ಮಕ್ಕಳು ಗಳಿಸಿದ ಆದಾಯಕ್ಕೂ ಪೋಷಕರು ಟ್ಯಾಕ್ಸ್ ಕಟ್ಟಬೇಕಾ?

ಬೆಂಗಳೂರು, ಜೂನ್‌ 15: ನಮ್ಮ ಮಕ್ಕಳು ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ಮಕ್ಕಳು ಅಪ್ರಾಪ್ತರಿದ್ದಾಗಲೆ ಅವರಿಗೆ ಪ್ರಾಪರ್ಟಿ ಗಿಫ್ಟ್ ಮಾಡುತ್ತೇವೆ. ಒಂದು ವೇಳೆ ಆ ಪ್ರಾಪರ್ಟಿ ಬಾಡಿಗೆ ನೀಡಿದ್ದರೆ ಅದರಿಂದ ದೊರೆಯುವ ಆದಾಯ ನಮ್ಮ ಆದಾಯಕ್ಕೆ ಸೇರುವುದಿಲ್ಲ. ಅಲ್ಲಿ ತೆರಿಗೆ ಸಹ ಉಳಿತಾಯ ಮಾಡಬಹುದು ಎನ್ನುವ ಲೆಕ್ಕಾಚಾರ ನಮ್ಮದಾಗಿರುತ್ತದೆ. ಆದರೆ ಈ ಲೆಕ್ಕಾಚಾರಗಳು ಸರಿಯಾದುದ್ದಲ್ಲ.

1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಹಣಕಾಸು ವರ್ಷವೊಂದರಲ್ಲಿ ಪಡೆದ 50,000 ರೂ. ಹೆಚ್ಚಿನ ಮೌಲ್ಯದ ಉಡುಗೊರೆಯ ಮೇಲೆ ತೆರಿಗೆ ಕಟ್ಟಬೇಕು. ಉಡುಗೊರೆಯನ್ನು ಪಡೆಯುವ ವ್ಯಕ್ತಿಯು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಸಂಬಂಧಿಕರು ಎನ್ನುವ ವ್ಯಾಖ್ಯೆಯೊಳಗೆ ಬರುವ ಜನರಿಂದ ಪಡೆದ ಉಡುಗೊರೆಗಳ ಮೇಲೆ ಯಾವ ತೆರಿಗೆಯೂ ಇರುವುದಿಲ್ಲ. ಸಂಬಂಧಿಕರ ವ್ಯಾಖ್ಯೆಯ ಅಡಿಯಲ್ಲಿ ಸಹೋದರ ಅಥವಾ ಸಹೋದರಿಯ, ತಾಯಿ ಅಥವಾ ತಂದೆ, ಸಂಗಾತಿಯ ಪೋಷಕರು ಬರುತ್ತಾರೆ. ಮಗನಿಗೆ ಉಡುಗೊರೆಯಾಗಿ ಕೊಟ್ಟ ಸ್ವತ್ತಿನ ಮೇಲೆ ಯಾಕೆ ತೆರಿಗೆ ತೆರಿಗೆ ಕಟ್ಟಬೇಕು? ಎನ್ನುವ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು.

ಮಕ್ಕಳು ಗಳಿಸಿದ ಆದಾಯಕ್ಕೂ ಪೋಷಕರು ಟ್ಯಾಕ್ಸ್ ಕಟ್ಟಬೇಕಾ?

ಸಾಮಾನ್ಯವಾಗಿ, ವ್ಯಕ್ತಿಯೊಬ್ಬನು ಹಣ ಸಂಪಾದಿಸಿದಾಗ ಮಾತ್ರವೇ ಆತನ ಮೇಲೆ ತೆರಿಗೆ ಹಾಕಲಾಗುತ್ತದೆ. ಆದರೆ, ಕೆಲವು ವಿಶೇಷ ಪ್ರಕರಣಗಳಲ್ಲಿ, ಬೇರೊಬ್ಬ ವ್ಯಕ್ತಿಯು ಹಣ ಸಂಪಾದಿಸಿದಾಗಲೂ ಸಹ ಅದನ್ನು ನಿಮ್ಮ ಆದಾಯಕ್ಕೇ ಸೇರಿಸಲಾಗುತ್ತೆ. ಇದನ್ನು ಆದಾಯಗಳ ಒಟ್ಟುಗೂಡಿಸುವಿಕೆ ಎನ್ನಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 60 ಮತ್ತು 64ನೇ ಸೆಕ್ಷನ್‌ಗಳಲ್ಲಿ ಆದಾಯಗಳ ಒಗ್ಗೂಡಿಸುವಿಕೆಯ ಪ್ರಸ್ತಾವನೆಗಳನ್ನು ನೀಡಲಾಗಿದೆ.
ನಿಮ್ಮ ಸಂಗಾತಿ ಅಥವಾ 18ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಗುವಿನ ಆದಾಯಗಳನ್ನು ಯಾವಾಗ ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಸೆಕ್ಷನ್‌ 64(1ಎ) ಅಪ್ರಾಪ್ತ ವಯಸ್ಕ ಮಗುವಿನ ಆದಾಯಗಳ ಬಗೆಗಿನ ಪ್ರಸ್ತಾವನೆಗಳನ್ನು ಒಳಗೊಂಡಿದೆ. ಇದು ಮಲಮಕ್ಕಳನ್ನು ಹಾಗೂ ದತ್ತು ಪಡೆದ ಮಕ್ಕಳನ್ನೂ ಒಳಗೊಂಡಿದೆ. ಸೆಕ್ಷನ್‌ 64(1ಎ) ಅಡಿಯಲ್ಲಿ, ಅಪ್ರಾಪ್ತ ವಯಸ್ಕ ಮಗುವು ಆದಾಯವನ್ನು ಗಳಿಸಿದರೆ, ಅದನ್ನು ಪೋಷಕರ, ಅಂದರೆ ತಂದೆ ಅಥವಾ ತಾಯಿಗಳಲ್ಲಿ ಯಾರ ಆದಾಯ ಜಾಸ್ತಿ ಇರುತ್ತದೆಯೋ, ಅವರ ಆದಾಯಕ್ಕೆ ಸೇರಿಸಲಾಗುತ್ತದೆ. ಒಂದು ವೇಳೆ, ಪೋಷಕರು ವಿಚ್ಛೇದನ ಪಡೆದುಕೊಂಡಿದ್ದರೆ, ಮಗುವಿನ ಆದಾಯವನ್ನು ಕಾನೂನುಬದ್ಧ ಪೋಷಕರ ಆದಾಯಕ್ಕೆ ಸೇರಿಸಲಾಗುತ್ತದೆ. ಮಗುವು ವಯಸ್ಕನಾಗುವವರೆಗೂ ಈ ಆದಾಯ ಒಟ್ಟುಗೂಡಿಸುವಿಕೆಯು ಮುಂದುವರಿಯುತ್ತದೆ. ಮಗುವು ಪ್ರಾಪ್ತ ವಯಸ್ಕನಾದಮೇಲೆ, ಈ ಆದಾಯವನ್ನು ಅವನ ಅಥವಾ ಅವಳ ಆದಾಯಕ್ಕೆ ಸೇರಿಸಲಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಗುವಿನ ಆದಾಯವನ್ನು ತಾಯಿಯ ಅಥವಾ ತಂದೆಯ ಆದಾಯಕ್ಕೆ ಸೇರಿಸದ 3 ಸಂದರ್ಭಗಳಿವೆ. ಮೊದಲನೆಯದು, ಸೆಕ್ಷನ್‌ 80ಯು ಅಡಿಯಲ್ಲಿ ಉಲ್ಲೇಖಿಸಲಾಗಿರುವಂತೆ ದೈಹಿಕ ಅಸಮರ್ಥತೆ ಇರುವ ಮಗುವಿನ ಆದಾಯವನ್ನು ತಾಯಿ ಅಥವಾ ತಂದೆಯ ಆದಾಯಕ್ಕೆ ಸೇರಿಸುವುದಿಲ್ಲ. ಎರಡನೆಯದಾಗಿ ಮಗುವು ಯಾವುದೇ ದೈಹಿಕ ಕೆಲಸದಿಂದ ಗಳಿಸಿದ ಆದಾಯವನ್ನು ಪೋಷಕರ ಆದಾಯಕ್ಕೆ ಸೇರಿಸಲಾಗುವುದಿಲ್ಲ.

ಮೂರನೆಯದಾಗಿ, ನಿಮ್ಮ ಮಗುವು ಯಾವುದಾದರೂ ಪ್ರದರ್ಶನ ಕ್ರೀಡಾ ಕಾರ್ಯಕ್ರಮ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಿ, ತನ್ನ ಕೌಶಲ ಅಥವಾ ಪ್ರತಿಭೆಯಿಂದ ಗಳಿಸೋ ಆದಾಯವನ್ನೂ ಸಹ ಪೋಷಕರ ಆದಾಯದಲ್ಲಿ ಸೇರಿಸುವುದಿಲ್ಲ.

ನೀವೂ ಸಹ, ತೆರಿಗೆ ಉಳಿಸಲು ನಿಮ್ಮ ಆದಾಯವನ್ನು ಮರೆಮಾಚುವ ಉದ್ದೇಶದಿಂದ, ನಿಮ್ಮ ಪತ್ನಿ ಅಥವಾ ಅಪ್ರಾಪ್ತ ವಯಸ್ಸಿನ ಮಗುವಿನ ಹೆಸರಲ್ಲಿ ಆಸ್ತಿಯೊಂದನ್ನು ಕೊಂಡರೆ ಅಥವಾ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟರೆ, ಆದಾಯಗಳನ್ನು ಒಗ್ಗೂಡಿಸುವ ಈ ಪ್ರಸ್ತಾವನೆಯನ್ನು ಮರೆಯಬೇಡಿ. ಅಂತಹ ಆದಾಯಗಳ ಮೇಲೆ ನೀವೇ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ನೀವೇನಾದರೂ ಈ ರೀತಿಯಲ್ಲಿ ತೆರಿಗೆ ಉಳಿಸಲು ಪ್ರಯತ್ನಿಸಿದರೆ, ಅದನ್ನು ತೆರಿಗೆ ವಂಚನೆಯೆಂದು ಪರಿಗಣಿಸಬಹುದು ಹಾಗೂ ಅದಕ್ಕಾಗಿ ನೀವು ದಂಡ ಕಟ್ಟಬೇಕಾಗಬಹುದು. ಅಷ್ಟು ಮಾತ್ರವಲ್ಲದೇ, ಅದು ಕಾನೂನಿನ ವಿವಾದಕ್ಕೂ ದಾರಿ ಮಾಡಿಕೊಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+