ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಬೆಂಗಳೂರಿನ ಕೆಲವು ವೈದ್ಯಕೀಯ ಕಾಲೇಜುಗಳು ಸೇರಿದಂತೆ ದೇಶದಲ್ಲಿ ಸುಮಾರು 100 ವೈದ್ಯಕೀಯ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಗೆ ಹಾಜರಾಗದ ಕಾರಣದಿಂದಾಗಿ ನೋಟಿಸ್ ಅನ್ನು ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಉಪನ್ಯಾಸಕರು ವಿದ್ಯಾರ್ಥಿಗಳಿಂದ ಕಲಿಯಬೇಕಾದ ಪಾಠ ಇದು ಎಂದು ಎನ್‌ಎಂಸಿ ಹೇಳಿದೆ. ಶಿಕ್ಷಕರು ಕಡ್ಡಾಯವಾಗಿ ಶೇಕಡ 75 ರಷ್ಟು ತರಗತಿಗೆ ಹಾಜರಾಗಿಲ್ಲ ಎಂಬ ಕಾರಣದಿಂದಾಗಿ ಈ ನೋಟಿಸ್ ಅನ್ನು ನೀಡಲಾಗಿದೆ. ಅದಕ್ಕಾಗಿ ಈ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನು ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಸಂಸ್ಥೆಗಳು ಸುಮಾರು 15 ದಿನಗಳನ್ನು ತೆಗೆದುಕೊಂಡಿದೆ. ಆದ್ದರಿಂದಾಗಿ ಎನ್‌ಎಂಸಿ ಈ ಸಂಸ್ಥೆಗಳಿಗೆ ದಂಡವನ್ನು ಕೂಡಾ ವಿಧಿಸಲು ಮುಂದಾಗಿದೆ. ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದೆ ಎಂಬುವುದು ಸಾಮಾನ್ಯವಾದ ಸಮಸ್ಯೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಈ ತರಗತಿ ಹಾಜರಾತಿಯಲ್ಲಿ ಕೊರತೆ ಎಂದರೆ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಶಿಕ್ಷಕರು ಅತಿಥಿ ಶಿಕ್ಷಕರು ಆಗಿದ್ದಾರೆ. ಆದರೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ದ ಅಡಿಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶವಿಲ್ಲ. ಎನ್‌ಎಂಸಿ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಅಧ್ಯಾಪಕರು ಮತ್ತು ಹಿರಿಯ ನಿವಾಸಿ ವೈದ್ಯರು ಆಧಾರ್ ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (AEBAS) ಮೂಲಕ ಕನಿಷ್ಠ ಶೇಕಡ 75 ರಷ್ಟು ಹಾಜರಾತಿಯನ್ನು ಹೊಂದಿರಬೇಕು.
ಎನ್‌ಎಂಸಿಯ ಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಲಿಂಕ್ ಮಾಡಲಾದ ಎಇಬಿಎಎಸ್ ಅನ್ನು ಎಲ್ಲಾ ವೈದ್ಯಕೀಯ ಕಾಲೇಜುಗಳು ಹೊಂದಿರಬೇಕು. ಎಲ್ಲಾ ಸಿಬ್ಬಂದಿಯ ಎಇಬಿಎಎಸ್ ಮಾಹಿತಿಯನ್ನು ಎನ್‌ಎಂಸಿ ಮತ್ತು ಕಾಲೇಜು ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಬೇಕು.
ಮತ್ತೆ ಮತ್ತೆ ಎಚ್ಚರಿಕೆಯನ್ನು ನೀಡಿದ್ದರೂ ಕೂಡಾ "ನಿಮ್ಮ ವೈದ್ಯಕೀಯ ಕಾಲೇಜು ಕನಿಷ್ಠ ಗುಣಮಟ್ಟದ ಅವಶ್ಯಕತೆಗಳು-2023 (ಎಂಎಸ್‌ಆರ್ 2023) ನಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ," ಎಂದು ಸರ್ಕಾರಿ ಕಾಲೇಜಿಗೆ ಕಳುಹಿಸಲಾದ ಶೋಕಾಸ್ ನೋಟಿಸ್ ಹೇಳಿದೆ.
"ನಾವು ಆರ್‌ಜಿಯುಎಚ್ಎಸ್ ಅಡಿಯಲ್ಲಿ ನೋಟಿಸ್ ಸ್ವೀಕರಿಸಿದ ಕಾಲೇಜುಗಳ ಪಟ್ಟಿಯನ್ನು ಹೊಂದಿಲ್ಲ. ಭಾರತದಾದ್ಯಂತ ಸುಮಾರು 100 ಕಾಲೇಜುಗಳು ಇದನ್ನು ಸ್ವೀಕರಿಸಿವೆ," ಎಂದು ರ್‌ಜಿಯುಎಚ್ಎಸ್‌ನ ಉಪಕುಲಪತಿ ಡಾ.ಎಂ.ಕೆ.ರಮೇಶ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.


Click it and Unblock the Notifications