ನವದೆಹಲಿ, ಮಾರ್ಚ್ 19: ನಮ್ಮ ನಡುವೆ ತೀರಾ ಕೆಳಹಂತದಿಂದ ಬೆಳೆದು ಮಹಾನ್ ಸಾಧನೆ ಮಾಡಿದ ಅನೇಕ ಉದ್ಯಮಿಗಳಿದ್ದಾರೆ. ಇವರೆಲ್ಲರೂ ಒಂದಲ್ಲಾ ಒಂದು ರೀತಿಯಿಂದ ಯುವ ಸಮುದಾಯಕ್ಕೆ್ ಹಾಗೂ ಉದ್ಯಮಿಯಾಗಬೇಕೆನ್ನುವ ಕನಸು ಕಾಣುತ್ತಿರುವವರಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಇಂತಹ ನಿದರ್ಶನಗಳಲ್ಲಿ ವಿಶ್ವದ ಅತಿದೊಡ್ಡ ರಿಟೇಲ್ ಆಭರಣ ಗ್ರೂಪ್ ಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥಾಪಕ ಎಂಪಿ ಅಹಮ್ಮದ್ ಕೂಡಾ ಒಬ್ಬರು.
ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು ಸಾಂಬಾರ ಮಸಾಲೆಗಳ ಪರಿಮಳದ ನಡುವೆ ಕನಸುಗಳನ್ನು ಕಂಡವರು. ಮದ್ಯಮ ವರ್ಗದ, ಸಣ್ಣ ಪುಟ್ಟ ಉದ್ಯಮ ಮಾಡುತ್ತಿದ ಕುಟುಂಬದಲ್ಲಿ ಜನಿಸಿದ ಅಹಮ್ಮದ್ ದೂರದೃಷ್ಟಿಯುಳ್ಳವರು. ಅವರ ಉದ್ಯಮಶೀಲತೆಯ ಮನೋಭಾವವು 20 ನೇ ವಯಸ್ಸಿನಲ್ಲಿ ಅವರು 1978 ರಲ್ಲಿ ಮಸಾಲೆ ಉದ್ಯಮಕ್ಕೆ ಕಾಲಿಟ್ಟಾಗ ಪ್ರಾರಂಭವಾಯಿತು.

ಮಸಾಲೆ ಉದ್ಯಮಕ್ಕೆ ಕಾಲಿಟ್ಟಾಗ ಅನೇಕ ಹಿನ್ನಡೆಗಳನ್ನು ಎದುರಿಸುತ್ತಿದ್ದರೂ, ಆದರೆ ಅಲ್ಲಿಗೆ ಅವರ ಉದ್ಯಮಶೀಲತೆಯ ಪಯಣವನ್ನು ನಿಲ್ಲಿಸಲಿಲ್ಲ. ಮಸಾಲೆ ವ್ಯಾಪಾರ ಲಾಭದಾಯಕವಲ್ಲ, ತಮಗೆ ತಕ್ಕುದಾದುದಲ್ಲ ಎಂದು ನಿರ್ಧರಿಸಿ ಮಾರುಕಟ್ಟೆಯಲ್ಲಿ ಒಂದಷ್ಟು ಸಂಶೋಧನೆ ಆರಂಭಿಸಿದರು. ಈ ವೇಳೆ ಚಿನ್ನದ ವ್ಯಾಪಾರದ ಕಡೆ ಅವರ ಗಮನ ಸೆಳೆಯಿತು.
ಆಭರಣ ಮಾರಾಟ ಕ್ಷೇತ್ರ ಒಂದು ದೊಡ್ಡ ಅಸಂಘಟಿತ ಉದ್ಯಮವಾಗಿದೆ ಎಂದು ಅರ್ಥಮಾಡಿಕೊಂಡು, ಜನರಿಗೆ ಚಿನ್ನದೆಡೆಗಿನ ಇರುವ ಸೆಳೆತವನ್ನು ಗುರುತಿಸಿದರು. ಮುಂದೆ ಕೇವಲ 50 ಲಕ್ಷ ರೂ. ಮತ್ತು ತಮ್ಮ ಏಳು ಸಂಬಂಧಿಕರ ಬೆಂಬಲದೊಂದಿಗೆ, ಅಹಮ್ಮದ್ ಅವರು 1993 ರಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಅನ್ನು ಸ್ಥಾಪಿಸಿದರು. ನುರಿತ ಕುಶಲಕರ್ಮಿಗಳ ತಂಡದೊಂದಿಗೆ ಕೋಝಿಕ್ಕೋಡ್‌ನಲ್ಲಿ 400 ಚದರ ಅಡಿ ಅಂಗಡಿಯಿಂದ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಚಿನ್ನಾಭರಣದ ಗುಣಮಟ್ಟ ಮತ್ತು ನಾವೀನ್ಯತೆಗೆ ಹಾಗೂ ಅಹಮ್ಮದ್ ಅವರ ಬದ್ಧತೆಯು ಮಲಬಾರ್ ಸಂಸ್ಥೆಯ ಉದಯಕ್ಕೆ ಕಾರಣವಾಯಿತು. ವಿಶಿಷ್ಟ ವಿನ್ಯಾಸಗಳು ಮತ್ತು BIS-ಹಾಲ್‌ಮಾರ್ಕ್ ಆಭರಣಗಳೊಂದಿಗೆ,ಮಲಬಾರ್ ಬ್ರ್ಯಾಂಡ್ ನಂಬಿಕೆ ಮತ್ತು ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು , ಜೊತೆಗೆ ದೂರದೂರುಗಳ ಅನೇಕ ಗ್ರಾಹಕರನ್ನು ಆಕರ್ಷಿಸಿತು.
ತಿರೂರ್‌ನಿಂದ ಥಲಸ್ಸೆರಿಯವರೆಗೆ, ಬ್ರ್ಯಾಂಡ್‌ನ ಹೆಜ್ಜೆಗುರುತು ವಿಸ್ತರಿಸಿ, 2015 ರಲ್ಲಿ ಕೋಝಿಕ್ಕೋಡ್‌ನಲ್ಲಿ 4,000 ಚದರ-ಅಡಿಗಳ ಭವ್ಯವಾದ ಶೋರೂಮ್ ಸ್ಥಾಪನೆ ಮಾಡಲಾಯಿತು. ಅಹಮ್ಮದ್ ಅವರ ವ್ಯವಹಾರ ದೃಷ್ಟಿಕೋನ ಗಡಿಗಳನ್ನು ಮೀರಿ ವಿಸ್ತರಿಸಿತು. 2001 ರಲ್ಲಿ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಗಲ್ಫ್ ನಲ್ಲಿ ತನ್ನ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಶೋ ರೂಂ ತೆರೆಯಿತು. ಇದು ಜಾಗತಿಕ ವಿಜಯದ ಆರಂಭವಾಯಿತು ಮಾತ್ರವಲ್ಲದೇ ಪ್ರತಿ ಮಳಿಗೆಗಳ ಪ್ರಾರಂಭದೊಂದಿಗೆ, ಕಂಪನಿಯ ವಹಿವಾಟು ಏರಿತೊಡಗಿತು.
ಇಂದು ಇವರು ಆರಂಭಿಸಿದ ಆಭರಣ ಮಳಿಗೆಯು ಭಾರತ, ಮಲೇಷ್ಯಾ, ಸಿಂಗಾಪುರ, ಯುಎಸ್ ಮತ್ತು ಜಿಸಿಸಿ (ಯುಎಇ, ಕುವೈತ್, ಬಹ್ರೇನ್, ಓಮನ್, ಕತಾರ್ ಮತ್ತು ಸೌದಿ ಅರೇಬಿಯಾ) ಸೇರಿದಂತೆ 10 ದೇಶಗಳಲ್ಲಿ 276 ಮಳಿಗೆಗಳನ್ನು ಹೊಂದಿದೆ. ಇಂದು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಯಶಸ್ಸಿನ ಪರಿಪೂರ್ಣ ಉದಾಹರಣೆಯಾಗಿ ದೇಶ ವಿದೇಶಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ, ಇದು ಅಹಮ್ಮದ್ ಅವರ ಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications