ನವದೆಹಲಿ, ಆಗಸ್ಟ್ 14: ಅನೇಕ ಐಐಟಿ ಪದವೀಧರರು ದೊಡ್ಡ- ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ತಮ್ಮದೇ ಆದ ಕಂಪನಿ ಕಟ್ಟಬೇಕು ಎಂದು ಕನಸು ಕಂಡು ಉದ್ಯೋಗ ತೊರೆದು ಸವಾಲು ಸ್ವೀಕರಿಸಿದವರು ಬಹಳಷ್ಟು ಮಂದಿ ಇದ್ದಾರೆ. ಇಂತಹ ಅನೇಕ ಮಂದಿ ಉದ್ಯೋಗಿಗಳಾಗಿ ಒಂದಷ್ಟು ಜ್ಞಾನ ಅನುಭವ ಪಡೆದು ಬಳಿಕ ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಆರಂಭಿಸಿರುತ್ತಾರೆ. ಇದೇ ರೀತಿ ಇಬ್ಬರು ಐಐಟಿ ಹಳೆ ವಿದ್ಯಾರ್ಥಿಗಳ ಯಶಸ್ವಿನ ಕಥೆ ಹೇಳುತ್ತೇವೆ. ಹನ್ನೊಂದು ವರ್ಷದ ಹಿಂದಿನ ಶ್ರಮದಲ್ಲಿ ಹುಟ್ಟಿದ ಇವರ ಕಂಪನಿ ಈಗ ಭಾರತದ ಯುನಿಕಾರ್ನ್ ಆಗಿ ಮಾರ್ಪಟ್ಟಿದೆ.
ಈ ಯಶಸ್ವಿನ ಕಥೆಯ ನಾಯಕರೇ ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್. ಇವರಿಬ್ಬರೂ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳು. ಇವರಿಬ್ಬರು ತಮ್ಮ ಕನಸಿನ ಸಂಸ್ಥೆಯಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ, ಅಥರ್ ಎನರ್ಜಿಯನ್ನು ಸ್ಥಾಪಿಸಿದ್ದಾರೆ ಇಂದು ಇದರ ಅದರ ಮೌಲ್ಯವು ಈಗ ಯುಎಸ್ ಡಿ 1.3 ಬಿಲಿಯನ್ (Rs 10910 ಕೋಟಿ) ತಲುಪಿದೆ.

ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಹೂಡಿಕೆದಾರರಾದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF) ನೇತೃತ್ವದ ಹೊಸ ನಿಧಿಯ ಸುತ್ತಿನಲ್ಲಿ USD 71 ಮಿಲಿಯನ್ (Rs 590 ಕೋಟಿ) ಪಡೆದುಕೊಂಡಿದೆ. ಹೊಸ ಫಂಡ್ ನ ನಂತರ ಇದರ ಮೌಲ್ಯಮಾಪನವು ಯುಎಸ್ ಡಿ 1.3 ಶತಕೋಟಿಗೆ ಏರಿದ್ದು, ಇದು ಯುನಿಕಾರ್ನ್ ಸ್ಟಾರ್ಟ್ಅಪ್ ಆಗಿ ಮಾಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಮಾಹಿತಿಗಾಗಿ ಹೇಳುವುದಾದರೆ , ಯುನಿಕಾರ್ನ್ ಅಂದ್ರೆ ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಯು ಎಸ್ ಡಿ 1 ಶತಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಖಾಸಗಿ ಕಂಪನಿಯಾಗಿದೆ. ಅಥರ್ ಎನರ್ಜಿ ಇಲ್ಲಿಯವರೆಗೆ 1.73 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ಹೀರೊಮೊಟೊ ಕಾರ್ಪ್, ಟೈಗರ್ ಗ್ಲೋಬಲ್ ಮತ್ತು ಜಿಐಸಿಯಿಂದ ಬೆಂಬಲಿತವಾಗಿದೆ.
ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಯಾರು?
ತರುಣ್ ಮೆಹ್ತಾ ಅವರು ಐಐಟಿ ಮದ್ರಾಸ್‌ನಿಂದ ಇಂಜಿನಿಯರಿಂಗ್ ಡಿಸೈನ್‌ನಲ್ಲಿ ಪದವಿ ಪಡೆದರು (ಡ್ಯೂಯಲ್ ಡಿಗ್ರಿ 2012). ಅವರ ಸಹಪಾಠಿಯಾಗಿದ್ದ ಸ್ವಪ್ನಿಲ್ ಜೈನ್ ಜೊತೆಗೆ, ಅವರು ಏಪ್ರಿಲ್ 2013 ರಲ್ಲಿ 'ಅಥರ್ ಎನರ್ಜಿಯನ್ನು ಪ್ರಾರಂಭಿಸಿದರು. ತರುಣ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಸ್ವಪ್ನಿಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO)ಯಾಗಿದ್ದು ಸ್ವಪ್ನಿಲ್ ಐಐಟಿ ಮದ್ರಾಸ್‌ನಿಂದ ಎಂಜಿನಿಯರಿಂಗ್ ಡಿಸೈನ್ ಡಿಗ್ರಿಯನ್ನು ಪಡೆದಿದ್ದಾರೆ.
ಇವರಿಬ್ಬರು 2018 ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ೩೦ ಅಂಡರ್ ೩೦, 2017 ಮತ್ತು 2019 ರಲ್ಲಿ ಫಾರ್ಚೂನ್ ನ 40 ಅಂಡರ್ 40 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಇವರನ್ನು ಭಾರತೀಯ ವಾಹನ ಉದ್ಯಮದಲ್ಲಿ ನವೀನ ಉತ್ಪನ್ನಕ್ಕಾಗಿ ಲಿಸ್ಟ್ ಮಾಡಲಾಗಿತ್ತು.
ತರುಣ್ 2012 ರಲ್ಲಿ ಅಶೋಕ್ ಲೇಲ್ಯಾಂಡ್‌ನಲ್ಲಿ ಕೆಲಸದಲ್ಲಿದ್ದು, ಬ್ಯಾಟರಿ ಪ್ಯಾಕ್‌ಗಳ ಕೆಲಸ ಆರಂಭಿಸಲು ಈ ಉದ್ಯೋಗವನ್ನು ತೊರೆದಿದ್ದರು. ಅಥರ್‌ನಲ್ಲಿ CEO ಆಗಿರುವ, ತರುಣ್ ಕಂಪನಿಯ ಕಾರ್ಯತಂತ್ರದ ಚಿಂತನೆ ಹಾಗೂ ವಾಹನ ಅಭಿವೃದ್ಧಿಯ ಪ್ರತಿಯೊಂದು ಅಂಶವನ್ನು ಪರಿಶೀಲಿಸುವಲ್ಲಿ ನಿಕಟವಾಗಿ ಅಥರ್ ಟೀಂ ಜೊತೆ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸ್ವಪ್ನಿಲ್ ಅಥರ್‌ಗಾಗಿ ದೀರ್ಘಾವಧಿಯ ತಂತ್ರಜ್ಞಾನ ಮಾರ್ಗಸೂಚಿ ತಂಡ ಮತ್ತು ಉನ್ನತ ದರ್ಜೆಯ ಎಂಜಿನಿಯರಿಂಗ್ ತಂಡ ಎರಡರಲ್ಲೂ ಕೆಲಸ ಮಾಡುತ್ತಾರೆ.
ಅಥರ್ ಎನರ್ಜಿ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು , ಇದು ಪ್ರಸ್ತುತ ಅಥರ್ 450 ಅಪೆಕ್ಸ್, ಅಥರ್ 450 ಎಸ್ , ಅಥರ್ 450 ಎಕ್ಸ್ , ಅಥರ್ 450 ಎಕ್ಸ್ ಪ್ರೊ ಮತ್ತು ಅಥರ್ ರಿಜ್ಟಾ ಎಂದು ಕರೆಯಲ್ಪಡುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಇದು ವೈಟ್‌ಫೀಲ್ಡ್ , ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರಿನಲ್ಲಿ ಹೀಗೆ ಎರಡು EV ತಯಾರಿಕಾ ಘಟಕಗಳನ್ನು ಹೊಂದಿದೆ.
ಓಲಾ ಎಲೆಕ್ಟ್ರಿಕ್ , ಟಿವಿಎಸ್ ಮೋಟಾರ್ ಕಂಪನಿ ಮತ್ತು ಬಜಾಜ್ ಆಟೋ ನಂತರ ಇದು ಭಾರತದ ಮೂರನೇ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ . ಇದು ಅಥರ್ ಗ್ರಿಡ್ ಎಂದು ಕರೆಯಲ್ಪಡುವ ದೇಶದಾದ್ಯಂತ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications