ಉದ್ಯೋಗಿಗಳು (Employees) ಕೆಲಸದ ವಿಷಯದಲ್ಲಿ ಮೌನವಾಗಿರುವುದು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದು. ಆದ್ರೆ ಕೆಲಸದ ಸ್ಥಳದಲ್ಲಿ, ಕೆಲವೊಂದು ಮೌನವು ಕೆಲವೊಮ್ಮೆ ಕಠಿಣ ಎಚ್ಚರಿಕೆಯ ಸೂಚನೆಯೂ ಆಗಿರಬಹುದು. ಅದರಲ್ಲೂ ಇಮೇಲ್‌ಗಳಿಗೆ ಪ್ರತಿಕ್ರಿಯೆ ಸಿಗದಿರುವುದು, ನಿಮ್ಮನ್ನು ಹೊರಗಿಟ್ಟು ಮೀಟಿಂಗ್ ನಡೆಸುವುದು, ಹೀಗೆ ಹಲವು ನಿರ್ಧಾರಗಳು, ಹಲವು ಪ್ರಶ್ನೆಗಳಿಗೆ ಕಾರಣವಾಗಬಹುದು. ಇದನ್ನೇ ಉದ್ದೇಶಪೂರ್ವಕ 'ಕ್ವೈಟ್ ಫೈರಿಂಗ್' (Quite Firing) ಎಂದು ಹೇಳಲಾಗುತ್ತಿದೆ.

ಏನಿದು ಕ್ವೈಟ್ ಫೈರಿಂಗ್?
'ಕ್ವೈಟ್ ಫೈರಿಂಗ್' ಎಂಬ ಕೇಳಲು ಹೊಸದಾಗಿದ್ದರೂ, ಇದರ ಹಿಂದಿರುವ ಪದ್ಧತಿ ಹಳೆಯದು ಮತ್ತು ಹಾನಿಕಾರಕವಾಗಿದೆ. ಇದು ಸಂಸ್ಥೆಗಳು ಉದ್ಯೋಗಿಗಳಿಗೆ ಕೆಲಸದಲ್ಲಿ ಸರಿಯಾದ ಮಹತ್ವ ನೀಡದೆ, ಸ್ವಯಂ ಪ್ರೇರಿತವಾಗಿ ರಿಸೈನ್ ನೀಡುವಂತೆ ಮಾಡುವುದು.
ಇದು ಉದ್ಯೋಗಿಯನ್ನು ನೇರವಾಗಿ ವಜಾ ಮಾಡದೆ, ಬದಲಿಗೆ ಅವರೇ ಸ್ವತಃ ಕ್ರಮೇಣ ಸಂಸ್ಥೆಯಿಂದ ಹೊರಹೋಗುವಂತೆ ಮಾಡುವ ವ್ಯವಸ್ಥೆ. ಕಂಪನಿ ಅಥವಾ ಮ್ಯಾನೇಜರ್‌ಗಳು ಉದ್ಯೋಗಿಗಳಿಗೆ ಯಾವುದೇ ಜವಾಬ್ದಾರಿಗಳನ್ನು ನೀಡದೆ, ಯಾವುದೇ ಸಭೆಗಳಿಗೆ ಕರೆಯದಿರುವುದು. ಇದರಿಂದ ಮಾನಸಿಕವಾಗಿ, ದೈಹಿಕವಾಗಿಯೂ ಕೆಲಸ ವಾತಾವರಣವನ್ನು ಸಹಿಸಲಾಗದಂತಾದಾಗ ನೌಕರರು ಆಯಾಸಗೊಂಡು ರಾಜೀನಾಮೆ ನೀಡುತ್ತಾರೆ.
ಲೇಆಫ್ ಅಥವಾ ನೇರ ವಜಾ ಪ್ರಕ್ರಿಯೆಗಳಿಗಿಂತ ಭಿನ್ನವಾಗಿ, ಕ್ವೈಟ್ ಫೈರಿಂಗ್ ಸದ್ಯ ಟ್ರೆಂಡ್ ಆಗಿಬಿಟ್ಟಿದೆ. ಗೌರವವನ್ನೇ, ಜವಾಬ್ದಾರಿಗಳನ್ನೇ ಇಲ್ಲಿ ತಂತ್ರವಾಗಿ ಬಳಸಲಾಗುತ್ತದೆ. ಇದರಿಂದ ಕಂಪನಿಗಳಿಗೂ ಪರಿಹಾರ ಧನ, ದಾಖಲಾತಿ ಮತ್ತು ಕಾನೂನು ಅಪಾಯಗಳನ್ನು ತಪ್ಪಿಸಲು ಅನುಕೂಲವಾಗುತ್ತದೆ.
ಗ್ಯಾಲಪ್‌ನ ಜೂನ್ 2024 ರ 'ಸ್ಟೇಟ್ ಆಫ್ ದಿ ಗ್ಲೋಬಲ್ ವರ್ಕ್‌ಪ್ಲೇಸ್' ವರದಿಯ ಪ್ರಕಾರ, ವಿಶ್ವದಾದ್ಯಂತ ಬಹುತೇಕ ನೌಕರರು ತಮ್ಮ ಸಂಸ್ಥೆಗಳಿಂದ ಬೆಂಬಲರಹಿತ, ಸಂಪರ್ಕರಹಿತ ಹಾಗೂ ಭಾವನಾತ್ಮಕವಾಗಿ ಬೇರ್ಪಟ್ಟ ಭಾವನೆಗಳನ್ನು ಹೊಂದಿದ್ದಾರೆ. ಇದನ್ನೇ ಕ್ವೈಟ್ ಫೈರಿಂಗ್ ಎಂದು ಕರೆಯಲಾಗಿದೆ.
ಕೆಲಸದಲ್ಲಿ ಕಡಿಮೆ ಗುಣಮಟ್ಟ ಮತ್ತು ಸಂವಹನ ಕೂಡಾ ಕಡಿಮೆಯಾಗುತ್ತಿದ್ದಂತೆ, ವ್ಯವಸ್ಥಾಪಕರು ಯಾವುದೇ ಹಗೆ ಸಾಧಿಸದೆ, ಉದ್ಯೋಗಿಗಳನ್ನು ಬಿಟ್ಟುಕೊಡಲು ಇದು ಸುಲಭ ಮಾಡುತ್ತದೆ.
ಇನ್ನು ಕ್ವೈಟ್ ಫೈರಿಂಗ್ ವೇಳೆ, ಸಂಸ್ಥೆ ನೌಕರರಿಗೆ ಸಂಬಳ ನೀಡುತ್ತಿದ್ದರೂ, ಅವರಿಗೆ ನಿಜವಾದ ಜವಾಬ್ದಾರಿ ಅಥವಾ ಗುಣಮಟ್ಟದ ಕೆಲಸಗಳನ್ನು ನೀಡುವುದಿಲ್ಲ. ಅಂದರೆ ಕೆಲಸದ ಸ್ಥಳದಲ್ಲೇ ಕಡೆಗಣಿಸಲಾಗುತ್ತದೆ. ಆದ್ದರಿಂದ ಕೆಲವೊಂದು ಕಂಪನಿಗಳು ತನ್ನ ಅನುಕೂಲಕ್ಕಾಗಿ ಈ ನಿರ್ಧಾರಕ್ಕೆ ಬಂದರೆ, ಇನ್ನೂ ಕೆಲವು ಉದ್ದೇಶ ಪೂರ್ವಕವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಕ್ವೈಟ್ ಫೈರಿಂಗ್‌ನಂತರ ನಿರ್ಧಾರಗಳಿಂದ ಅದೆಷ್ಟೋ ಉದ್ಯೋಗಿಗಳು ಇಂದು ಉದ್ಯೋಗವಿಲ್ಲದೇ ಪರದಾಡುವಂತಾಗಿದೆ.
ಉದ್ಯೋಗಿಗಳ ಕನಸಿಗೆ ಪೆಟ್ಟು!
ಅದೆಷ್ಟೋ ಯುವಕ-ಯುವತಿಯರು ಒಂದೊಳ್ಳೆ ಕೆಲಸಕ್ಕಾಗಿ ಹಾತೊರೆಯುತ್ತಿರುತ್ತಾರೆ. ಆದ್ರೆ ಇತ್ತೀಚಿನ ಲೇಆಫ್ ಟ್ರೆಂಡ್‌ನಿಂದಾಗಿ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಕ್ವೈಟ್ ಫೈರಿಂಗ್ ಎಂಬ ಮತ್ತೊಂದು ಟ್ರೆಂಡ್ ಶುರುವಾಗಿದ್ದು, ಈ ಪೃವೃತ್ತಿಗೆ ಈಗಾಘಲೇ ಅದೆಷ್ಟೋ ಮಂದಿ ಗುರಿಯಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ


Click it and Unblock the Notifications