ಬೆಂಗಳೂರಿನಲ್ಲಿ ಹೆಚ್ಚಾದ ಫ್ಲಾಟ್‌ ಬಾಡಿಗೆ ಹಗರಣ; ಜಾಣತನದಿಂದ ಪಾರಾದ ಟೆಕ್ಕಿ!

ರಾಜಧಾನಿ ಬೆಂಗಳೂರಿನಲ್ಲಿ ಮನೆಗಳನ್ನ ಹಡುಕುವುದು ಬಹಳ ಕಷ್ಟ ಎಷ್ಟೇ ತಂತ್ರಜ್ಞಾನ ಮುಂದವರೆದಿದ್ರೂ ಕೂಡ ಆಪ್‌ಗಳ ಸಹಾಯದಿಂದ ಮನೆ ಹುಡುಕವುದು ಇನ್ನೂ ಕಷ್ಟ. ಇದೆಲ್ಲದರ ನಡುವೆ ಮನೆ ಹುಡುಕಿ ಕೊಡ್ತೀವಿ ಎಂದು ಹೇಳಿ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಗರಣಗಳನ್ನ ಎಷ್ಟೇ ಜನರು ಬೆಳಕಿಗೆ ತಂದರು ಕೂಡ ಸಿಲಿಕಾನ್‌ಸಿಟಿಯಲ್ಲಿ ಇಂತಹ ಹಗರಣಗಳ ಸಂಖ್ಯೆಯಲ್ಲಿ ಮಾತ್ರ ಯಾವದೇ ವ್ಯತ್ಯಾಸವಿಲ್ಲ.

ಹೌದು ಬೆಂಗಳೂರಿನಲ್ಲಿ ಅದರಲ್ಲೂ ಬಾಡಿಗೆ ವಸತಿ ಮಾರುಕಟ್ಟೆಯಲ್ಲಿ ಮನೆಗಳನ್ನ ಹಡುಕಿ ಕೊಡೋದಾಗಿ ಹೇಳುವುದು, ಬೆದರಿಸುವುದು ಸಹಜವಾಗಿಬಿಟ್ಟಿದೆ. ಅದರಲ್ಲೂ ವಿಶೇಷವಾಗಿ ಮನೆ ಹುಡುಕಿ ​​ಸುಸ್ತಾಗಿ ಯವುದಾದ್ರು ಮನ ಸಿಕ್ರೆ ಸಾಕು ಎನ್ನುವವರನ್ನ ಈ ಸ್ಕ್ಯಾಮರ್‌ಗಳು ಬಳಸಿಕೊಳ್ಳುತ್ತಾರೆ. ಸ್ಪಾಟ್‌ಡ್ರಾಫ್ಟ್‌ನಲ್ಲಿನ ಉತ್ಪನ್ನದ ಹಿರಿಯ ನಿರ್ದೇಶಕ ರಾಮನಾಥ್ ಶೆಣೈ ಅವರು ಹಂಚಿಕೊಂಡ ಈ ಹಗರಣದ ಕಥೆ ನಗರದಲ್ಲಿ ವಸತಿಗಾಗಿ ಬಯಸುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಬೆಂಗಳೂರಿನಲ್ಲಿ ಮನೆ ಹುಡುಕವಾಗ ಇರಲಿ ಎಚ್ಚರ!

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಶೆಣೈ ಅವರು ತಾವು ಮನೆ ಹಗರಣದ ಬಲೆಯಲ್ಲಿ ಸಿಲುಕಿದ್ದ ಘಟನೆಯನ್ನ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂಬತ್ತು ವರ್ಷಗಳಿಂದ ನಗರದಲ್ಲಿ ಮನೆ ಹುಡುಕಾಟದ ಸಮಯಲ್ಲಿ ಅವರು, ಆಸ್ತಿ ಮಾಲೀಕರಂತೆ ನಟಿಸುವ ವಂಚಕರಗೆ ಬಲಿಯಾಗುವ ಮುನ್ನ ಸ್ವಲ್ಪ ಎಚ್ಚರವಹಿಸಿ ತಾವು ಪಾರಾದ ಘಟನೆಯನ್ನ ಬಗ್ಗೆ ವಿವರಿಸಿದ್ದಾರೆ.

ಮೊದಲು ಹಡುಕಾಟ ನಡೆಸಿದ ರಾಮನಾಥ್ ಶೆಣೈ ಅವರು ಆನ್‌ಲೈನ್ ಮೂಲಕ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ 99 ಎಕರೆಗಳಲ್ಲಿ ಬಾಡಿಗೆ ಪ್ರಾಪರ್ಟಿ ಹುಡುಕಲು ಆರಂಭಿಸಿದರು. ಏಜೆಂಟ್ ಮತ್ತು ಬ್ರೋಕರ್‌ಗಳನ್ನು ತಪ್ಪಿಸಲು, ತಪ್ಪಿಸಲು, ಅವರು ತಮ್ಮ ಹುಡುಕಾಟವನ್ನು ಕೇವಲ ಮಾಲೀಕರಿಂದ ಲಿಸ್ಟ್ ಮಾಡಲಾದ ಪ್ರಾಪರ್ಟಿಗಳನ್ನ ಫಿಲ್ಟರ್ ಮಾಡಿ ಹುಡುಕಾಟ ನೆಸಿದರು. ಅದರಲ್ಲಿ ಅವರು ಕೋರಮಂಗಲದ ಪ್ರೆಸ್ಟೀಜ್ ಪೈನ್‌ವುಡ್‌ನಲ್ಲಿರುವ 3BHK ಅಪಾರ್ಟ್‌ಮೆಂಟ್ ಬಗ್ಗೆ ಹೆಚ್ಚು ಗಮನಹರಿಸಿದ್ರು. ಆಸ್ತಿ ನಿಜವಾಗಲು ತುಂಬಾ ಚೆನ್ನಾಗಿದೆ. ಎರಡು ತಿಂಗಳ ಠೇವಣಿ ಜೊತೆಗೆ ತಿಂಗಳಿಗೆ ಕೇವಲ 30,000 ರೂ. ಬಾಡಿಗೆ ಮಾತ್ರ. ಈ ಬೆಲೆಯು ಮಾರುಕಟ್ಟೆ ದರಕ್ಕಿಂತ ಕಡಿಮೆಯಿದೆ, ಎಂದು ಭಾವಿಸಿ ಶೆಣೈ ಅವರು ಈ ಪ್ರಾರ್ಪಟಿಯನ್ನ ಆಯ್ಕೆ ಮಾಡಿದ್ರು.

ಈ ಕರಿತು ಶೆಣೈ ಅವರಗೆ ಆಸಕ್ತಿ ಇದ್ದರಿಂದ ಮಾಲೀಕರನ್ನು ಸಂಪರ್ಕಿಸಲು ಮುಂದಾದ್ರು, ಮತ್ತು ಅವರು ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು ಮತ್ತು ನೋಡಲು ಕೂಡ ವೃತ್ತಿಪರರಾಗಿ ಕಾಣಿಸಿಕೊಂದ್ದರಿಂದ ಶಣೈ ಅವು ತಮ್ಮ ವ್ಯವಹಾರವನ್ನ ಮಂದುವರೆಸಿದ್ರು. ಕೆಲಸದ ನಮಿತ್ತ ಮಂಗಳೂರಿಗೆ ಸ್ಥಳಾಂತರಗೊಂಡದ್ದು, ಆಸ್ತಿಯನ್ನ ನೋಡಿಕೊಳ್ಳುವ ಜವಬ್ದಾರಿಯುತ ಬಾಡಿಗೆದಾರನ್ನ ಹಡುಕುತ್ತಿದ್ದೇವೆ ಎಂದು ಮಾಲೀಕರು ಶಣೈ ಅವರಿಗೆ ಹೇಳಿದ್ರು. ಆದ್ರು ಶೆಣೈ ಅವರು ಆಸ್ತಿಯನ್ನ ಒಮ್ಮೆ ನೋಡೋದಾಗಿ ಹೇಳಿದಾಗ ಮಾಲೀಕರು ಮಂಗಳೂರಿನಲ್ಲಿರುವ ಕಾರಣ ವಾರಾಂತ್ಯದಲ್ಲಿ ಮತ್ರ ತೋರಿಸಲಾಗುವುದು ಎಂದರು. ಆದ್ರೂ ಮಾಲೀಕರು ಶಣೈ ಅವರ ಬಳಿ 5,000ರೂ. ಟೋಕನ್ ಪಾವತಿಯನ್ನು ವಿನಂತಿಸಿದರು.

ಎಚ್ಚರಕೆಯಿಂದ ಪಾರಾದ ಬೆಂಗಳೂರು ಟೆಕ್ಕಿ

ಮೊದಮೊದಲು ಪ್ರಾಪರ್ಟಿಗಳು ಮತ್ತು ಮಲಕರು ಸಹಜವಾಗಿಯೇ ಕಾಣುತ್ತವೆ. ಆದಾಗ್ಯೂ, ಮಂಗಳೂರಿನವರಾದ ಶೆಣೈ ಅವರು ಸ್ಥಳೀಯ ಪ್ರದೇಶಗಳ ಬಗ್ಗೆ ಮಾಲೀಕರಿಗೆ ಹಾಗೆ ಕೇಳಿದರು. ಹೀಗೆ ಮತನಾಡುವಾಗ ಮಾಲೀಕನ ಪ್ರತಿಕ್ರಿಯೆ ಅನುಮಾನಾಸ್ಪದವೆನಿಸಿತು.

ಈ ಅನಮನಗಳ ಮಧ್ಯೆ, ಶೆಣೈ ಅವರು ಯುಪಿಐ ಪಾವತಿ ವಿವರಗಳನ್ನ ಕೇಳಿದ್ರು. ಅವರು ಮಾಹಿತಿ ಪಡೆದಾಗ, ಮತ್ತಷ್ಟು ವಿಚಾರಗಳು ಹೊರಬಿದ್ದವು. ಅವರು ನೀಡಿದ ಯುಪಿಐ ವೃತ್ತಿಪರವಲ್ಲದಂದಿತ್ತು. ಸ್ವಲ್ಪ ಪಾವತಿಯನ್ನು ಮಾಡಲು ಶೆಣೈ ಅವರನ್ನು ಮಾಲೀಕರು ಒತ್ತಾಯಿಸಿದರು. ಈ ಅವಸರವನ್ನ ಗುರುತಿಸಿದ ಶೆಣೈ ಅವರಿಗೆ ಇದೊಂದು ಒಪ್ಪಂದದ ಹಗರಣ ಎಂದೆನಿಸಿತು.

ಶೆಣೈ ಅವರ ಜಾಗರೂಕತೆಯು ಅವರನ್ನು ಬಲಿಪಶುವಾಗದಂತೆ ರಕ್ಷಿಸಿತು. ಆದ್ರೂ, ಇಂತಹ ಹಗರಣಗಳು ಸಾಮಾನ್ಯವಲ್ಲ ಎಂದು ಅವರಿಗನ್ನಿಸಿತು. ವಾಸ್ತವವಾಗಿ, ಅವರ ಸ್ನೇಹಿತರುಇದೇ ರೀತಿ ಆಸ್ತಿಯನ್ನ ನೋಡಲು ಹೋಗುವಾಗ ಭೇಟಿ ಶುಲ್ಕ ಎಂದು 2,000 ರೂಪಾಯಿಗಳನ್ನು ಕಳೆದುಕೊಂಡಿರುವ ಇದೇ ರೀತಿಯ ಘಟನೆಯನ್ನು ಅವರು ವಿವರಿಸಿದರು.

ಎಲ್ಲಾ ಮನೆ ಹುಡುಕುವವರಿಗೆ ಒಂದು ಪಾಠ

ಶೆಣೈ ಅವರ ಈ ಚುರುಕುತನದಿದ ಅವರು ಮೋಸ ಹೋಗದೇ ಪಾರಾಗವಲ್ಲಿ ಸಹಾಯ ಮಾಡಿತಿ. ಆಸ್ತಿ ವಿವರಗಳನ್ನು ಪರಿಶೀಲಿಸುವುದು, ಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಮತ್ತು ಮುಂಗಡ ಪಾವತಿ ವಿನಂತಿಗಳ ಬಗ್ಗೆ ಜಾಗರೂಕರಾಗಿರುವುದರ ಬಗ್ಗೆ ಅವರು ಬಹಳ ಸೂಕ್ಷಮವಾಗಿ ಹೇಳದ್ದಾರೆ.

ಬಾಡಿಗೆ ವಂಚನೆಗಳು ಹೆಚ್ಚು ಸಾಮಾನ್ಯವಾಗುತ್ತಿರುವುದರಿಂದ , ಶೆಣೈ ಅವರುಮನೆ ಹುಡುಕುವವರಿಗೆ ಸಲಹೆಯನ್ನ ನೀಡಿದ್ರು. "ಬೆಂಗಳೂರಿನಲ್ಲಿ ಬಾಡಿಗೆ ವಸತಿಗಾಗಿ ಹುಡುಕುತ್ತಿರುವ ಪ್ರತಿಯೊಬ್ಬರೊಂದಿಗೆ ಇದನ್ನು ಹಂಚಿಕೊಳ್ಳಿ." ಸುಗಮ ಮತ್ತು ಸುರಕ್ಷಿತವಾದ ಮನೆ ಹುಡುಕುವ ಪ್ರಕ್ರಿಯೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸ್ವಲ್ಪ ಎಚ್ಚರಿಕೆಯು ಬಹಳ ಮುಖ್ಯವಾಗುತ್ತೆ ಎಂದರು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+