ಕೈತುಂಬಾ ಸಂಬಳವನ್ನು ತ್ಯಜಿಸಿ ಸ್ವಂತ ಉದ್ಯೋಗ ಆರಂಭಿಸಿದ ಹಾಗೂ ಆರಂಭಿಸುತ್ತಿರುವ ಅನೇಕರು ಉದಾಹರಣೆಗಳನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಅದೇ ರೀತಿ ವಿದೇಶಗಳಲ್ಲಿ ಕೂಡ ಉತ್ತಮವನ್ನು ವೇತನವನ್ನು ಪಡೆಯುತ್ತಿದ್ದವರು, ಕೊನೆಗೆ ಕೆಲಸ ತ್ಯಜಿಸಿ ಭಾರತಕ್ಕೆ ಮರಳಿ, ತಮ್ಮದೇ ಆದ ಸ್ಟಾರ್ಟಪ್ ಆರಂಭಿಸಿದವರ ಬಗ್ಗೆ ಕೂಡ ನಾವು ತಿಳಿದುಕೊಂಡಿದ್ದೇವೆ. ಆದರೆ ಮುಂಬೈಯಲ್ಲೊಬ್ಬರ ಐಟಿ ಟೆಕ್ಕಿಯೊಬ್ಬರು ವಾರ್ಷಿಕವಾಗಿ ಬರೊಬ್ಬರಿ 1 ಕೋಟಿ ರೂ. ವರೆಗೆ ಸಂಬಳ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಕೈಯಲ್ಲಿ ಯಾವುದೇ ನೌಕರಿ ಆಫರ್ ಇಲ್ಲದೇ ಯಾವುದೇ ಪ್ಲ್ಯಾನ್ ಇಲ್ಲದೇ ಕೆಲಸವನ್ನು ತ್ಯಜಿಸಿ, ಹೆಚ್ಚು ಸುದ್ದಿಯಾಗಿದ್ದಾರೆ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದರಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ರೂ. ವರೆಗೆ ಸಂಪಾದಿಸುತ್ತಿದ್ದ ಮುಂಬೈ ಮೂಲದ ವರುಣ್ ಹಸೀಜಾ ಎಂಬವರು ಇದೀಗ ಯಾವುದೇ ಕಾರಣ ಹಾಗೂ ಬೇರೆ ಸ್ಟಾರ್ಟಪ್ ಆರಂಭಿಸುವ ಯೋಜನೆಗಳನ್ನು ಕೂಡ ಹಾಕದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 10 ವರ್ಷಗಳ ಕಾಲ ಅನುಭವ ಹೊಂದಿರುವ ವರುಣ್ ಅವರು ಹಲವು ವರ್ಷಗಳ ಕಾಲ ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸಿದ್ದು, ಅಕ್ಟೋಬರ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಸರಿಯಾದ ನಿರ್ಧಾರವೇ?
ಬಹುಷಃ ಇಷ್ಟು ಓದಿದ ಮೇಲೆ ಸಾಮಾನ್ಯವಾಗಿ ಎಲ್ಲರಲ್ಲೂ ವರುಣ್ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಲಾರರು. ಆದರೆ ವರುಣ್ ನೀಡುವ ಉದಾಹರಣೆಗಳೊಂದಿಗೆ ತಾಳೆ ಹಾಕಿ ನೋಡಿದರೆ ಉತ್ತಮ ನಿರ್ಧಾರವೆಂದು ಅನಿಸುತ್ತದೆ. ಇನ್ನು 30ರ ಹರೆಯದ ವರುಣ್ ಈಗಾಗಲೇ ವಿವಾಹಿತರಾಗಿದ್ದು, ಅಷ್ಟೇ ಪ್ರಾಯದ ಪತ್ನಿ ಡಾ. ಮೋಕ್ಷದ ಮಂಚಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 10 ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ನಿರ್ವಹಿಸಿದ್ದ ವರುಣ್ ಉತ್ತಮ ವೇತನ ನೀಡುತ್ತಿದ್ದ ಕಂಪೆನಿಗೆ ಗುಡ್‌ಬೈ ಹೇಳಿದ್ದಾರೆ. ಸಾಮಾನ್ಯವಾಗಿ ಬಹುತೇಕರು ಇಷ್ಟು ಉತ್ತಮ ವೇತನ ನೀಡುತ್ತಿದ್ದ ಕೆಲಸವನ್ನು ತ್ಯಜಿಸಲು ಕೂಡ ಹಿಂದೆ ಮುಂದೆ ನೋಡುವುದು ಕೂಡ ಸಾಮಾನ್ಯ. ಒಂದು ವೇಳೆ ಸ್ವಂತ ಉದ್ಯೋಗವನ್ನು ಆರಂಭಿಸುವ ಯೋಜನೆ ಹೊಂದಿದ್ದವರು ಕೂಡ ಈ ರೀತಿಯ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದು ತುಸು ತ್ರಾಸದಾಯಕ ನಿರ್ಧಾರ. ಆದರೆ ವರುಣ್ ಮಾತ್ರ ಎಲ್ಲರಿಗಿಂತ ಭಿನ್ನರಾಗಿದ್ದಾರೆ. ಅನ್ಯ ಉದ್ಯೋಗ ಇಲ್ಲವೆ ಇತ್ತ ಉದ್ಯಮ ಸ್ಥಾಪಿಸುವ ಹಂಬಲ ಕೂಡ ಇಲ್ಲದೆ ಟೆಕ್ಕಿ ಕೆಲಸಕ್ಕೆ ಗುಡ್‌ಬೈ ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ.

ನಿವೃತ್ತಿಯ ನಿರ್ಧಾರ ಹೇಗಿತ್ತು?
ಸದ್ಯ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರುಣ್, ಪತ್ನಿ ಹಾಗೂ ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವಷ್ಟೇ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ಬಗ್ಗೆ ವಿವರವಾಗಿ ಟ್ವೀಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ. "ಯಾವುದೇ ಯೋಜನೆ ಇಲ್ಲ. ಬ್ಯಾಕಪ್ ಇಲ್ಲ. ನನ್ನ ದಶಕದ ಸುದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನನಗೆ ವಿರಾಮ ಬೇಕು ಎಂಬ ನಿರ್ಧಾರ ಮಾತ್ರ ನನ್ನ ಮನಸ್ಸಿನಲ್ಲಿ ದೃಢವಾಗಿತ್ತು. ಇದಕ್ಕಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಮ್ಡಿದ್ದೆ. ಮೊದಲನೆಯದಾಗಿ ಕುಟುಂಬವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಮೊದಲ ಹೆಜ್ಜೆಯಾಗಿತ್ತು. ನಂತರ ಎಕ್ಸೆಲ್ ಶೀಟ್ ತಯಾರಿಸಿಕೊಂಡೆ. ಮುಂದಿನ ಎರಡು ಮೂರು ತಿಂಗಳ ಕಾಲ ನಾನು-ನನ್ನ ಪತ್ನಿ ನಮ್ಮ ದೊಡ್ಡ ಮತ್ತು ಸಣ್ಣ ಎಲ್ಲಾ ಖರ್ಚುಗಳನ್ನು ಟ್ರ್ಯಾಕ್ ಮಾಡಿಕೊಂಡೆವು.
ಜೀವನಕ್ಕೆ ಅಗತ್ಯವಿರುವ ಮೂಲಭೂತ ಸಂಗತಿಗಳ ಪಟ್ಟಿ ತಯಾರಿಸಿದೆನು. ಬಾಡಿಗೆ, ತಿಂಗಳ ದಿನಸಿ ಸಾಮಾಗ್ರಿ, ಊಟ, ಪ್ರಯಾಣ ಮುಂತಾದ ಸಂಗತಿಗಳನ್ನು ಅಧ್ಯಯನ ಮಾಡಿ, ಅವುಗಳ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದೆನು. ನಿವೃತ್ತಿಯ ನಿರ್ಧಾರವು ಹಠಾತ್ ಆಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಅಲ್ಲದೆ ಸದ್ಯ ನಿವೃತ್ತಿಯ ಬಳಿಕ ವರುಣ್ ಅವರು ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದು, ಈ ಹಿಂದೆ ಕೆಲಸದ ಅವಧಿಯಲ್ಲಿ ಅನುಭವಿಸುತ್ತಿದ್ದ ಮಾನಸಿಕ ಒತ್ತಡದಿಂದ ಮುಕ್ತರಾಗಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಇಂದಿನ ಹಣದುಬ್ಬರದ ಸಮಯದಲ್ಲಿ ಉತ್ತಮ ವೇತನದ ಕೆಲಸಕ್ಕೆ ಗುಡ್‌ಬೈ ಹೇಳಿ, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ವರುಣ್ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಗೋಚರಿಸುತ್ತದೆ.
ಸಾಲ ಹೊಂದಿಲ್ಲದಿರುವುದು ನೆರವು!
ನಾನು ಆರು ತಿಂಗಳ ವಿರಾಮಕ್ಕಾಗಿ ಯೋಜಿಸಿದ್ದೆ, ಆದರೆ ಮಾರುಕಟ್ಟೆಯು ಈಗ ಹೇಗಿದೆ ಎಂಬುದನ್ನು ಪರಿಗಣಿಸಿ, ನಾವು ಇನ್ನೊಂದು ಆರು ತಿಂಗಳನ್ನು ಬಫರ್ ಆಗಿ ಸೇರಿಸಿದ್ದೇವೆ. ಹೌಸಿಂಗ್ ಲೋನ್ ಹೊಂದಿಲ್ಲದಿರುವುದು ನಮ್ಮ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಪ್ಯಾನ್ಸಿ ಟ್ರಿಪ್ , ಲಕ್ಸುರಿ ಲೈಫ್ ಸ್ಟೈಲ್ ನಿಂದ ಹೊರಬಂದು ಬೇಸಿಕ್ ಆಗಿರುವ ಜೀವನ ಶೈಲಿ ಅಳವಡಿಸಿಕೊಂಡೆವು. ಹೀಗಾಗಿ ನಾವು ಇನ್ನೂ ಆರಾಮದಾಯಕವಾಗಿದ್ದೇವೆ. ಜೀವನದಲ್ಲಿ ಏನಾದ್ರೂ ತಿರುವು , ದೊಡ್ಡ ಖರ್ಚು ಬಂದರೆ ನಾವು ನಮ್ಮ ಹೂಡಿಕೆಗಳನ್ನು ಹಿಂತೆಗೆಯಬಹುದು ಎಂದು ಯೋಜಿಸಿದ್ದೆವು.ರಾಜೀನಾಮೆ ಇಮೇಲ್ ಕಳುಹಿಸುವುದು ಸುಲಭವಲ್ಲ. ಸ್ಥಿರತೆಯಿಂದ ದೂರ ಹೋಗುವುದು ಕಷ್ಟ ಎನ್ನುತ್ತಾರೆ ಹಸಿಜಾ .
ಹಸಿಜಾ ಅವರು ಕಳೆದ ಎರಡು ತಿಂಗಳಿನಿಂದ ಹೆಚ್ಚು ಜಾಗರೂಕತೆಯಿಂದ ಖರ್ಚು ಮಾಡುತ್ತಿದ್ದಾರೆ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಳಜಿ ವಹಿಸುತ್ತಿದ್ದಾರೆ ಮತ್ತು ಅವರ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ.
ವೃತ್ತಿ ವಿರಾಮಕ್ಕಾಗಿ ಹಸಿಜಾ ನೀಡಿರುವ ಸಲಹೆ:
ದೊಡ್ಡ ಖರ್ಚುಗಳು ಇರಬಾರದು: ವೃತ್ತಿ ವಿರಾಮಕ್ಕೆ ಮುನ್ನ ಯಾವುದೇ ದೊಡ್ಡ ಹಣಕಾಸಿನ ಕಮಿಟ್ ಮೆಂಟ್ ಗಳು ಇಲ್ಲದೆ ಇರುವುದು ಮುಖ್ಯ.
ಕುಟುಂಬದೊಂದಿಗೆ ಮಾತನಾಡಿ: ವೃತ್ತಿ ವಿರಾಮದ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಮುಂಚಿತವಾಗಿ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಒತ್ತಡವನ್ನು ಕಡಿಮೆ ಮಾಡಿ: ಕುಟುಂಬದೊಂದಿಗೆ ಮಾತನಾಡುವುದರಿಂದ ವಿರಾಮದ ಬಗ್ಗೆ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ.
ಹಣಕಾಸು ಯೋಜನೆ: ವಿರಾಮದ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗದಂತೆ ಮುಂಚಿತವಾಗಿ ಯೋಜನೆ ಮಾಡಿ.
ಬಫರ್ ನೀಡಿ: ಅನಿರೀಕ್ಷಿತ ಖರ್ಚುಗಳಿಗಾಗಿ ಸ್ವಲ್ಪ ಹೆಚ್ಚು ಹಣವನ್ನು ಸಂಗ್ರಹಿಸಿಡಿ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ



Click it and Unblock the Notifications