ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ವರ್ಷವಿಡೀ ಭಾರತದಲ್ಲಿ ಚಿನ್ನದ ಬೆಲೆ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿತ್ತು. ಆದ್ರೆ ವರ್ಷಾಂತ್ಯದಲ್ಲೂ ಚಿನ್ನದ ಬೆಲೆ ಏರಿಕೆ (Gold Rate Hike) ಕಾಣುತ್ತಲೇ ಇದೆ. ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ದಿನ ಹೋದಂತೆ ನಿರಾಸಾಭಾವವೇ ವ್ಯಕ್ತವಾಗುತ್ತಿದೆ. ಇಂದೂ (ಡಿ.12) ಕೂಡಾ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ ಇಂದು 13,266 ರೂ. ಆಗಿದ್ದು, ನಿನ್ನೆಗಿಂತಲೂ ಇಂದು ಭಾರೀ ಏರಿಕೆಯಾಗಿದೆ. ನಿನ್ನೆ 13,075 ರೂ. ಇತ್ತು. ಒಟ್ಟು ₹191 ರೂ. ಏರಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,06,128 ರೂ. ಆಗಿದ್ದು, ನಿನ್ನೆ 1,04,600 ರೂ. ಇತ್ತು. ನಿನ್ನೆಗಿಂತ ಇಂದು 1,528 ರೂ. ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,32,660 ರೂ. ಆಗಿದ್ದು, ನಿನ್ನೆ 1,30,750 ರೂ. ಇತ್ತು. ಅಲ್ಲದೇ ಇಂದು 1,910 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,26,600 ರೂ. ಆಗಿದ್ದು, ನಿನ್ನೆ 13,07,500 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 12,160 ರೂ. ಆಗಿದ್ದು, ನಿನ್ನೆ 11,985 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹175 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 97,280 ರೂ. ಆಗಿದ್ದು, ನಿನ್ನೆ 95,880 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,400 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,21,600 ರೂ ಆಗಿದ್ದು, ನಿನ್ನೆ 1,19,850 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,750 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,16,000 ರೂ. ಆಗಿದ್ದು, ನಿನ್ನೆ 11,98,500 ರೂ. ಆಗಿದೆ. ನಿನ್ನೆಗಿಂತ ಇಂದು 17,500 ರೂ. ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ₹9,949 ರೂ. ಆಗಿದ್ದು, ನಿನ್ನೆ 9,806 ರೂ. ಇತ್ತು. ನಿನ್ನೆಗಿಂತ ಇಂದು ₹143 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹79,592 ರೂ. ಆಗಿದ್ದು, ನಿನ್ನೆ 78,448 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ 1,144 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 99,490 ರೂ. ಆಗಿದ್ದು, ನಿನ್ನೆ 98,060 ರೂ. ಇತ್ತು. ಒಟ್ಟು 1,430 ರೂ. ಹೆಚ್ಚಳ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 13,364, 22K ರೂ. 12,250, 18K ರೂ. 10,230
ಮುಂಬೈ: 24K ರೂ. 13,266, 22K ರೂ. 12,160, 18K ರೂ. 9,949
ದೆಹಲಿ: 24K ರೂ. 13,281, 22K ರೂ. 12,175, 18K ರೂ. 9,964
ಕೋಲ್ಕತ್ತಾ: 24K ರೂ. 13,266, 22K ರೂ. 12,160, 18K ರೂ. 9,949
ಬೆಂಗಳೂರು: 24K ರೂ. 13,266, 22K ರೂ. 12,160, 18K ರೂ. 9,949
ಹೈದರಾಬಾದ್: 24K ರೂ. 13,266, 22K ರೂ. 12,160, 18K ರೂ. 9,949
ಕೇರಳ: 24K ರೂ. 13,266, 22K ರೂ. 12,160, 18K ರೂ. 9,949
ಪುಣೆ: 24K ರೂ. 13,266, 22K ರೂ. 12,160, 18K ರೂ. 9,949
ವಡೋದರಾ: 24K ರೂ. 13,271, 22K ರೂ. 12,,165, 18K ರೂ. 9,954
ಅಹಮದಾಬಾದ್: 24K ರೂ. 13,271, 22K ರೂ. 12,165, 18K ರೂ. 9,954
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಏರಿಕೆಯ ಜೊತೆಗೆ, ಇತ್ತ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು ₹204 ರೂ. ಆಗಿದ್ದು, ನಿನ್ನೆ ₹201 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹3 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,632 ರೂ. ಆಗಿದೆ. ಒಟ್ಟು ₹24 ರೂ. ಹೆಚ್ಚಳವಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ಬೆಲೆ ₹2,040 ರೂ., 100 ರೂ. ಬೆಳ್ಳಿ ದರ ₹20,400 ರೂ., 1000 ಗ್ರಾಂ ಬೆಳ್ಳಿ ದರ ₹2,04,000 ರೂ. ಆಗಿದೆ.


Click it and Unblock the Notifications