ಜ.1ರಿಂದ ಟೆಲಿಕಾಂ ನಿಯಮ ಬದಲು: ಜಿಯೋ, ಏರ್‌ಟೆಲ್, ವಿಐ, ಬಿಎಸ್‌ಎನ್‌ಎಲ್ ಮೇಲೆ ಪರಿಣಾಮ

ಭಾರತದಲ್ಲಿ ಮುಂದಿನ ವರ್ಷದಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಪ್ರಮುಖ ಟೆಲಿಕಾಂ ಕಂಪೆನಿಗಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ (ವಿ) ಮತ್ತು ಬಿಎಸ್‌ಎನ್‌ಎಲ್ ಸೇರಿದಂತೆ ಭಾರತದಲ್ಲಿನ ಎಲ್ಲಾ ಟೆಲಿಕಾಂ ಆಪರೇಟರ್‌ಗಳ ಮೇಲೆ ಪರಿಣಾಮ ಬೀರುವ ಟೆಲಿಕಾಂ ನಿಯಮಗಳಲ್ಲಿ ಭಾರೀ ಬದಲಾವಣೆಯು ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ಬರಲಿದೆ. ನಿಯಮ ಬದಲಾವಣೆಯ ಹೊಸ ರೈಟ್ ಆಫ್ ವೇ (RoW) ನಿಯಮಗಳು, ಇತ್ತೀಚೆಗೆ ದೂರಸಂಪರ್ಕ ಕಾಯಿದೆಯಡಿಯಲ್ಲಿ ತಿಳಿಸಲಾಗಿದೆ. ದೇಶದಾದ್ಯಂತ ಆಪ್ಟಿಕಲ್ ಫೈಬರ್ ಲೈನ್‌ಗಳು ಮತ್ತು ಟೆಲಿಕಾಂ ಟವರ್‌ಗಳ ಸ್ಥಾಪನೆಯನ್ನು ಮುಂದಿನ ವರ್ಷದಿಂದ ಸರಳಗೊಳಿಸುವ ಗುರಿಯನ್ನು ಹೊಂದಲಾಗಿದೆ. ನಿಯಮ ಬದಲಾವಣೆ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ಕಂಪೆನಿಗಳು ಕೂಡ ತಮ್ಮ ತಮ್ಮ ನೀತಿ ನಿಯಮ ಹಾಗೂ ಶುಲ್ಕ ವಿಚಾರದಲ್ಲಿ ಬದಲಾವಣೆಗೆ ಸಜ್ಜಾಗಿದೆ.

ದೂರಸಂಪರ್ಕ ಇಲಾಖೆಯ ಹೇಳಿಕೆ ಏನು?

ಏಕರೂಪದ ನೀತಿಯನ್ನು ರಚಿಸಲು ಈ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ದೂರಸಂಪರ್ಕ ಇಲಾಖೆ (DoT) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಇದಕ್ಕೆ ಸಂಬಂಧಿಸಿದ ಸೂಚನೆಯಲ್ಲಿ ಹೆಚ್ಚಿನ ಮಾಹಿತಿ ನೀಡಿರುವ ದೂರಸಂಪರ್ಕ ಇಲಾಖೆ (DoT)ಯ ಕಾರ್ಯದರ್ಶಿ ನೀರಜ್ ಮಿತ್ತಲ್, ಏಕರೂಪದ RoW ನಿಯಮಗಳು ಟೆಲಿಕಾಂ ಮೂಲಸೌಕರ್ಯದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಅದೂ ಅಲ್ಲದೆ ಭಾರತದಲ್ಲಿ 5G ತಂತ್ರಜ್ಞಾನದ ವೇಗವಾಗಿ ನಿಯೋಜನೆಯನ್ನು ಕೂಡ ಸುಲಭಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. RoW ನಿಯಮಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಲ್ಲಿ ಮೊಬೈಲ್ ಟವರ್‌ಗಳು ಮತ್ತು ಟೆಲಿಕಾಂ ಉಪಕರಣಗಳನ್ನು ಸ್ಥಾಪಿಸುವ ಮಾನದಂಡಗಳನ್ನು ರೂಪಿಸಲಿದೆ. ನಿಯಮದಲ್ಲಿ ಸಾರ್ವಜನಿಕ ಸುರಕ್ಷತೆ, ಪಾರದರ್ಶಕತೆ ಮತ್ತು ಆಸ್ತಿ ಮಾಲೀಕರು ಮತ್ತು ಟೆಲಿಕಾಂ ಆಪರೇಟರ್‌ಗಳ ನಡುವಿನ ಸಮರ್ಥ ಸಮನ್ವಯದ ಅಗತ್ಯವನ್ನು ಒತ್ತಿಹೇಳಿದೆ. ಹೊಸ ನಿಯಮಗಳು ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಡಿಜಿಟೈಸ್ ಮಾಡುತ್ತದೆ. ಅಲ್ಲದೆ ವೇಗವಾದ ಮತ್ತು ಹೆಚ್ಚು ಪಾರದರ್ಶಕ ಅನುಮೋದನೆ ವ್ಯವಸ್ಥೆಯನ್ನು ಖಚಿತಪಡಿಸಲಿದೆ. ಹಿಂದೆ, ಟೆಲಿಕಾಂ ಕಂಪನಿಗಳು ರಾಜ್ಯಗಳಾದ್ಯಂತ RoW ನೀತಿಗಳಲ್ಲಿನ ಅಸಂಗತತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಇದು ಟೆಲಿಕಾಂ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಹೊಸ ಏಕರೂಪದ ನಿಯಮಗಳು ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಟೆಲಿಕಾಂ ಪೂರೈಕೆದಾರರಿಗೆ ಸುಗಮ ವಿಸ್ತರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

ಜ.1ರಿಂದ ಟೆಲಿಕಾಂ ನಿಯಮ ಬದಲು

ಭಾರತೀಯ ಕಂಪೆನಿಗಳಿಗೆ ಹೆಚ್ಚು ಪ್ರಯೋಜನ

ಪರಿಷ್ಕೃತ ನೀತಿಯು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಮೂಲಕ ಮುಖೇಶ್ ಅಂಬಾನಿ ನೇತೃತ್ವದ ಜಿಯೋ, ಸುನಿಲ್ ಮಿತ್ತಲ್ ಅವರ ನೇತೃತ್ವದ ಭಾರ್ತಿ ಏರ್‌ಟೆಲ್, Vi, ಮತ್ತು BSNL ಸೇರಿದಂತೆ ಪ್ರಮುಖ ಟೆಲಿಕಾಂ ಕಂಪೆನಿಗಳಿಗೆ ಭಾರೀ ಗಮನಾರ್ಹವಾದ ಪ್ರಯೋಜನವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸಂಪರ್ಕವನ್ನು ಹೆಚ್ಚಿಸುವಲ್ಲಿ ಮತ್ತು ಭಾರತದ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಅನ್ನು ಹೆಚ್ಚಿಸುವಲ್ಲಿ ಇದು ನಿರ್ಣಾಯಕ ಹಂತವಾಗಿಯೂ ಕಂಡುಬರುತ್ತದೆ. ದೂರಸಂಪರ್ಕ ಕಾಯಿದೆಯಡಿ ಇತ್ತೀಚೆಗೆ ಸೂಚಿಸಲಾದ ರೈಟ್ ಆಫ್ ವೇ (RoW) ನಿಯಮಗಳನ್ನು "ಕಡ್ಡಾಯವಾಗಿ" ಅನುಸರಿಸಲು ದೂರಸಂಪರ್ಕ ಇಲಾಖೆ (DoT) ರಾಜ್ಯಗಳನ್ನು ಕೇಳಿದೆ. ಅದರಲ್ಲೂ ಅಡಾಪ್ಶನ್‌ ಪ್ರಕ್ರಿಯೆಯ ಮೂಲಕ ಹೋಗಲು ಅಗತ್ಯವಿಲ್ಲ ಎಂದು ಕೂಡ ತಿಳಿಸಿದೆ.

ನಿಯಮದಲ್ಲಿ ಭಾರೀ ಬದಲಾವಣೆ

ಹಿಂದಿನ, ರೋ ನಿಯಮಗಳು ಪ್ರತೀ ರಾಜ್ಯಗಳಲ್ಲಿ ಭಿನ್ನವಾಗಿದ್ದು, ಅಲ್ಲದೆ ಅಳವಡಿಸಿಕೊಳ್ಳುವ ವಿಚಾರದಲ್ಲಿ ಕೂಡ ಅಡೆತಡೆಗಳನ್ನು ಹೊಂದಿತ್ತು. ಪರಿಣಾಮ ವಿವಿಧ ರಾಜ್ಯಗಳು ವಿಧಿಸುವ ಶುಲ್ಕಗಳು ಭಿನ್ನವಾಗಿರುತ್ತವೆ. ಆದರೆ ಜನವರಿ 1 ರಿಂದ ಜಾರಿಗೆ ಬರುವ ಹೊಸ ನಿಯಮಗಳನ್ನು ಎಲ್ಲಾ ರಾಜ್ಯಗಳು ಏಕರೂಪವಾಗಿ ಕಾರ್ಯಗತಗೊಳಿಸಬೇಕು, ಟೆಲಿಕಾಂ ಆಪರೇಟರ್‌ಗಳು ಮತ್ತು ಮೂಲಸೌಕರ್ಯ ಪೂರೈಕೆದಾರರಿಗೆ ಟೆಲಿಕಾಂ ಟವರ್‌ಗಳನ್ನು ನಿರ್ವಹಿಸಲು ಮತ್ತು ಸ್ಥಾಪಿಸಲು ಮತ್ತು ಆಪ್ಟಿಕಲ್ ಫೈಬರ್ ಹಾಕುವಲ್ಲಿ ಉತ್ತೇಜನವನ್ನು ನೀಡುತ್ತದೆ. ಒಂದರ್ಥದಲ್ಲಿ ನೂತನ ನಿಯಮದಿಂದ ಇಡೀ ಭಾರತದಲ್ಲಿ ಒಂದೇ ರೀತಿಯ ವೆಚ್ಚ ಸೇರಿದಂತೆ ಹಲವು ವಿಧಗಳಲ್ಲಿ ಸಾರ್ವತ್ರಿಕ ಕಂಡುಬರಲಿದೆ ಎನ್ನಲಾಗಿದೆ. ಸದ್ಯ ಹಲವು ರಾಜ್ಯಗಳಲ್ಲಿ ಶುಲ್ಕ ಸೇರಿದಂತೆ ವಿವಿಧ ರೂಪಗಳಲ್ಲಿ ಬದಲಾವಣೆ ಇತ್ತು. ಮುಂದಿನ ವರ್ಷದಿಂದ ಇವುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿದೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+