ನವದೆಹಲಿ, ಮಾರ್ಚ್ 11: ಆದಾಯ ತೆರಿಗೆ ಕಾಯಿದೆಯು ಭಾರತದಲ್ಲಿ ಆದಾಯ ತೆರಿಗೆಯನ್ನು ನಿಯಂತ್ರಿಸುವ ಸಮಗ್ರ ಶಾಸನವಾಗಿದೆ. ಭಾರತೀಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಯನ್ನು ಉಳಿಸಲು ಅನೇಕ ಮಾರ್ಗಗಳಿವೆ. ಆದರೆ ಅದರಲ್ಲಿರುವ ಸಂಕೀರ್ಣತೆಗಳನ್ನು ಗುರುತಿಸಿ, ಲಭ್ಯವಿರುವ ಕಡಿತಗಳು ಮತ್ತು ವಿನಾಯಿತಿಗಳ ಬಗ್ಗೆ ಸಮಗ್ರವಾದ ಅರಿವಿನ ಅಗತ್ಯವಿರುತ್ತದೆ.
ತಿಳುವಳಿಕೆಯಿಂದ ಕೂಡಿರುವ ಸರಿಯಾದ ನಿರ್ಧಾರಗಳನ್ನು ಮಾಡುವುದರಿಂದ ತೆರಿಗೆ ಬಾಧ್ಯತೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು, ಜೊತೆಗೆ ತಮ್ಮ ಹಣಕಾಸು ಯೋಜನೆಗಳನ್ನು ಮತ್ತಷ್ಟು ಉತ್ತಮಗೊಳಿಸಬಹುದು.ತೆರಿಗೆಯಲ್ಲಿರುವ ಕುಂದುಕೊರತೆಗಳನ್ನು ಅರಿತುಕೊಳ್ಳುವ ಮೂಲಕ,ನಾವು ಅರ್ಹರಾಗಿರುವ ಎಲ್ಲಾ ಕಡಿತಗಳು ಮತ್ತು ಪ್ರಯೋಜನಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು ಜೊತೆಗೆ ಟ್ಯಾಕ್ಸ್ ಸೀಸನ್ ನಲ್ಲಿ ತೆರಿಗೆಗೆ ಕಡಿತವಾಗುವ ಹಣವನ್ನು ಉಳಿತಾಯ ಮಾಡಬಹುದು.

ಕೆಲವರು ಅಕ್ರಮವಾಗಿ ಆದಾಯ ತೆರಿಗೆ ಉಳಿತಾಯ ಮಾಡುತ್ತಾರೆ. ಆದರೆ ಇದು ಸೂಕ್ತವಾದ ಮಾರ್ಗವಲ್ಲ. ನಾವು ಆದಾಯ ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುವಂತಹ ದಾರಿಯನ್ನು ಸರ್ಕಾರವೇ ನಮಗೆ ನೀಡಿದೆ. ಈ ಎಲ್ಲ ವಿಧಾನವು ಸಕ್ರಮವಾಗಿದೆ. ಆದಾಯ ತೆರಿಗೆ ಕಾಯ್ದೆಯಡಿ ಸೆಕ್ಷನ್ 80C ನಿಬಂಧನೆ ಮೂಲಕ ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ಮೇಲೆ ಕಡಿತಗಳನ್ನು ಕ್ಲೈಮ್ ಮಾಡುವ ಮೂಲಕ ವ್ಯಕ್ತಿಗಳು ತಮ್ಮ ತೆರಿಗೆಯ ಆದಾಯವನ್ನು ಕಡಿಮೆ ಮಾಡಲು ಅನುಮತಿಸುತ್ತದೆ.
ಇವುಗಳಲ್ಲಿ PPF, ELSS, NSC, ಮತ್ತು EPF ನಂತಹ ಮಾರ್ಗಗಳ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಆದರೆ, ಈ ಮಾರ್ಗಗಳನ್ನು ಕಡೆಗಣಿಸುವುದು ಅಥವಾ ಅವುಗಳಲ್ಲಿ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ, ವಿನಾಯಿತಿಗಳ ಅವಕಾಶಗಳು ಕೈ ತಪ್ಪಿ ಹೀಗಿ ಹೆಚ್ಚಿನ ತೆರಿಗೆ ಹೊರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ತೆರಿಗೆದಾರರು ಈ ತೆರಿಗೆ-ಉಳಿತಾಯ ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಉತ್ತಮ ಮಾಹಿತಿ ಪಡೆದುಕೊಳ್ಳವುದು ಒಳಿತು.
1) ತೆರಿಗೆ ಕಡಿತಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದು: ಆದಾಯ ತೆರಿಗೆ ಕಾಯಿದೆಯ 80C ನಿಬಂಧನೆಯನ್ನು ನಿರ್ಲಕ್ಷಿಸುವುದು ಕೂಡಾ ತೆರಿಗೆಯ ಹೊರೆ ಹೆಚ್ಚಾದಂತೆ ಸರಿ. ಸಾರ್ವಜನಿಕ ಭವಿಷ್ಯ ನಿಧಿ (PPF), ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್‌ಗಳು (ELSS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಮತ್ತು ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಹೂಡಿಕೆಗಳು ತೆರಿಗೆ-ಉಳಿತಾಯ ಹಲವಾರು ಮಾರ್ಗಗಳನ್ನು ನೀಡುತ್ತದೆ. ಅನುಮತಿಸುವ ಗರಿಷ್ಠ ಮಿತಿಯವರೆಗೆ (ಪ್ರಸ್ತುತ ವಾರ್ಷಿಕ ರೂ 1.5 ಲಕ್ಷ) ಈ ಕಡಿತಗಳ ಲಾಭವನ್ನು ಪಡೆಯಲು ವಿಫಲವಾದರೆ ಗಮನಾರ್ಹ ತೆರಿಗೆ ಉಳಿತಾಯವನ್ನು ಕಳೆದುಕೊಂಡಂತೆ.
2) ಮನೆ ಬಾಡಿಗೆ ಭತ್ಯೆ (House Rent Allowance -HRA) ವಿನಾಯಿತಿಯನ್ನು ಬಳಸಿಕೊಳ್ಳದಿರುವುದು: ನೀವು ನಿಮ್ಮ ಸಂಬಳದ ಭಾಗವಾಗಿ HRA ಪಡೆಯುವ ವೇತನದಾರರಾಗಿದ್ದಾರೆ, ಕೆಲವು ಷರತ್ತುಗಳಿಗೆ ಒಳಪಟ್ಟು ಪಾವತಿಸಿದ ಬಾಡಿಗೆಯ ಮೇಲೂ ನೀವು ವಿನಾಯಿತಿಯನ್ನು ಪಡೆಯಬಹುದು. ಬಾಡಿಗೆ ರಸೀದಿಗಳನ್ನು ಸಲ್ಲಿಸಲು ಅಥವಾ ನಿಮ್ಮ ಉದ್ಯೋಗದಾತರಿಗೆ ಸರಿಯಾದ ದಾಖಲಾತಿಗಳನ್ನು ಒದಗಿಸಲು ವಿಫಲವಾದರೆ ಈ ಮೌಲ್ಯಯುತವಾದ ತೆರಿಗೆ ಉಳಿಸುವ ಅವಕಾಶವನ್ನು ಕಳೆದುಕೊಳ್ಳಬಹುದು.
3) ಆರೋಗ್ಯ ವಿಮಾ ಪ್ರೀಮಿಯಂಗಳನ್ನು ನಿರ್ಲಕ್ಷಿಸುವುದು: ಸ್ವಯಂ ಅಥವಾ ಸಂಗಾತಿಯ, ಮಕ್ಕಳು ಮತ್ತು ಪೋಷಕರಿಗೆ ಮಾಡಿಸಿರುವ ಆರೋಗ್ಯ ವಿಮಾ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಸೆಕ್ಷನ್ 80D ಅಡಿಯಲ್ಲಿ ಡಿಡಕ್ಷನ್ ಗೆ ಅರ್ಹವಾಗಿವೆ. ಈ ಕಡಿತದ ಸದುಪಯೋಗಪಡಿಸಿಕೊಳ್ಳದಿರುವುದು ಹೆಚ್ಚಿನ ತೆರಿಗೆ ಹೊರೆಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಹಿರಿಯ ನಾಗರಿಕರು ಈ ವಿಭಾಗದ ಅಡಿಯಲ್ಲಿ ಹೆಚ್ಚಿನ ತೆರಿಗೆ ಕಡಿತವನ್ನು ಪಡೆಯಲು ಅರ್ಹರಾಗಿರುತ್ತಾರೆ.
4) NPS (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಪ್ರಯೋಜನಗಳನ್ನು ಬಳಸದಿರುವುದು: NPS ನ ಚಂದಾದಾರರಾಗಿರುವ ಯಾವುದೇ ವ್ಯಕ್ತಿಯು ಸೆಕ್ಷನ್ 80CD(1B) ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಕ್ಲೈಮ್ ಮಾಡಬಹುದು. ಇದು ಸೆಕ್ಷನ್ 80C ಅಡಿಯಲ್ಲಿ ಲಭ್ಯವಿರುವ ಮಿತಿಗಿಂತ ಹೆಚ್ಚಿನ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
5) ಕೊನೆಯ ನಿಮಿಷದಲ್ಲಿ ತೆರಿಗೆ ಉಳಿಸಲು ಯೋಜನೆ ಮಾಡುವುದು: ತೆರಿಗೆ ವಿನಾಯಿತಿ ಪಡೆಯಲು ಕೊನೆ ಕ್ಷಣದವರೆಗೆ ಮುಂದೂಡುವುದು ಖಂಡಿತಾ ದುಬಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿ ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಮಾಡಲು ಮಾರ್ಚ್‌ವರೆಗೆ ಕಾಯುವುದು ಸರಿಯಲ್ಲ. ಆರಂಭಿಕ ಯೋಜನೆಯು ವರ್ಷವಿಡೀ ಹೂಡಿಕೆಗಳನ್ನು ಸರಿಯಾಗಿ ಹಂಚಲು ಮತ್ತು ಹೆಚ್ಚು ತೆರಿಗೆ-ಮುಕ್ತ ಬಡ್ಡಿಯನ್ನು ಗಳಿಸಲು ಅನುಕೂಲ ಮಾಡಿಕೊಡುತ್ತದೆ.


Click it and Unblock the Notifications