ನವದೆಹಲಿ, ಏಪ್ರಿಲ್ 12: ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ದೇಶದಲ್ಲಿ ಹೂಡಿಕೆ ಮತ್ತು ಹೊಸ ಕರ್ಖಾನೆ ತೆರೆಯುವ ಯೋಜನೆಗಳ ಕುರಿತು ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಲಿಯನೇರ್ ಮಸ್ಕ್ ಏಪ್ರಿಲ್ 3ನೇ ವಾರದಲ್ಲಿ ಅಥವಾ ಏ.22 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಭೇಟಿ ವೇಳೆ ಭಾರತದ ಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ಘೋಷಣೆ ಮಾಡಲಿದ್ದಾರೆ ಪ್ರವಾಸದ ವಿವರಗಳು ಸದ್ಯ ಗೌಪ್ಯವಾಗಿಡಲಾಗಿದೆ. ಟೆಸ್ಲಾ ಸಿಇಒ ಭೇಟಿಯ ಸಮಯದಲ್ಲಿ ಇತರ ಕಾರ್ಯನಿರ್ವಾಹಕರು ಅವರ ಜೊತೆಯಲ್ಲಿರುತ್ತಾರೆ ಎಂದು ತಿಳಿದುಬಂದಿದೆ.

ಮಸ್ಕ್ ಅವರ ಯೋಜಿತ ಭಾರತ ಭೇಟಿಯ ವಿವರಗಳನ್ನು ರಾಯಿಟರ್ಸ್ ಮೊದಲು ವರದಿ ಮಾಡಿದ್ದುಈ ಬಗ್ಗೆ ಮೋದಿಯವರ ಕಚೇರಿ ಮತ್ತು ಟೆಸ್ಲಾ ಆಗಲಿ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಮಸ್ಕ್ ಅವರ ಭಾರತ ಪ್ರವಾಸದ ವೇಳೆ ಅಂತಿಮ ಅಜೆಂಡಾ ಬದಲಾಗವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕಳೆದ ವರ್ಷದ ಜೂನ್‌ನಲ್ಲಿ ಮೋದಿ ಅವರು ಅಮೇರಿಕಾದ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದ ವೇಳೆ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ 2024 ರಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಮಾತುಕತೆ ವೇಳೆ ಮಸ್ಕ್ ಪ್ರಕಟಿಸಿದ್ದರು. ಮಾತ್ರವಲ್ಲದೇ ಟೆಸ್ಲಾ ಸಂಸ್ಥೆಯೂ ಉತ್ಪಾದಿಸುತ್ತಿರುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಲು ಭಾರತಕ್ಕೆ ವಿನಂತಿಯನ್ನು ಮಾಡಿದ್ದರು.
ಇನ್ನೊಂದೆಡೆ ಸುಮಾರು $2 ಬಿಲಿಯನ್ ಹೂಡಿಕೆಯ ಅಗತ್ಯವಿರುವ ಉತ್ಪಾದನಾ ಘಟಕದ ಸೈಟ್‌ಗಳನ್ನು ನೋಡಲು ಟೆಸ್ಲಾ ಅಧಿಕಾರಿಗಳು ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು.
ಭಾರತವು ಕಳೆದ ತಿಂಗಳು ಹೊಸ ಎಲೆಕ್ರ್ಟಿಕ್ ವಾಹನ ನೀತಿಹೆ ಅನುಮೋದನೆ ನೀಡಿದೆ. ದೇಶದಲ್ಲಿ ತಯಾರಕರು ಕನಿಷ್ಠ $500 ಮಿಲಿಯನ್(4150 ಕೋಟಿ ರೂ) ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಕೆಲವು ಮಾದರಿಗಳ ಮೇಲಿನ ಆಮದು ತೆರಿಗೆಗಳನ್ನು 100% ರಿಂದ 15% ಕ್ಕೆ ಇಳಿಸಲಿದೆ. ಇದು ಭಾರತದ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಟೆಸ್ಲಾಗೆ ಇದು ವರದಾನವಾಗಲಿದೆ.
ಈ ವಾರ X ನಲ್ಲಿ ಮಸ್ಕ್ ಪೋಸ್ಟ್ ಮಾಡಿ "ಪ್ರತಿಯೊಂದು ದೇಶವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವಂತೆ ಭಾರತವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರಬೇಕು. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವುದು ಸಹಜ ಪ್ರಗತಿಯಾಗಿದೆ" ಎಂದು ಹೇಳಿದ್ದರು. ಬುಧವಾರ ಮಾಡಿರುವ X ನಲ್ಲಿ "ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ!" ಎಂದು ಹೇಳಿದ್ದಾರೆ.


Click it and Unblock the Notifications