ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್‌ನ (ಟಿಸಿಎಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ ಎಂದು ಟಿಸಿಎಸ್ ಸಂಸ್ಥೆಯು ಗುರುವಾರ (ಮಾರ್ಚ್ 16) ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಹಾಗೆಯೇ ಟಿಸಿಎಸ್‌ನ ಸಿಇಒ ಸ್ಥಾನಕ್ಕೆ ಕೆ. ಕೃತಿವಾಸನ್‌ರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕೃತಿವಾಸನ್ ಅಧಿಕಾರವಧಿ ಮಾರ್ಚ್ 16ರಿಂದ ಆರಂಭವಾಗಲಿದೆ.
ಟಿಸಿಎಸ್ ಸಂಸ್ಥೆಯಲ್ಲಿ ರಾಜೇಶ್ ಗೋಪಿನಾಥನ್ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ರಾಜೇಶ್ ಗೋಪಿನಾಥನ್ ಟಿಸಿಎಸ್ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಸಂಸ್ಥೆಯಲ್ಲಿ ಹಲವಾರು ಸ್ಥಾನಗಳನ್ನು ನಿರ್ವಹಣೆ ಮಾಡಿದ್ದಾರೆ. ರಾಜೇಶ್ ಗೋಪಿನಾಥನ್ ರಾಜೀನಾಮೆಯು ಅನಿರೀಕ್ಷಿತವಾಗಿದೆ. "ಕಳೆದ ವರ್ಷ 2027ರವರೆಗಿನ ಅವಧಿವರೆಗೆ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡ ಗೋಪಿನಾಥನ್ ಸಂಸ್ಥೆಯನ್ನು ತೊರೆಯಲ್ಲಿದ್ದಾರೆ," ಎಂದು ತಿಳಿಸಿದೆ.

"ಗೋಪಿನಾಥನ್ ಇತರೆ ಆಸಕ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಾಗ ಸಂಸ್ಥೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಎಲ್ಲ ಪ್ರಕ್ರಿಯೆಗಳು ಸರಳವಾಗಿ ನಡೆಯಲಿದೆ ಎಂದು ನಮ್ಮ ಭರವಸೆಯಾಗಿದೆ. ಇದು ಒಂದು ಭಾವಾನಾತ್ಮಕ ಕ್ಷಣ. ಸಂಸ್ಥೆಯ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಸಂಸ್ಥೆಯ ಸಿಇಒ ರಾಜೀನಾಮೆ ನೀಡುತ್ತಿರುವುದಾಗಿದೆ. ಆದ್ದರಿಂದಾಗಿ ಇದೊಂದು ಭಾವಾನಾತ್ಮಕವಾಗಿ ಋಣಾತ್ಮಕ ವಿಚಾರವಾಗಿದೆ," ಎಂದು ಆಕ್ಸಿಸ್ ಕ್ಯಾಪಿಟಲ್ ತಜ್ಞರು ಹೇಳಿದ್ದಾರೆ.
ಗೋಪಿನಾಥನ್ ಅಧಿಕಾರವಧಿಯ ಬೆಳವಣಿಗೆ
ನೂತನ ಸಿಇಒ ಕೆ. ಕೃತಿವಾಸನ್ 1989 ರಲ್ಲಿ ಟಿಸಿಎಸ್‌ಗೆ ಸೇರಿದರು. ಗೋಪಿನಾಥನ್ 2001ರಿಂದ ಟಿಸಿಎಸ್ ಸಂಸ್ಥೆಯಲ್ಲಿ ಕಾರ್ಯನಿರ್ಹವಣೆ ಮಾಡುತ್ತಾ ಬಂದಿದ್ದಾರೆ. ಹಲವಾರು ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಮುಖ್ಯ ಹಣಕಾಸು ಅಧಿಕಾರಿಯಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ಗೋಪಿನಾಥನ್ ಅಧಿಕಾರವಧಿಯಲ್ಲಿ ಕಳೆದ ತ್ರೈಮಾಸಿಕದಲ್ಲಿ ಟಿಸಿಎಸ್ ಷೇರು ಮೌಲ್ಯ ಮೂರು ಪಟ್ಟು ಅಧಿಕವಾಗಿದೆ. ಆದಾಯವು ದುಪ್ಪಟ್ಟಾಗಿದೆ. ಲಾಭವು ಸುಮಾರು ಶೇಕಡ 60ರಷ್ಟು ಏರಿಕೆಯಾಗಿದೆ.
ಇನ್ನು ತನ್ನ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ಗೋಪಿನಾಥನ್, "ನನ್ನ ಅಧಿಕಾರಾವಧಿಗೆ ನನಗೆ ಚಂದ್ರಶೇಖರನ್ ಮಾರ್ಗದರ್ಶನ ನೀಡಿದ್ದಾರೆ. ಅವರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಣೆ ಮಾಡಿರುವುದು ನನಗೆ ಸಂತಸವಾಗಿದೆ. ನಾನು ಕಳೆದ ಎರಡು ದಶಕಗಳಿಂದ ನಾನು ಕೃತಿವಾಸನ್ ಜೊತೆ ಕೆಲಸ ಮಾಡಿದ್ದೇನೆ. ಟಿಸಿಎಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉನ್ನತ ಸ್ಥಾನದಲ್ಲಿ ಅವರಿದ್ದಾರೆ. ಅವರಿಗೆ ಅಗತ್ಯವಾದ ಎಲ್ಲ ಬೆಂಬಲವನ್ನು ನಾನು ನೀಡಲು ಸಿದ್ಧವಾಗಿದ್ದೇವೆ," ಎಂದು ತಿಳಿಸಿದ್ದಾರೆ.
ಉದ್ಯೋಗ ಘೋಷಿಸಿದ್ದ ಟಿಸಿಎಸ್
ಭಾರತದ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯು ಮೂರನೇ ತ್ರೈಮಾಸಿಕದಲ್ಲಿ ತನ್ನ ಲಾಭದ ಅಂದಾಜಿಗಿಂತ ಕಡಿಮೆ ಲಾಭವನ್ನು ಪಡೆದಿದೆ. ಪ್ರಮುಖವಾಗಿ ಯುರೋಪ್‌ನಲ್ಲಿ ಲಾಭದಲ್ಲಿ ಕುಸಿತವನ್ನು ಕಂಡಿದೆ. ಆದರೆ ಈ ನಡುವೆ ನೇಮಕಾತಿ ಘೋಷಣೆ ಮಾಡಿತ್ತು. ಟಿಸಿಎಸ್ ತನ್ನ ತ್ರೈಮಾಸಿಕ ವರದಿಯಲ್ಲಿ, ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ತಮ್ಮ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು ಇಳಿಕೆಯಾಗಿದೆ ಎಂದು ಸಂಸ್ಥೆಯು ಉಲ್ಲೇಖಿಸಿದೆ. ಅದಕ್ಕಾಗಿ ಹಣಕಾಸು ವರ್ಷ 2024ರಲ್ಲಿ ಸುಮಾರು 1.25 ಲಕ್ಷ ಉದ್ಯೋಗಿಗಳ ನೇಮಕಾತಿಯನ್ನು ಸಂಸ್ಥೆಯು ಘೋಷಣೆ ಮಾಡಿದೆ.
ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಘೋಷಣೆ ಮಾಡುತ್ತಿರುವಾಗ ಟಿಸಿಎಸ್ ನೇಮಕಾತಿಯನ್ನು ಘೋಷಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಕ್ಕೂ ಸಂಸ್ಥೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಸುಮಾರು 2,197 ಉದ್ಯೋಗಿಗಳ ಇಳಿಕೆ ಕಂಡು ಬಂದಿದ್ದು ಉದ್ಯೋಗಿಗಳ ಸಂಖ್ಯೆಯು 6.13 ಲಕ್ಷಕ್ಕೆ ತಲುಪಿದೆ.
ಹಣಕಾಸು ವರ್ಷ 2022ರಲ್ಲಿ ಟಿಸಿಎಸ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸುಮಾರು 1.03 ಲಕ್ಷ ಮಂದಿ ಸೇರ್ಪಡೆಯಾದರು. ಹಣಕಾಸು ವರ್ಷ 2023ರಲ್ಲಿ ಮತ್ತೆ ಸುಮಾರು 55 ಸಾವಿರ ಮಂದಿಯನ್ನು ಟಿಸಿಎಸ್ ನೇಮಕಾತಿ ಮಾಡಿದೆ. ಆದರೂ ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 2197 ಕೊರತೆ ಇದೆ ಎಂದು ಹೇಳಿಕೊಂಡಿದೆ.


Click it and Unblock the Notifications