TCS & Infosys ಉದ್ಯೋಗಿಗಳಿಗೆ ಕಹಿಸುದ್ದಿ..ಅಂದುಕೊಂಡಂತೆ ಸಂಬಳ ಹೆಚ್ಚಿಸಲ್ಲ..! ಆಸೆ ಹೊತ್ತವರಿಗೆ ನಿರಾಸೆಯ ಭಾರ..!

ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ತಲೆನೋವು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಟಿಸಿಎಸ್‌ ಹಾಗೂ ಇನ್ಫೋಸಿಸ್ ಉದ್ಯೋಗಿಗಳಿಗಂತೂ ಕೇಳೋದೇ ಬೇಡ. ಸಂಬಳ ಹೆಚ್ಚಳದ ವಿಚಾರದಲ್ಲಿ ಈ ಎರಡೂ ಕಂಪನಿಗಳೂ ಕಹಿಸುದ್ದಿ ತಲುಪಿಸುತ್ತಿವೆ. ಇತ್ತೀಚೆಗೆ ಕೆಲಸದ ಅವಧಿ ವಿಸ್ತರಣೆ ಮಾಡಿದ್ದ ಇನ್ಫೋಸಿಸ್ ಕಂಪನಿ, ತನ್ನ ಉದ್ಯೋಗಿಗಳಿಗೆ ಸಂಬಂ ಹೆಚ್ಚಳದ ಪತ್ರವನ್ನು ವಿತರಿಸಿತ್ತು. ಆದರೂ ಉದ್ಯೋಗಿಗಳಿಗೆ ಇದು ಗುಡ್‌ನ್ಯೂಸ್ ಆಗಿರಲಿಲ್ಲ. ಏಕೆಂದರೆ ಸಂಬಳ ಹೆಚ್ಚಳದ ವಿಚಾರದಲ್ಲಿ ಅವರ ನಿರೀಕ್ಷೆ ಹುಸಿಯಾಗಿತ್ತು. ಅದರಂತೆ ಈಗ ಟಿಸಿಎಸ್ ಕಂಪನಿ ಉದ್ಯೋಗಿಗಳಿಗೂ ಕಹಿಸುದ್ದಿಯೇ ಕೊನೆಯಾಗಿದೆ.

ಹೌದು, ಐಟಿ ವಲಯದಲ್ಲಿ ದೊಡ್ಡ ಕಂಪನಿಯಾದ ಟಿಸಿಎಸ್‌, ಈ ವರ್ಷ ವೇತನ ಹೆಚ್ಚಳದಲ್ಲಿ ಶೇಕಡ 4 ರಿಂದ 8 ರಷ್ಟು ಕಡಿಮೆ ಮಾಡಿ ಘೊಷಿಸಿದೆ. ಇದು ಎಲ್ಲಾ ಉದ್ಯೋಗಿಗಳಿಗೂ ಒಂದು ದೊಡ್ಡ ಅಸಮಾಧಾನಕರ ಸಂಗತಿಯಾಗಿದೆ. ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಕೂಡ ಶೇ.5 ರಿಂದ ಶೇ.8 ರಷ್ಟು ಕಡಿಮೆ ವೇತನ ಹೆಚ್ಚಳವನ್ನು ಘೋಷಿಸಲಿದೆ ಎನ್ನಲಾಗಿದೆ.

TCS & Infosys ಉದ್ಯೋಗಿಗಳಿಗೆ ಇದೆಂಥಾ ಕಹಿಸುದ್ದಿ..!

ಇನ್ನು ಕೋವಿಡ್-19 ವೈರಸ್ ಸಮಯದಲ್ಲಿ ಭಾರಿ ಏರಿಕೆ ಕಂಡ ಐಟಿ ವಲಯ ಈಗ ಸಂಕಷ್ಟದಲ್ಲೇ ತೇಲುತ್ತಿದೆ ಎನ್ನಲಾಗಿದೆ. ಇನ್ನು ಹೆಸರಾಂತ ಐಟಿ ಕಂಪನಿ ಟಿಸಿಎಸ್..ಟಾಟಾ ಒಡೆತನದ ಈ ಕಂಪನಿ 2024ರ ಅಕ್ಟೋಬರ್-ಡಿಸೆಂಬರ್‍‌ಗೆ ಕಡಿಮೆ ತ್ರೈಮಾಸಿಕ ವೇರಿಯಬಲ್ ವೇತನವನ್ನು ಘೋಷಿಸಲಿದೆ ಎನ್ನಲಾಗಿದೆ. ಹಾಗೆಯೇ ಜೂನಿಯರ್ ಮತ್ತು ಮಧ್ಯಮ ಹಂತದಲ್ಲಿರುವ ಉದ್ಯೋಗಿಗಳು, ಶೇಕಡ 100ರಷ್ಟು ವೇರಿಯಬಲ್ ವೇತನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅನುಭವಿ ಹಾಗೂ ಹಿರಿಯ ಉದ್ಯೋಗಿಗಳಿಗೆ ಶೇಕಡ 20 ರಿಂದ 40ರ ನಡುವೆ ವೇರಿಯಬಲ್ ವೇತನವನ್ನು ನೀಡಬಹುದು ಎನ್ನಲಾಗಿದೆ.

ಟಿಸಿಎಸ್ ಉದ್ಯೋಗಿಗಳಿಗೆ ಎಷ್ಟು ವೇತನ ಹೆಚ್ಚಳ?

ಟಿಸಿಎಸ್ ಉದ್ಯೋಗಿಗಳಿಗೆ ಶೇಕಡ 4 ರಿಂದ 8 ವೇತನ ಹೆಚ್ಚಳ ಮಾಡುವ ಬಗ್ಗೆ ಘೋಷಣೆಯಾಗಿದ್ದು, ಇದು ಕಳೆದ ನಾಲ್ಕುವರ್ಷಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಎನ್ನಲಾಗಿದೆ. 2022ನೇ ಹಣಕಾಸು ವರ್ಷದಲ್ಲಿ ಇದೇ ಟಿಸಿಎಸ್ ಕಂಪನಿ ಶೇ.10.5ರಷ್ಟು ವೇತನ ಹೆಚ್ಚಿಸಿತ್ತು. 2023ನೇ ಹಣಕಾಸು ವರ್ಷದಲ್ಲಿ ಶೇ.6 ರಿಂದ 9 ಮತ್ತು 2024ನೇ ಹಣಕಾಸು ವರ್ಷದಲ್ಲಿ ಶೇ.7 ರಿಂದ 9ರಷ್ಟು ವೇತನ ಹೆಚ್ಚಿಸಿತ್ತು. ಅದಕ್ಕೆ ಹೋಲಿಸಿದರೆ ಮುಂದೆ ಹೆಚ್ಚಳವಾಗಲಿರುವ ವೇತನ ಅತ್ಯಂತ ಕಡಿಮೆಯದ್ದು ಎನ್ನಲಾಗಿದೆ.

ಡಿಸೆಂಬರ್ 2024ರ ತ್ರೈಮಾಸಿಕದಲ್ಲಿ ಟಿಸಿಎಸ್‌ ಕಂಪನಿಯು ತನ್ನ 5,370 ಉದ್ಯೋಗಿಗಳನ್ನು, ಕೆಲಸದಿಂದ ತೆಗೆದುಹಾಕಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಆದರೂ ಸಹ ಈ ವರ್ಷ ಕಡಿಮೆ ವೇತನ ಹೆಚ್ಚಳ ಕಂಡುಬಂದಿದೆ. ಇನ್ನು ಟಿಸಿಎಸ್‌ 2025ನೇ ವರ್ಷದ ತ್ರೈಮಾಸಿಕದಲ್ಲಿ, ಮಾರುಕಟ್ಟೆಯ ಅಂದಾಜುಗಳನ್ನು ಮೀರಿ ತನ್ನ ನಿವ್ವಳ ಲಾಭದಲ್ಲಿ ಶೇ. 5.5 ರಷ್ಟು ಏರಿಕೆಯಾಗುತ್ತಿತ್ತು. ಇದರಿಂದ ಟಿಸಿಎಸ್ ಕಂಪನಿ 12,380 ಕೋಟಿ ರೂ.ಗಳಿಗೆ ತಲುಪಿದೆ. ಅಕ್ಟೋಬರ್-ಡಿಸೆಂಬರ್ 2024ರ ಅವಧಿಯಲ್ಲಿ ಅದರ ಆದಾಯವು 63,973 ಕೋಟಿ ರೂ.ಗಳಿಗೆ ತಲುಪಿದೆ. ಹೀಗಿದ್ರೂ ಸಹ ಉದ್ಯೋಗಿಗಳಿಗೆ ಈ ಮಟ್ಟದ ನಿರಾಸೆ ಮಾಡಿದೆ.

ಇನ್ಫೋಸಿಸ್ ಉದ್ಯೋಗಿಗಳಿಗೆ ಎಷ್ಟು ವೇತನ ಹೆಚ್ಚಳ?

ಇನ್ಫೋಸಿಸ್ ಕಂಪನಿ ಕೂಡ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ, ಶೇಕಡ 5 ರಿಂದ 8ರಷ್ಟು ಕಡಿಮೆ ವೇತನ ಹೆಚ್ಚಿಸಲು ಮುಂದಾಗಿದೆ. ಆದರೆ ಅತ್ಯುತ್ತಮವಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಮಾತ್ರ ಗುಡ್‌ನ್ಯೂಸ್ ನೀಡಿದೆ. ಅಂದರೆ ಉತ್ತಮವಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಶೇಕಡ 10 ರಿಂದ 12ರಷ್ಟು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದೈತ್ಯ ಐಟಿ ಕಂಪನಿ ಭಾರತದಲ್ಲಿರುವ ತನ್ನ ಉದ್ಯೋಗಿಗಳಿಗೆ 2025ರ ಜನವರಿಯಿಂದ ಶೇಕಡ 6 ರಿಂದ 8ರಷ್ಟು ವೇತನ ಹೆಚ್ಚಳ ಜಾರಿ ಮಾಡುವ ಬಗ್ಗೆ ತಿಳಿಸಿದೆ. ಎರಡನೇ ಹಂತವು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಇನ್ನು ಇದೇ ಇನ್ಫೋಸಿಸ್ ಸಂಸ್ಥೆ ತನ್ನ ಮೈಸೂರಿನಲ್ಲಿರುವ ಕ್ಯಾಂಪಸ್‌ನಲ್ಲಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ 2024 ರಲ್ಲಿ ತರಬೇತಿ ಪಡೆದ 300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಹೀಗಾಗಿ ವಜಾಗೊಂಡ ಉದ್ಯೋಗಿಗಳು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.

ಇನ್ನು ಇನ್ಫೋಸಿಸ್ ಕಂಪನಿಯು 2024ನೇ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ, 6,806 ಕೋಟಿ ರೂಪಾಯಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಇನ್ಫೋಸಿಸ್ ಇತ್ತೀಚಿನ ಅಕ್ಟೋಬರ್-ಡಿಸೆಂಬರ್ 2024 ರ ತ್ರೈಮಾಸಿಕದಲ್ಲಿ ರೂ 6,806 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ, ಇದು 2023ನೇ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ, 6,106 ಕೋಟಿ ರೂ. ಆಗಿತ್ತು.

ಇಷ್ಟೆಲ್ಲ ಲಾಭದಾಯಕವಾಗಿದ್ದರೂ ದೈತ್ಯ ಐಟಿ ಸಂಸ್ಥೆಗಳ ಈ ನಿರ್ಧಾರ ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕಂಪನಿಯ ಬೆಳವಣಿಗೆ ಹಾಗೂ ಅಸ್ತಿತ್ವಕ್ಕಾಗಿ ದಿನವಿಡೀ ದುಡಿಯುವ ಜನರಿಗೆ ನೀಡಬೇಕಿರುವ ಕೊಡುಗೆ ಇದಲ್ಲ ಎಂದು, ಎಲ್ಲಾ ಉದ್ಯೋಗಿಗಳೂ ವ್ಯಕ್ತಪಡಿಸುತ್ತುದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+