ಬೆಂಗಳೂರು, ಮಾರ್ಚ್ 3: ಭಾರತೀಯ ಸ್ಟಾರ್ಟಪ್ ವಲಯದಲ್ಲಿ ಫಣೀಂದ್ರ ಸಮಾ ಅವರದ್ದು ಹೆಚ್ಚು ಚಿರಪರಿಚಿತವಾದ ಹೆಸರು. ಫಣೀಂದ್ರ ಸಮಾ ಅವರು ಹೆಚ್ಚಿನವರಿಗೆ ಬಸ್ ಟಿಕೆಟ್ ಪ್ಲಾಟ್‌ಫಾರಂ ರೆಡ್‌ಬಸ್‌ನ ಮಾಲೀಕರಾಗಿ ಗೊತ್ತು. ಆದರೆ, ಅವರು ತೆಲಂಗಾಣ ರಾಜ್ಯದಲ್ಲಿ ಚೀಫ್ ಇನ್ನೋವೇಷನ್ ಆಫೀಸರ್ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.
ಫಣೀಂದ್ರ ಸಮಾ ಅವರು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಲ್ಲಿ ಓದಿದ್ದಾರೆ. ಅವರು ಪದವಿ ಮಾಡುತ್ತಿರಬೇಕಾದರೆ, ಪಸುಪುನೂರಿ ಹಾಗೂ ಚರಣ್ ಪದ್ಮರಾಜು ಅವರನ್ನು ಭೇಟಿಯಾಗಿದ್ದು, ಬಳಿಕ ಆ ಮೂವರು ಉತ್ತಮ ಗೆಳೆಯರಾಗಿದ್ದಾರೆ. ಮುಂದೆ ರೆಡ್‌ಬಸ್ ಅನ್ನು ಸ್ಥಾಪಿಸುವ ಮೊದಲು ಮೂವರು ಕೂಡ ಬೇರೆ-ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ರೆಡ್‌ಬಸ್ ಕಂಪೆನಿಯು 69,85,00,00,000 ರೂ.ಗಳ ನಿವ್ವಳ ಆಸ್ತಿ ಹೊಂದಿದೆ. ಸುಧಾಕರ್, ಫಣೀಂದ್ರ ಹಾಗೂ ಚರಣ್ ಅವರು 2006ರಲ್ಲಿ ರೆಡ್‌ಬಸ್‌ನ್ನು 5ಲಕ್ಷ ರೂ.ನೊಂದಿಗೆ ಆರಂಭಿಸುವುದಕ್ಕೆ ಯೋಜನೆ ರೂಪಿಸಿದ್ದರು. ಜನರು ಹಬ್ಬದ ಸೀಸನ್‌ಗಳಲ್ಲಿ ಟಿಕೆಟ್ ಬುಕ್ ಮಾಡುವುದಕ್ಕೆ ಪರದಾಡುತ್ತಿರುವುದನ್ನು ಮನಗಂಡು ರೆಡ್‌ಬಸ್‌ನ್ನು ಪ್ರಾರಂಭಿಸಿದ್ದಾರೆ.
2013ರಲ್ಲಿ ರೆಡ್‌ಬಸ್‌ನ್ನು ಸೌತ್ ಆಫ್ರಿಕಾದ ನಾಸ್ಪರ್ಸ್ ಹಾಗೂ ಚೀನಾದ ಟೆನ್‌ಸೆಂಟ್‌ನ ಜಂಟಿ ಉದ್ಯಮವಾದ ಐಬಿಬೋ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ. ಆ ದಿನಗಳಲ್ಲಿ ಸ್ಟಾರ್ಟಪ್ ವಲಯದಲ್ಲಿ ಸಾಗರೋತ್ತರವಾಗಿ ನಡೆದ ಬಹುದೊಡ್ಡ ಡೀಲ್ ಇದಾಗಿತ್ತು. ಆಗ ಬರೋಬ್ಬರಿ 828 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿತ್ತು.
ಫಣೀಂದ್ರ ಸಮಾ ಅವರು ರೆಡ್‌ಬಸ್ ಅನ್ನು ಪ್ರಾರಂಭಿಸಿ ಭಾರತದ ಟಿಕೆಟ್ ಬುಕ್ಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ತಮ್ಮ ಸ್ವಂತ ಉದ್ಯಮ ಸ್ಥಾಪಿಸುವ ಮೊದಲು ಸಮಾ ಅವರು ಟೆಕ್ಸಾಸ್ ಇನ್ಸುಟ್ರೂಮೆಂಟ್ಸ್‌ನಲ್ಲಿ ಇಂಟಿಗ್ರೇಟೆಡ್ ಸೆಕ್ಯೂರಿಟಿಗಳ ವಿನ್ಯಾಸಕರಾಗಿ ಕೆಲಸ ಮಾಡಿದ್ದರು. ರೆಡ್‌ಬಸ್ 2007ರಲ್ಲಿ ಮೊದಲ ಫಂಡಿಂಗ್ ರೂಪದಲ್ಲಿ ಒಂದು ಮಿಲಿಯನ್ ಡಾಲರ್‌ನ್ನು ಪಡೆದುಕೊಂಡಿತ್ತು.
ಆದರೆ ಕೆಲವು ದೊಡ್ಡ ಕಂಪನಿಗಳ ಹೂಡಿಕೆಯಿಂದಾಗಿ ರೆಡ್‌ಬಸ್ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಕಂಪೆನಿಯಾಗಿ ಗುರುತಿಸಿಕೊಂಡಿತ್ತು. ರೆಡ್‌ಬಸ್ ಮಾರಾಟವಾದ ಬಳಿಕವೂ ಫಣೀಂದ್ರ ಸಮಾ ಅವರು ರೆಡ್‌ಬಸ್ ಜತೆ ಕೆಲಸ ಮಾಡಿಕೊಂಡಿದ್ದರು. ಬಳಿಕ ಅವರು ಬೇರೆ ವೆಂಚರ್‌ಗೆ ಸೇರಿಕೊಂಡಿದ್ದಾರೆ.
ಇನ್ನೊಂದೆಡೆ ಫಣೀಂದ್ರ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಂದೆ ಅವರು ತೆಲಂಗಾಣ ಸರ್ಕಾರಡ ಇ-ಆಡಳಿತ ವ್ಯವಸ್ಥೆ ಸುಧಾರಣೆಗೆ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಆ ಮೂಲಕ ಚೀಫ್ ಇನ್ನೋವೇಷನ್ ಆಫೀಸರ್ ಆಗಿ ನಾವೀನ್ಯ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡುತ್ತಿದ್ದಾರೆ.


Click it and Unblock the Notifications