ಬೆಂಗಳೂರು, ಫೆಬ್ರವರಿ 14: ಆರ್. ತ್ಯಾಗರಾಜನ್, ಓರ್ವ ದಾರ್ಶನಿಕ ಭಾರತೀಯ ವ್ಯಾಪಾರ ಉದ್ಯಮಿ. ವಿನಮ್ರವಾಗಿಯೇ ಆರಂಭವಾದ ಅವರ ಪಯಣ ಬೆರಗುಗೊಳಿಸುವಂತಹ ಶಿಖರ ತಲುಪಿದೆ. ವ್ಯವಹಾರ ಸಾಮ್ರಾಜ್ಯದಲ್ಲಿ ಅವರು ಆರ್ಥಿಕತೆಯಲ್ಲಿ ಸದೃಢರಾಗಿರುವುದು ಮಾತ್ರವಲ್ಲದೆ ಮಾನವೀಯತೆಯೆಡೆಗೆ ಅವರಿಗಿರುವ ಬದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ. ಹಣಕಾಸು ಉದ್ಯಮದಲ್ಲಿ ಖ್ಯಾತರಾಗಿರುವ ಆರ್ ತ್ಯಾಗರಾಜನ್ ಲೋಕೋಪಕಾರಿಯೂ ಆಗಿದ್ದಾರೆ.
ಶ್ರೀರಾಮ್ ಗ್ರೂಪ್‌ನ ಸಂಸ್ಥಾಪಕರಾದ ಆರ್. ತ್ಯಾಗರಾಜನ್ ಅವರು ಮೂಲತಃ ತಮಿಳುನಾಡಿನ ಸಮೃದ್ಧ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು. ಶ್ರೀರಾಮ್ ಗ್ರೂಪ್ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹಣಕಾಸು ಸೇವೆಗಳ ಸಮೂಹವಾಗಿದೆ. ಈ ಸಂಸ್ಥೆಯನ್ನು ಎ.ವಿ.ಎಸ್ ರಾಜಾ ಮತ್ತು ಟಿ. ಜಯರಾಮನ್ ಜೊತೆ ಸೇರಿ 1974 ರಲ್ಲಿ ಆರ್. ತ್ಯಾಗರಾಜನ್ ಸ್ಥಾಪಿಸಿದರು. ಆರಂಭದಲ್ಲಿ, ಈ ಕಂಪನಿಯು ಚಿಟ್ ಫಂಡ್ ವ್ಯವಹಾರದೊಂದಿಗೆ ಪ್ರಾರಂಭವಾಯಿತಾದರೂ ನಂತರ ಅದು ಸಾಲ ನೀಡುವ ದೈತ್ಯ್ ಸಂಸ್ಥೆಯಾಗಿ ಬದಲಾಯಿತು.

ಆರ್ ತ್ಯಾಗರಾಜನ್ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯದ ಕಡಿಮೆ ಆದಾಯದವನ್ನು ಹೊಂದಿರುವವರಿಗೆ ಸಾಲ ನೀಡುವ ಮೂಲಕ ಮುಂದೆ 87,000 ಕೋಟಿ ರೂ.ಗಳ ಬೃಹತ್ ಶ್ರೀರಾಮ್ ಸಮೂಹವನ್ನು ನಿರ್ಮಿಸಿದರು.
ಆರ್ .ತ್ಯಾಗರಾಜನ್ ಉದ್ಯಮದಲ್ಲಿ ಯಶಸ್ವಿ ಕಂಡರೂ, ಸಾಮಾನ್ಯವಾಗಿ ಅತ್ಯಂತ ಯಶಸ್ವಿ ಉದ್ಯಮಿಗಳಿಗಿಂತ ಸ್ವಲ್ಪ ಭಿನ್ನವಾಗಿ ಬದುಕುತ್ತಾರೆ. ಯಾಕೆಂದರೆ ಅವರ ಗಮನವು ಕೇವಲ ಸಂಪತ್ತನ್ನು ಕ್ರೋಢೀಕರಿಸುವುದರ ಮೇಲಿಲ್ಲ. ಆರ್ ತ್ಯಾಗರಾಜನ್ ಮಿತವ್ಯಯಯಾಗಿದ್ದು ತಮ್ಮ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ್ದಾರೆ. ಅವರ ಓಡಿಸಿದ್ದು 6 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮಾತ್ರ ಅಂದರೆ ನಂಬಲೇಬೇಕು.
ಬ್ಲೂಮ್‌ಬರ್ಗ್‌ನೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಆರ್ ತ್ಯಾಗರಾಜನ್ ಅವರು "ಸಾಲದ ಇತಿಹಾಸವಿಲ್ಲದವರಿಗೆ ಹಣವನ್ನು ಸಾಲವಾಗಿ ನೀಡುವುದು ಅಪಾಯಕಾರಿ ಅಲ್ಲ ಎಂದು ಸಾಬೀತುಪಡಿಸಲು ಕಂಪನಿಯನ್ನು ಪ್ರಾರಂಭಿಸಿದರು" ಎಂದು ಬಹಿರಂಗಪಡಿಸಿದ್ದರು. ಪ್ರಸ್ತುತ, ಆರ್ ತ್ಯಾಗರಾಜನ್ ಅವರ ಶ್ರೀರಾಮ್ ಗ್ರೂಪ್ 1,00,000 ಮಂದಿ ಸಿಬ್ಬಂದಿಗಳಿದ್ದಾರೆ. ಅವರ ಕಂಪನಿಯು ಟ್ರಕ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳ ಖರೀದಿಗೆ, ಸಮಾಜದ ಬಡ ವಲಯಕ್ಕೆ ಸಾಲವನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ.
ತಮಿಳುನಾಡಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ಜನಿಸಿದ್ದ ಆರ್. ತ್ಯಾಗರಾಜನ್ ಗಣಿತದಲ್ಲಿ ಪದವಿ ಪಡೆದಿದ್ದಾರೆ. ಇದಾದ ಬಳಿಕ ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1961 ರಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯೊಂದಿಗೆ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ನಂತ ಹಲವಾರು ಹಣಕಾಸು ಕಂಪನಿಗಳಲ್ಲಿ ಉದ್ಯೋಗಿಯಾಗಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದರು. ತಮ್ಮ 37 ನೇ ವಯಸ್ಸಿನಲ್ಲಿ ಉದ್ಯಮಶೀಲತೆಯನ್ನು ಆರಂಭಿಸಿದ್ದು, ಇಂದು ಈ ಗ್ರೂಪ್ ಸುಮಾರು 30 ಅಂಗಸಂಸ್ಥೆಗಳನ್ನು ಹೊಂದಿದೆ.
ಆರ್ ತ್ಯಾಗರಾಜನ್ ಅವರು ಈವರೆಗೆ ಸುಮಾರು 6,210 ಕೋಟಿ ರೂ.ಗೂ ಹೆಚ್ಚು ಹಣವನ್ನು ದಾನವಾಗಿ ನೀಡಿದ್ದಾರೆ. ಅವರು ತಮ್ಮ ಎಲ್ಲಾ ಷೇರುಗಳನ್ನು ಉದ್ಯೋಗಿಗಳ ಗುಂಪಿಗೆ ನೀಡಿದ್ದು, ಅವರು ಸಂಪೂರ್ಣ ಹಣವನ್ನು ಶ್ರೀರಾಮ್ ಮಾಲೀಕತ್ವದ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ.
86ರ ಹರೆಯದ ತ್ಯಾಗರಾಜನ್ ಸಾಧಾರಣ ಜೀವನಶೈಲಿಯೊಂದಿಗೆ ಬದುಕುತ್ತಿದ್ದು, ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ. ಸರಳವಾದ ಕಾರನ್ನು ಓಡಿಸುತ್ತಾರೆ. ಇದಕ್ಕಿಂತಲೂ ಅಶ್ಚರ್ಯವಾದ ವಿಚಾರವೆಂದರೆ ಅವರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಕಂಪನಿಯು 23 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು ಈ ಗ್ರೂಪ್ ನ ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು ಸುಮಾರು 865 ಬಿಲಿಯನ್ ಆಗಿದೆ.


Click it and Unblock the Notifications