ಬೆಂಗಳೂರು, ಸೆಪ್ಟೆಂಬರ್ 6: ಭಾರತದ ಉದ್ಯಮಶೀಲ ಕ್ಷೇತ್ರಗಳು ತನ್ನ ಉತ್ತುಂಗ ತಲುಪುವಂತೆ ಮಾಡುವಲ್ಲಿ ಪುರುಷರು ಮಾತ್ರವಲ್ಲದೆ ಮಹಿಳಾ ಸಮುದಾಯವೂ ಸಮಾನ ಪಾತ್ರವನ್ನು ವಹಿಸುತ್ತಿದೆ. ಇತ್ತೀಚಿಗಿನ ಪ್ರವೃತ್ತಿ ನೋಡುವುದಾದರೆ ಜನರು ಸ್ಟಾರ್ಟ್‌ಅಪ್‌ಗಳ ಹೆಚ್ಚು ಆಕರ್ಷಿತರಾಗಿ, ಯಾರ ಕೈಕೆಳಗೆಯೂ ದುಡಿಯದೇ ಅವರ ಸ್ವಂತ ಬಾಸ್ ಅವರೇ ಆಗಿದ್ದಾರೆ.
ಇನ್ನು ಈ ಪೈಕಿ ಭಾರತದ ಮಹಿಳೆಯರು ಹಿಂದೆ ಉಳಿದಿಲ್ಲ. ತಾವೇ ಉದ್ಯಮ ಸ್ಥಾಪಿಸಿ ಹಲವು ಮಂದಿಗೆ ಉದ್ಯೋಗದಾತರಾಗಿ ಕೆಲಸ ಮಾಡಿದ್ರೆ, ಇನ್ನು ಕೆಲವು ಮಂದಿ ತಮ್ಮ ಫ್ಯಾಮಿಲಿ ಬ್ಯುಸಿನೆಸ್ ಚುಕ್ಕಾಣಿ ಹಿಡಿದು ಉದ್ಯಮವನ್ನು ಮತ್ತು ಅದರ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಮಹಿಳಾ ಉದ್ಯಮಿಗಳೆಂದರೆ ಫಲ್ಗುಣಿ ನಾಯರ್, ಕಿರಣ್ ಮಜುಂದಾರ್ ಶಾ, ರಾಧಿಕಾ ಘಾಯ್ ಅಗರ್ವಾಲ್ ಮುಂತಾದ ಮಹಿಳಾ ಉದ್ಯಮಿಗಳ ಹೆಸರು ತಕ್ಷಣಕ್ಕೆ ನೆನಪಾಗುತ್ತಾರೆ. ಇದೇ ಸಾಲಿನಲ್ಲಿ ನಿಂತವರು ಯುವ ಉದ್ಯಮಿ ತಾರಾ ಸಿಂಗ್ ವಚಾನಿ. ಇವರು ಮ್ಯಾಕ್ಸ್ ಗ್ರೂಪ್ ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅನಲ್ಜಿತ್ ಸಿಂಗ್ ಅವರ ಪುತ್ರಿಯಾಗಿದ್ದಾರೆ. ಅಂದಹಾಗೆ ಮ್ಯಾಕ್ಸ್ ಗ್ರೂಪ್ ದೆಹಲಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಇದೊಂದು ಭಾರತೀಯ ಸಂಘಟಿತ ಸಂಸ್ಥೆಯಾಗಿದೆ.
ಜೀವ ವಿಮೆ, ಆರೋಗ್ಯ, ಆತಿಥ್ಯ, ರಿಯಲ್ ಎಸ್ಟೇಟ್ ಮುಂತಾದ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ . ಇದನ್ನು 1985 ರಲ್ಲಿ ಅನಲ್ಜಿತ್ ಸಿಂಗ್ ಇದನ್ನು ಸ್ಥಾಪಿಸಿದ್ದು, ಇದು ತನ್ನ ಗ್ರೂಪ್ ನಲ್ಲಿ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ , ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್, ಮ್ಯಾಕ್ಸ್ ವೆಂಚರ್ಸ್ ಮತ್ತು ಇಂಡಸ್ಟ್ರೀಸ್ , ಮ್ಯಾಕ್ಸ್ ಇಂಡಿಯಾ, ಮ್ಯಾಕ್ಸ್ ಸ್ಪೆಷಾಲಿಟಿ ಫಿಲ್ಮ್ಸ್, ಮ್ಯಾಕ್ಸ್ ಎಸ್ಟೇಟ್ಸ್ ಮತ್ತು ಅಂಟಾರಾ ಸೀನಿಯರ್ ಲಿವಿಂಗ್ ಮುಂತಾದವುಗಳನ್ನು ಒಳಗೊಂಡಿದೆ.
ತಾರಾ ಅವರು ಮ್ಯಾಕ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯ ಉಪಾಧ್ಯಕ್ಷರಾಗಿದ್ದು, ಮ್ಯಾಕ್ಸ್ ಗ್ರೂಪ್ ಅನ್ನು ನಿಯಂತ್ರಿಸುತ್ತಾರೆ. ಫೋರ್ಬ್ಸ್ ಪ್ರಕಾರ ಇವರ ರಿಯಲ್ ಟೈಮ್ ನಿವ್ವಳ ಮೌಲ್ಯ 10078 ಕೋಟಿ ರೂ. ಆಗಿದ್ದು, ಸೆ.6 ರ ಹೊತ್ತಿಗೆ ಮ್ಯಾಕ್ಸ್ ಇಂಡಿಯಾದ ಮಾರುಕಟ್ಟೆ ಮೌಲ್ಯ 1297 ಕೋಟಿ ರೂ. ಆಗಿದೆ.
ತಾರಾ ಅವರು ಮ್ಯಾಕ್ಸ್ ಇಂಡಿಯಾ ಫೌಂಡೇಶನ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅಂತರಾ ಸೀನಿಯರ್ ಲಿವಿಂಗ್ (ASL) ನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿದ್ದಾರೆ. ಅಂಟಾರಾ ಸಂಸ್ಥಾಪಕಿಯಾಗಿ, ಭಾರತದಲ್ಲಿನ ಹಿರಿಯ ಆರೈಕೆ ಜಾಗಕ್ಕೆ ಹೊಸ ಆಯಾಮವನ್ನು ನೀಡುವುದು ಅವರ ದೃಷ್ಟಿಯಾಗಿತ್ತು. ಜೀವ ರಕ್ಷಣೆಯೊಂದಿಗೆ ಜೀವನಶೈಲಿಯನ್ನು ನೀಡುವ ರೋಮಾಂಚಕ ವಸತಿ ಸಮುದಾಯಗಳನ್ನು ರಚಿಸುವ ಮೊದಲ ಭಾರತೀಯ ಸಾಹಸೋದ್ಯಮಕ್ಕಾಗಿ "ಅಂಟಾರಾ" ಹೆಸರುವಾಸಿಯಾಗಿದೆ.
ತಾರಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ನ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು ಸ್ಟಟಜಿ ಮ್ಯಾನೇಜ್ ಮೆಂಟ್ ವಿಷಯ ಕುರಿತು ಅಧ್ಯಯನ ಮಾಡಿದ್ದರು. ಇವಿಷ್ಟೇ ಅಲ್ಲದೇ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ರಾಜಕೀಯ ಮತ್ತು ದಕ್ಷಿಣ ಏಷ್ಯಾದ ಅಧ್ಯಯನಗಳನ್ನು ಸಹ ಅಭ್ಯಾಸಿಸಿದರು. ಅವರು ಮ್ಯಾಕ್ಸ್ ಎಸ್ಟೇಟ್ಸ್ ಅನ್ನು ಎಂಡಿ ಮತ್ತು ಸಿಇಒ ಆಗಿ ಮುನ್ನಡೆಸುವ ಸಾಹಿಲ್ ವಚಾನಿ ಅವರನ್ನು ವಿವಾಹವಾಗಿದ್ದು ಇದು ಕೂಡಾ ಮ್ಯಾಕ್ಸ್ ಗ್ರೂಪ್‌ನ ಒಂದು ಭಾಗವಾಗಿದೆ. ಸಾಹಿಲ್ ಹಾಗೂ ತಾರಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ತಾರಾ ಅವರು ವಿಶ್ವ ಆರ್ಥಿಕ ವೇದಿಕೆಯ ಭಾಗವಾಗಿರುವ ಯಂಗ್ ಗ್ಲೋಬಲ್ ಲೀಡರ್ಸ್‌ನ 2020 ರ ಸದಸ್ಯರಾಗಿದ್ದಾರೆ. ಉತ್ಸಾಹಭರಿತ, ಉದ್ಯಮಶೀಲ ಮತ್ತು ಕ್ರಿಯಾತ್ಮಕವಾಗಿರುವ ಅವರಿಗೆ ಪ್ರವಾಸವೆಂದರೆ ಅಚ್ಚುಮೆಚ್ಚು. ವಿದೇಶದಲ್ಲಿ ಓದಿ, ಉದ್ಯಮದಲ್ಲಿ ತೊಡಗಿಸಿಕೊಂಡರು, ಕುಟುಂಬ ಮತ್ತು ದೇಶದ ಮೇಲಿನ ಪ್ರೀತಿಯಿಂದ ಅವರು ಭಾರತದಲ್ಲಿ ನೆಲೆಸಿದ್ದಾರೆ.


Click it and Unblock the Notifications