ವರದಿ ಮಾಡಿದರೆ, ಮೊದಲು ಯಾರು ನೀಡಿರುತ್ತಾರೋ ಅವರಿಗೆ ಮಾತ್ರ ಬಹುಮಾನ ಸಿಗುತ್ತದೆ.
  3. ಫೋಟೋಗಳು ನೀವೇ ಸ್ವತಃ ಕ್ಲಿಕ್‌ ಮಾಡಿರಬೇಕು, ಯಾವುದೇ ಎಡಿಟ್‌ ಮಾಡಿರಬಾರದು ಮತ್ತು ಜಿಯೋಟ್ಯಾಗ್ ಮಾಡಿರಬೇಕು. ಫೇಕ್‌ ಫೋಟೋಗಳು ಗಣನೆಗೆ ಬರುವುದಿಲ್ಲ.
  4. ಪ್ರತಿ ವಾಹನ ನೋಂದಣಿ ಸಂಖ್ಯೆಗೆ (VRN) ಒಮ್ಮೆ ಮಾತ್ರ ಬಹುಮಾನ ಪಡೆಯಲು ಸಾಧ್ಯ.

NHAI ಯೋಜನೆಯೊಂದಿಗೆ ಸ್ವಚ್ಛ ಹೆದ್ದಾರಿಗೆ ದಾರಿ:
ಹೆದ್ದಾರಿ ಶೌಚಾಲಯಗಳು ಸಾಮಾನ್ಯವಾಗಿ ಪ್ರಯಾಣಿಕರಿಗೆ, ವಿಶೇಷವಾಗಿ ಕುಟುಂಬಗಳಿಗೆ, ಮಹಿಳೆಯರು ಮತ್ತು ದೂರದ ಪ್ರಯಾಣದ ಚಾಲಕರಿಗೆ ಪ್ರಮುಖ ಸಮಸ್ಯೆಯಾಗಿಬಿಟ್ಟಿದೆ. ನೈರ್ಮಲ್ಯದ ಸಮಸ್ಯೆಯೇ ಇಲ್ಲಿ ತಲೆದೋರಿದೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಅಭಿಯಾನವು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಸ್ವಚ್ಛ ಮತ್ತು ಸುರಕ್ಷಿತ ಸಾರ್ವಜನಿಕ ಶೌಚಾಲಯಗಳನ್ನು ಹೊಂದಲು ಸಹಕಾರಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+