ಥಾಯ್ಲೆಂಡ್‌ನ ಪ್ರಧಾನಿ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಪೇಟೊಂಗ್ಟಾರ್ನ್ ಶಿನವತ್ರಾ ನಾಯಕಿಯಾಗಿ ಸೇವೆ ಸಲ್ಲಿಸಿದ ಎರಡನೇ ಮಹಿಳೆ ಕೂಡಾ. ಸೆಪ್ಟಂಬರ್ ನಲ್ಲಿ ಅಧಿಕಾರಕ್ಕೆ ಏರಿದ ಪೇಟೊಂಗ್ಟಾರ್ನ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಅಗರ್ಭ ಸಿರಿವಂತರಾಗಿರುವ ಮಹಿಳಾ ಪ್ರಧಾನಿ ಶಿನವತ್ರಾ ಅವರ ಆಸ್ತಿ ವಿವರಗಳನ್ನು ಆಯೋಗದ ಬಳಿ ಘೋಷಿಸಿಕೊಂಡಿದ್ದು, ಇದು ಎಲ್ಲರನ್ನು ಒಮ್ಮೆ ಆಶ್ಚರ್ಯಕ್ಕೀಡುಮಾಡುತ್ತದೆ. ಇವರ ಎಲ್ಲ ಆಸ್ತಿಗಳನ್ನುಆಯೋಗ ಶುಕ್ರವಾರ ಸಾರ್ವಜನಿಕವಾಗಿ ಲಭ್ಯಗೊಳಿಸಿದೆ.

ಥಾಯ್ಲೆಂಡ್‌ನ ರಾಜಕೀಯ ವಲಯವು ಶಿನಾವತ್ರಾ ಕುಟುಂಬದ ಪ್ರಭಾವದಿಂದ ಕಳೆದ ಕೆಲವು ದಶಕಗಳಿಂದ ಪ್ರಭಾವಿತವಾಗಿದೆ. 38 ವರ್ಷದ ಪೇಟೊಂಗ್ಟಾರ್ನ್ ಅವರು ಬಿಲಿಯನೇರ್ ರಾಜಕಾರಣಿ ಥಕ್ಸಿನ್ ಶಿನಾವಾತ್ರ ಅವರ ಕಿರಿಯ ಪುತ್ರಿಯಾಗಿದ್ದಾರೆ. ಅಲ್ಲದೇ ಕಳೆದ 23 ವರ್ಷಗಳಲ್ಲಿ ದೇಶವನ್ನು ಮುನ್ನಡೆಸಿದ ಶಿನವತ್ರಾ ರಾಜಕೀಯ ರಾಜವಂಶದ ಮೂರನೇ ಸದಸ್ಯರಾಗಿದ್ದಾರೆ. ಪೇಟೊಂಗ್ಟಾರ್ನ್ ಅವರ ಪೂರ್ವದಲ್ಲಿದ್ದ ಇದ್ದ ಶ್ರೆತ್ತಾ ಥಾವಿಸಿನ್ ಅವರನ್ನು ನೈತಿಕತೆಯ ಪ್ರಕರಣದಲ್ಲಿ ಸಾಂವಿಧಾನಿಕ ನ್ಯಾಯಾಲಯವು ಕಚೇರಿಯಿಂದ ತೆಗೆದುಹಾಕಲ್ಪಟ್ಟ ನಂತರ ಇವರು ಪ್ರಧಾನಿ ಪಟ್ಟಕೇರಿದರು.
ಪೇಟೊಂಗ್ಟಾರ್ನ್ ಶಿನವತ್ರಾ ಆಗರ್ಭ ಶ್ರೀಮಂತಿಕೆ ಹೀಗಿದೆ ನೋಡಿ
ಸುಮಾರು 17 ಕೋಟಿ ಮೌಲ್ಯದ 200 ಡಿಸೈನರ್ ಹ್ಯಾಂಡ್ ಬ್ಯಾಗ್ , ಸುಮಾರು 43 ಕೋಟಿ ($5 ಮಿಲಿಯನ್) ಮೌಲ್ಯದ ಕನಿಷ್ಠ 75 ಐಷಾರಾಮಿ ಕೈಗಡಿಯಾರ, ವಿದೇಶಗಳಲ್ಲಿಯೂ ಆಸ್ತಿ ಇವೆಲ್ಲವೂ ಸೇರಿ ಬರೋಬ್ಬರಿ 34,000 ಕೋಟಿ ರೂಪಾಯಿ ($400 ಮಿಲಿಯನ್‌ಗಿಂತಲೂ ಹೆಚ್ಚು) ಆಸ್ತಿಯ ಒಡತಿ ಎನ್ನಲಾಗಿದೆ. ಇವೆಲ್ಲವೂ ಇವರು ಘೋಷಿಸಿಕೊಂಡಿರುವ ಆಸ್ತಿಯಾಗಿದ್ದು, ಜಪಾನ್ ಲಂಡನ್ ಸಹಿತ ಹಲವು ದೇಶಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೆ.
ಅವರ ರಾಜಕೀಯ ಪಕ್ಷವು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಆಯೋಗಕ್ಕೆ (NACC) ಸಲ್ಲಿಸಿದ ಘೋಷಣೆಯನ್ನು ಬಹಿರಂಗಪಡಿಸಿದೆ. ಬ್ಯಾಂಕಾಕ್ ಪೋಸ್ಟ್ ಪ್ರಕಾರ , ಪೇಟೊಂಗ್ಟಾರ್ನ್ ಮತ್ತು ಅವರ ಪತಿಯ ಒಟ್ಟು ಆಸ್ತಿ 13.99 ಶತಕೋಟಿ ಬಹ್ತ್ ಆಗಿದೆ. ಪ್ರಧಾನ ಮಂತ್ರಿ 13.84 ಬಿಲಿಯನ್ ಬಹ್ತ್, ಅವರ ಪತಿ ಪಿಟಾಕಾ ಸುಕ್ಸಾವತ್ 141.11 ಮಿಲಿಯನ್ ಬಹ್ತ್ ಮತ್ತು ಅವರ ಮಕ್ಕಳು 500,000 ಬಹ್ತ್ ಹೊಂದಿದ್ದಾರೆ. ಅವರ ತಂದೆ ಥಸ್ಕಿನ್ ಬಳಿಯೂ ಕೂಡ 21 ಸಾವಿರ ಕೋಟಿಗೂ ಆಧಿಕ ಆಸ್ತಿಯಿರುವುದನ್ನು ಹೇಳಿಕೊಂಡಿದ್ದಾರೆ.
2.72 ಸಾವಿರ ಕೋಟಿ ಹೂಡಿಕೆ (3.18 ಲಕ್ಷ ಡಾಲರ್) ಹೂಡಿಕೆ ಮಾಡಿದ್ದು. ಜತೆಗೆ ಇವರ ಬಳಿ 2.76 ಕೋಟಿ. ರೂ. ನಗದು ಇದೆ ಎಂಡು ಘೋಷಿಸಿಕೊಂಡಿದ್ದು, ಇದರ ಜೊತೆಗೆ ಐದು ಶತಕೋಟಿ ಬಹ್ತ್‌ನಷ್ಟು ಸಾಲ ಹೊಂದಿದ್ದಾರೆ ಎನ್ನಲಾಗಿದೆ. ಇವರ ಬಳಿ 23 ಐಷಾರಾಮಿ ವಾಹನಗಳ ಸಂಗ್ರಹವು ಒಳಗೊಂಡಿದ್ದು 10.6 ಮಿಲಿಯನ್ ಬಹ್ತ್ ಮೌಲ್ಯದ ಬೆಂಟ್ಲಿ ಮತ್ತು 6.7 ಮಿಲಿಯನ್ ಬಹ್ತ್ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಒಳಗೊಂಡಿದೆ.
ಒಂದು ಕಾಲದಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಅನ್ನು ಹೊಂದಿದ್ದ ಮಾಜಿ ಪ್ರಧಾನ ಮಂತ್ರಿಗಳಾಗಿವರ ಇವರ ತಂದೆ ಮತ್ತು ಪೂರ್ವವರ್ತಿ ತಕ್ಸಿನ್ ಅವರು $2.1 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಫೋರ್ಬ್ಸ್ ಪ್ರಕಾರ, ಅವರು ಥೈಲ್ಯಾಂಡ್ನಲ್ಲಿ 10 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
1980 ಮತ್ತು 1990 ರ ದಶಕದಲ್ಲಿ ಮೊಬೈಲ್ ಫೋನ್ ಸೇವೆಗಳು, ಡೇಟಾ ನೆಟ್‌ವರ್ಕ್‌ಗಳು ಮತ್ತು ಉಪಗ್ರಹಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಥಾಕ್ಸಿನ್ ಅಪಾರ ಸಂಪತ್ತು ಗಳಿಸಿಕೊಂಡಿದ್ದಾರೆ. ಥಾಕ್ಸಿನ್ ತನ್ನ ಶಿನ್ ಕಾರ್ಪ್ ಟೆಲಿಕಮ್ಯುನಿಕೇಶನ್ ಸಾಮ್ರಾಜ್ಯದಿಂದ ಗಳಿಸಿದ ಸಂಪತ್ತನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದು, ಮತ್ತು ದಂಗೆಯಲ್ಲಿ ಹೊರಹಾಕಲ್ಪಟ್ಟ ನಂತರ ಅವನ ದೇಶಭ್ರಷ್ಟ ಅಪಾದನೆಯ ಹೊರತಾಗಿಯೂ ಇವರ ಕುಟುಂಬವು ಥಾಯ್ಲೆಂಡ್‌ನ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿಯೇ ಉಳಿದಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications