ಸೌದಿ ಅರೇಬಿಯಾ ತನ್ನ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿರುವ " ದಿ ಮುಕಾಬ್" ನ ನಿರ್ಮಾಣ ಕಾರ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಡೌನ್‌ಟೌನ್ ರಿಯಾದ್‌ನಲ್ಲಿರುವ ದಿ ಮುಕಾಬ್, ನಗರ ಯೋಜನೆಗಳಲ್ಲಿ ಹೊಸ ಮಾದರಿಯಾಗಿದೆ. " ದಿ ಮುಕಾಬ್" ಬೃಹತ್ ಕಟ್ಟಡ ಅಥವಾ ಹಲವು ಪಟ್ಟಣಗಳನ್ನು ಒಳಗೊಂಡಿರುವ ಕಟ್ಟಡವೆಂದು ಸರಳವಾಗಿ ವಿವರಿಸಬಹುದು. ಆದರೆ ಇದ್ರ ಒಳಹೊಕ್ಕು ನೋಡುವುದಾದರೆ ಇದೊಂದು ಅಸಾಧಾರಣ ಪ್ರಾಜೆಕ್ಟ್ ಎಂಬಂತೆ ಭಾಸವಾಗುತ್ತದೆ.
ಅನೇಕ ನಗರ ತಜ್ಞರು ದಿ ಮುಕಾಬ್ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿತಿಯಿಲ್ಲದ ಉದ್ಯೋಗಾವಕಾಶಗಳ ಕೇಂದ್ರಬಿಂದು ಆಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ದಿ ಮುಕಾಬ್ ಬಗ್ಗೆ:
ಮುಕಾಬ್, ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಒಂದು ಅದ್ಭುತ ನಗರ ಯೋಜನೆಯಾಗಿದೆ. ಇದನ್ನು ಭವಿಷ್ಯದ ನಗರಗಳಿಗೆ ಮಾದರಿಯಾಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಘನಾಕಾರದ ವಿನ್ಯಾಸ (cube shape) : ಮುಕಾಬ್‌ನ ಅತ್ಯಂತ ವಿಶಿಷ್ಟವಾದ ಲಕ್ಷಣವೆಂದರೆ ಅದರ ಘನಾಕಾರದ ರಚನೆ. ಇದು ಒಂದು ದೊಡ್ಡ ಕ್ಯೂಬ್ ಶೇಪ್ ನ್ನು ಹೋಲುತ್ತಿದ್ದು, ಈ ಕ್ಯೂಬ್ ದ ಒಳಗೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಸಮಗ್ರವಾಗಿ ನಿರ್ಮಿಸಲಾಗುತ್ತಿದೆ. ಮುಕಾಬ್‌ನಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಸ್ಮಾರ್ಟ್ ಸಿಟಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಗರವನ್ನು ನಿರ್ವಹಿಸಲಾಗುತ್ತದೆ.
ಅಂದಹಾಗೆ 'ದಿ ಮುಕಾಬ್' ಕಟ್ಟಡ ನಿರ್ಮಾಣ ವಿಶ್ವದಾದ್ಯಂತ ಗಮನ ಸೆಳೆದಿದೆ. ಭವಿಷ್ಯದಲ್ಲಿ ಹೇಗೆ ನಗರಗಳನ್ನು ವಿನ್ಯಾಸಗೊಳಿಸಬಹುದು ಎಂಬುದರ ಬಗ್ಗೆ ಜನರ ದೃಷಿಕೋನವನ್ನು ಬದಲಾಯಿಸಿದೆ. ಮುಕಾಬ್ ಅನ್ನು ನ್ಯೂ ಮುರಬ್ಬಾ ಎಂದೂ ಕರೆಯುತ್ತಾರೆ. ಮುಕಾಬ್ ಅಂದರೆ ಅರೇಬಿಕ್ ಭಾಷೆಯಲ್ಲಿ "ಹೊಸ ಚೌಕ" ಎಂಬ ಅರ್ಥವನ್ನು ನೀಡುತ್ತದೆ. ಈ ಹೆಸರು ಮುಕಾಬ್ ಒಂದು ಹೊಸ ರೀತಿಯ ನಗರವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಈ ಕಟ್ಟಡದ ವಿಶೇಷತೆಗಳೇನು?
ಸೌದಿ ಅರೇಬಿಯಾದ ನೂತನ ಪ್ರಾಜೆಕ್ಟ್ ಇಂಡೋರ್ ಸೂಪರ್ ಸಿಟಿ 'ದಿ ಮುಕಾಬ್ ' ಘನಾಕೃತಿಯಲ್ಲಿರಲಿದ್ದು ಈ ಕಟ್ಟಡ 400 ಮೀಟರ್ ಎತ್ತರ, ಅಗಲ ಮತ್ತು ಉದ್ದವಿರಲಿದೆ. ಮುಕಾಬ್ ಸ್ಥಾಪನೆಯು ರಿಯಾದ್‌ನ ವಾಯುವ್ಯಕ್ಕೆ 19-ಚದರ-ಕಿಲೋಮೀಟರ್ ಪ್ರದೇಶದಲ್ಲಿ ಇದು ನಿರ್ಮಾಣವಾಗಲಿದೆ. ವಿಶ್ವದ ಇತರ ಎಲ್ಲಾ ಕಟ್ಟಡಗಳಿಗಿಂತ ದೊಡ್ಡದಾಗಿರುವ 'ದಿ ಮುಕಾಬ್' ನೈಲ್ಲಿ ನ್ಯೂಯಾರ್ಕ್‌ನ ಐಕಾನಿಕ್ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಗಿಂತ ಇಪ್ಪತ್ತು ಪಟ್ಟು ದೊಡ್ಡದಾಗಿರಲಿದೆ.
ಮುಕಾಬ್ ಕಟ್ಟಡವು ಆಧುನಿಕ ನಜ್ದಿ ವಾಸ್ತುಶಿಲ್ಪದ ಶೈಲಿಗಳನ್ನು ಆಧರಿಸಿ ನಿರ್ಮಾಣವಾದರೂ, ಮುಕಾಬ್‌ನ ಯಶಸ್ಸಿನ ಮೂಲಾಧಾರವು ಅದರ ಹಿಂದೆಂದೂ ನೋಡಿರದ ಅಧುನಿಕ ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ತಂತ್ರದಲ್ಲಿ ಬೇರೂರಿದೆ. ಮುಕಾಬ್‌ನ ಅಭಿವೃದ್ಧಿ ತಂಡದ ಹೇಳಿಕೆ ಪ್ರಕಾರ ಇದು ಹೊಲೊಗ್ರಾಫಿಕ್ ಡಿಸ್ಪ್ಲೇಗಳನ್ನು ಬಳಸಿಕೊಂಡು ನಿರಂತರವಾಗಿ ಬದಲಾಗುವ ಪರಿಸರವನ್ನು ರಚಿಸಲಿದೆ. ಅಂದರೆ ಇದು ಕೇವಲ ಒಂದು ಕಟ್ಟಡವಲ್ಲ, ಬದಲಾಗಿ ಅನಂತ ಸಾಧ್ಯತೆಗಳನ್ನು ಹೊಂದಿರುವ ಒಂದು ಅನುಭವವಾಗಲಿದೆ. ಸರವಾಗಿ ವಿವರಿಸುವುದಾದರೆ ಹೊಲೊಗ್ರಾಫಿಕ್ ತಂತ್ರಜ್ಞಾನದ ಸಹಾಯದಿಂದ, ಮುಕಾಬ್‌ನಲ್ಲಿ ನೀವು ಒಂದು ಕ್ಷಣದಲ್ಲಿ ಒಂದು ಕಾಡಿನಲ್ಲಿ ನಡೆಯುತ್ತಿರುವಂತೆ ಅನುಭವಿಸಬಹುದು ಮತ್ತು ಮುಂದಿನ ಕ್ಷಣದಲ್ಲಿ ಒಂದು ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವಂತೆ ಅನುಭವಿಸಬಹುದು.
ಮುಕಾಬ್ ಕಟ್ಟಡ ಕ್ಯೂ ಬ್ ಆಕಾರದಲ್ಲಿದ್ದರೂ, ಒಳಗಡೆ ತ್ರಿಕೋನದ ರೀತಿಯ ವಿನ್ಯಾಸವಿರಲಿದೆ. ಮುಕಾಬ್, ಹೊಸ ಮುರಬ್ಬಾ ಯೋಜನೆಯು 1,04,000 ವಸತಿ ಘಟಕಗಳು, 9000 ಹೋಟೆಲ್ ಕೊಠಡಿಗಳು, 9,80,000 ಚದರ ಮೀಟರ್ ಕಮರ್ಷಿಯಲ್ ಪ್ಲೇಸ್ ಮತ್ತು 1.4 ಮಿಲಿಯನ್ ಚದರ ಮೀಟರ್ ಕಚೇರಿ ಸ್ಥಳವನ್ನು ಒಳಗೊಂಡಿರುತ್ತದೆ . ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಇದು ಹಸಿರು ಪ್ರದೇಶ ಮತ್ತು ವಾಕಿಂಗ್ ಟ್ರ್ಯಾಕ್ ಗಳನ್ನು ಸಹ ಒಳಗೊಂಡಿರುತ್ತದೆ.
ಇದರ ನಿರ್ಮಾಣವನ್ನು ಸೌದಿಯ ನ್ಯೂ ಮುರಬ್ಬಾ ಡೆವಲಪ್‌ಮೆಂಟ್ ಕಂಪನಿ (ಎನ್‌ಎಂಡಿಸಿ) ವಹಿಸಿಕೊಂಡಿದೆ. US $50 ಶತಕೋಟಿ ಅಂದರೆ ಸುಮಾರು ₹42,03,95,75,00,000 ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರಧಾನ ಮಂತ್ರಿ ಮತ್ತು ಎನ್‌ಎಂಡಿಸಿ ಅಧ್ಯಕ್ಷರಾದ ಹಿಸ್ ರಾಯಲ್ ಹೈನೆಸ್ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ರಚಿಸಿರುವ ವೈಡರ್ ನ್ಯೂ ಮುರಬ್ಬಾ ಅಭಿವೃದ್ಧಿಯ ಕೇಂದ್ರದಲ್ಲಿ ಮುಕಾಬ್ ಇರುತ್ತದೆ .
ಮುಕಾದ್ ವಿಮಾನ ನಿಲ್ದಾಣದಿಂದ 20 ನಿಮಿಷಗಳ ದೂರದಲ್ಲಿದ್ದು, ಯೋಜನೆಯು 340,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮುಕಾಬ್ ಸೌದಿ ಅರೇಬಿಯಾದ ವಿಷನ್ 2030 ರ ಒಂದು ಭಾಗವಾಗಿದೆ. ಈ ವಿಷನ್ ಸೌದಿ ಅರೇಬಿಯಾವನ್ನು ಆಧುನಿಕ ಮತ್ತು ವೈವಿಧ್ಯಮಯ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿ ಮಾಡುವ ಗುರಿ ಹೊಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications