ಆರೋಗ್ಯಕರವಾಗಿ, ಹೆಚ್ಚಿನ ಪ್ರೊಟೀನ್‌ನಿಂದಾಗಿ ಮೊಟ್ಟೆ ಇಂದು ಅಗತ್ಯ ಆಹಾರವಾಗಿಬಿಟ್ಟಿದೆ. ಆದರೆ ಇದೀಗ ಚಳಿಗಾಲ ಆರಂಭವಾಗಿತ್ತಿದ್ದಂತೆ, ಮೊಟ್ಡೆ ಭಾರೀ ದುಬಾರಿಯಾಗಿದೆ. ಸದಾ ಕಡಿಮೆ ಬೆಲೆಯಲ್ಲಿದ್ದ ಮೊಟ್ಟೆ, ಕಳೆದ ಎರಡು ವಾರದಿಂದ ಭಾರೀ ಏರಿಕೆ ಕಂಡಿದೆ. ಹೌದು, ಇದೀಗ ಒಂದು ಮೊಟ್ಟೆ (Egg) ಮಾರುಕಟ್ಟೆಯಲ್ಲಿ 7.20 ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರನ್ನು ಬೆಚ್ಚಿಬೀಳಿಸಿದೆ.

ದುಬಾರಿಯಾಗುತ್ತಿದೆ ಮೊಟ್ಟೆ!
ಕಳೆದ ಎರಡು ವಾರದಿಂದ ಮೊಟ್ಟೆ ದುಬಾರಿಯಾಗಿಬಿಟ್ಟಿದೆ. ಕಳೆದ ಗುರುವಾರದಲ್ಲಿ ಒಂದು ಮೊಟ್ಟೆ ಬೆಲೆ 6.80 ರೂ. ಇತ್ತು. ಆದ್ರೆ ಮಂಗಳವಾರದ ವೇಳೆ 7 ರೂ.ಗೆ ತಲುಪಿತ್ತು. ಅದೇ ಗುರುವಾರದ ವೇಳೆಗೆ ಮೊಟ್ಟೆ ಬೆಲೆ 7.20 ರೂ. ಏರಿಕೆಯಾಗಿ ದಾಖಲೆ ಸೃಷ್ಟಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಮೊಟ್ಟೆ ಗರಿಷ್ಠ ಬೆಲೆಯನ್ನು ತಲುಪಿದ್ದು, ಗ್ರಾಹಕರಲಿ ಅಚ್ಛರಿ ಮೂಡಿಸಿದೆ.
ಮತ್ತೆ ಏರಿಕೆಯಾಗುತ್ತಾ ಮೊಟ್ಟೆ ಬೆಲೆ?
ಕೆಲವೇ ದಿನಗಳಲ್ಲು ಹೊಸವರ್ಷ, ಕ್ರಿಸ್ಮಸ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕೇಕ್‌ಗಳನ್ನು ಹೆಚ್ಚು ಬಳಕೆಗೆ ಬರುವ ಹಿನ್ನೆಲೆ ಮೊಟ್ಟೆಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗಿದೆ.
ಮೊಟ್ಟೆ ಉತ್ಪಾದನೆಯಲ್ಲಿ ಇಳಿಕೆ
ಅಂಗನವಾಡಿ, ಶಾಳೆಗಳಿಗೆ ಮೊಟ್ಟೆ ಬಳಕೆ, ಈ ತಿಂಗಳಲ್ಲಿ ಮದುವೆ ಸೀಸನ್ ಆರಂಭವಾಗುವುದರಿಂದ ಬೇಡಿಕೆ ನಿರೀಕ್ಷೆಯಿದೆ. ಇನ್ನು ಈ ಹಿಂದೆ ಫಾರ್ಮ್ ಕೋಳಿಗಳಿಗೆ ಆಹಾರವಾಗಿ ಜೋಳಗಳನ್ನು ನೀಡಲಾಗುತ್ತಿತ್ತು. ಆದ್ರೆ ಇದೀಗ ಜೋಳದ ದರ ಕೂಡಾ ಏರಿಕೆಯಾಗಿದೆ. ಈ ಪರಿಣಾಮ ಕೋಳಿ ಆಹಾರದಲ್ಲೂ ಭಾರೀ ಏರಿಕೆಯಾಗಿದೆ. ಇದರಿಂದ ಅದೆಷ್ಟೋ ಫಾರ್ಮ್‌ಗಳು ಸಹ ನಷ್ಟದಿಂದ ಮುಚ್ಚಿವೆ ಎಂದು ವರದಿಯಾಗಿದೆ. ಇದೇ ಕಾರಣದಿಂದ ಇಂದು ಮೊಟ್ಟೆ ಉತ್ಪಾದನಾ ಪ್ರಮಾಣ ಇಳಿಕೆಯಾಗಿದ್ದು, ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಅದೇ ಕಾರಣದಿಂದಲೂ ಮೊಟ್ಟೆ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
ಇಳಿಕೆಯಾಗುತ್ತಾ ಮೊಟ್ಟೆ ಬೆಲೆ?
ಭಾರತದಲ್ಲಿ ಒಟ್ಟು ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ ಶೇ.20% ರಷ್ಟು ಪೂರೈಕೆ ಮಾಡುತ್ತಿದ್ದು, ಪ್ರತಿದನ 5 ಕೋಟಿಗೂ ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸುತ್ತದೆ. ಹೋಲ್‌ಸೇಲ್‌ನಲ್ಲಿ 100 ಮೊಟ್ಟೆಗಳಿಗೆ 640 ರೂ.ಗಳಂತೆ ಸೇಲ್ ಮಾಡಲಾಗುತ್ತಿದೆ. ಆದರೆ ಚಿಲ್ಲರೆ ವ್ಯಾಪಾರಿಗಳು ವಿವಿಧ ಕಾರಣಗಳನ್ನು ನೀಡಿ, ಒಂದೊಂದು ಮೊಟ್ಟೆಯನ್ನು 7 ರಿಂದ 8 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮುಂಬರುವ ತಿಂಗಳುಗಳಲ್ಲಿ ಉತ್ಪಾದನಾ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಬೆಲೆಯಲ್ಲಿ ಕುಸಿತವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಇನ್ನು ಚಳಿಗಾಲದಲ್ಲಿ ಯುವಕರು, ಮಹಿಳೆಯರು, ಮಕ್ಕಳು ಬೇಡಿಕೆ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. ಅದೇ ಕಾರಣದಿಂದ ಮೊಟ್ಟೆ ಬೆಲೆ ಸಾಮಾನ್ಯಕ್ಕಿಂತಲೂ ಏರಿಕೆ ಕಂಡಿದೆ ಎಂದು ಮೊಟ್ಟೆ ಮಾರಾಟಗಾರರೊಬ್ಬರು ಹೇಳಿದ್ದಾರೆ. ಪ್ರತೀದಿನ ಒಂದೊಂದು ಮೊಟ್ಟೆ ತಿನ್ನುತ್ತಿದ್ದವರು ಕೂಡಾ ಇದೀಗ ಬೆಲೆ ಏರಿಕೆಯಿಂದ ಹಿಂದೆ ಮುಂದೆ ನೋಡುವಂತಾಗಿದೆ.


Click it and Unblock the Notifications