ನವದೆಹಲಿ, ಜುಲೈ 2: ಅಂಬಾನಿ ಕುಟುಂಬದಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಮದುವೆಗಾಗಿ ತಯಾರಿ ಜೋರಾಗಿ ನಡೆಯುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರನ ವಿವಾಹಕ್ಕಾಗಿ ಕುಟುಂಬವು ಅವಿರತವಾಗಿ ಶ್ರಮಿಸುತ್ತಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಹಾಗೂ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಈ ಜೋಡಿಯ ಲಗ್ನ ಪತ್ರಿಕೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂಬಾನಿ ಕುಟುಂಬದ ವಿವಾಹ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದ್ದು ಅನಂತ್ ಮತ್ತು ರಾಧಿಕಾ ಮದುವೆ ಅಂಗವಾಗಿ ಹಲವು ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ.

ಜುಲೈ 2 ರಂದು ಸಂಜೆ ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಲಿದೆ. ಬಡ ಕುಟುಂಬದ ಹಲವು ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಮುಕೇಶ್ ಅಂಬಾನಿ ಕುಟುಂಬದ ಸದಸ್ಯರು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಡೆದ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದವರು ಅಕ್ಕಪಕ್ಕದ ಹಳ್ಳಿಗಳ ಜನರಿಗೆ ಭೋಜನ ಕೂಟ ನಡೆಸಿತ್ತು.
ಇದೀಗ ಮತ್ತೊಂದು ಸುತ್ತಿನ ವಿವಾಹ ಪೂರ್ವ ಆಚರಣೆಗಳ ಅಂಗವಾಗಿ ಜುಲೈ 2 ರಂದು ಬಡ ಕುಟುಂಬದ ಹಲವು ಜೋಡಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಈಗಾಗಲೇ ವೈರಲ್ ಆಗಿದೆ.
ಇನ್ನು ಅನಂತ್ ಅವರ ವಿವಾಹವು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರೊಂದಿಗೆ ಜುಲೈ 12 ರಂದು ನಡೆಯಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಹಿಂದೂ ವೈದಿಕ ಪದ್ಧತಿಗಳಂತೆ ನೆರವೇರಲಿದೆ. ಮೂರು ದಿನಗಳ ಕಾಲ ವಿವಾಹ ಮಹೋತ್ಸವ ನಡೆಯಲಿದೆ. ಜುಲೈ 12 ರಂದು ಮುಖ್ಯ ಕಾರ್ಯಕ್ರಮ 'ಶುಭ ವಿವಾಹ' ದೊಂದಿಗೆ ಆಚರಣೆಗಳು ಪ್ರಾರಂಭವಾಗುತ್ತವೆ. ಇದು ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು ಜುಲೈ 14 ರಂದು ಮಂಗಲ್ ಉತ್ಸವ, ವಿವಾಹದ ಆರತಕ್ಷತೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ಜಾಮ್‌ನಗರದಲ್ಲಿ ಹಿಂದಿನ ವಿವಾಹಪೂರ್ವ ಕಾರ್ಯಕ್ರಮಗಳು ಸ್ಟಾರ್-ಸ್ಟಡ್ ಆಗಿತ್ತು. ಇದರಲ್ಲಿ ಜಾಗತಿಕ ಉದ್ಯಮಿ ನಾಯಕರು, ರಾಜಕೀಯ ವ್ಯಕ್ತಿಗಳು ಮತ್ತು ಹಾಲಿವುಡ್ ಮತ್ತು ಬಾಲಿವುಡ್‌ನ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಮದುವೆಗೆ ಕರೆಯೊಲೇಯ ಆಹ್ವಾನದ ವಿಡಿಯೋ ವೈರಲ್ ಆಗಿದೆ. ಮೊದಲ ಲಗ್ನಪತ್ರಿಕೆಯನ್ನು ವಾರಾಣಸಿಯಲ್ಲಿ ಕಾಶಿ ವಿಶ್ವನಾಥನ ಪಾದಕ್ಕೆ ನೀತಾ ಅಂಬಾನಿ ಇಟ್ಟು ಆಶೀರ್ವಾದ ಪಡೆದಿದ್ದರು.


Click it and Unblock the Notifications