ಈ ಪುಟ್ಟ ಪಟ್ಟಣದ ವ್ಯಾಪಾರಿಗಳು ಭಾರತದ ಬಾಹುಬಲಿಗಳು: ಆನಂದ್ ಮಹೇಂದ್ರ ಟ್ವೀಟ್ ಹಿಂದಿನ ಮರ್ಮವೇನು?

ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಕ್ಟಿವ್ ಆಗಿದ್ದು,ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಟ್ವೀಟ್ ಮಾಡುತ್ತಾ, ಸ್ಫೂರ್ತಿದಾಯಕ ಹಾಗೂ ಆಕರ್ಷಕ ವಿಚಾರದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ತಮ್ಮ ಸ್ವಂತ ವಿಚಾರಧಾರೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಇತರ ವಿಚಾರ ಹಾಗೂ ಜನರು ತಮ್ಮ ಸ್ವಂತ ಪ್ರಗತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ. ಇತ್ತೀಚೆಗೆ, ಟ್ವೀಟ್‌ನಲ್ಲಿ ಗುಜರಾತ್‌ನ ಮೋರ್ಬಿ ನಗರ ಮತ್ತು ಅದರ ಸೆರಾಮಿಕ್ ಕೈಗಾರಿಕೆಗಳ 'ಪ್ರಾಬಲ್ಯ'ವನ್ನು ಎತ್ತಿ ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅಲ್ಲಿನ ಜನರ ಕೌಶಲ್ಯ ಮತ್ತು ಪ್ರತಿಭೆಯ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಲ್ಲದೇ ಮತ್ತು ಮೋರ್ಬಿ ಭಾರತದ ಬ್ಯುಸಿನೆಸ್ ವಲಯದ 'ಬಾಹುಬಲಿ' ಎಂದು ಕರೆದಿದ್ದಾರೆ.

ಜಾಗತಿಕ ಸೆರಾಮಿಕ್ ಉದ್ಯಮದಲ್ಲಿ ಒಂದು ಸಣ್ಣ ಪಟ್ಟಣದ ಗಮನಾರ್ಹ ಕೊಡುಗೆಯನ್ನು ಈ ವೀಡಿಯೊ ಎತ್ತಿ ತೋರಿಸುತ್ತದೆ. ಭಾರತದ ಸೆರಾಮಿಕ್ ಉತ್ಪಾದನೆಯ 90% ರಷ್ಟನ್ನು ಉತ್ಪಾದಿಸುವ ಮೊರ್ಬಿ, ಜಾಗತಿಕ ಸೆರಾಮಿಕ್ ಕೇಂದ್ರವಾಗಿ ಸ್ಥಾಪಿತವಾಗಿದೆ. ಸುಮಾರು 1000 ಕುಟುಂಬ-ಸ್ವಾಮ್ಯದ ಕಾರ್ಖಾನೆಗಳೊಂದಿಗೆ, ಮೊರ್ಬಿಯ ಸೆರಾಮಿಕ್ ಉದ್ಯಮವು 1930 ರ ದಶಕದಿಂದಲೂ ಬೆಳೆಯುತ್ತಿದೆ, ಚೀನಾದೊಂದಿಗೆ ಸ್ಪರ್ಧಿಸುತ್ತಿದೆ ಮತ್ತು ಇಟಲಿಯ ಪ್ರೀಮಿಯಂ ಮಾನದಂಡಗಳಿಗೆ ಪ್ರತಿಸ್ಪರ್ಧಿಯಾಗುವ ಗುಣಮಟ್ಟವನ್ನು ನೀಡುತ್ತದೆ

 ಮೋರ್ಬಿಯ ಉದ್ಯಮಿಗಳು ಭಾರತ ಬಾಹುಬಲಿಗಳು- ಆನಂದ್ ಮಹೀಂದ್ರಾ

ಭಾರತೀಯ ವ್ಯವಹಾರಗಳು ಚೀನಾದೊಂದಿಗೆ ಸ್ಪರ್ಧಿಸಬಹುದೇ? ಬಹುಶಃ ನಾವು ಯಶಸ್ಸಿನ ಕಥೆಗಳಿಗಾಗಿ ಸರಿಯಾದ ಸ್ಥಳಗಳನ್ನು ಹುಡುಕುತ್ತಿಲ್ಲ. 'ಮೊರ್ಬಿ' ಯ ಕುರಿತು ಈ ವೀಡಿಯೊವನ್ನು ನೋಡಿ ನನಗೆ ಸಂತೋಷವಾಯಿತು. ಈ ಚುರುಕಾಗಿರುವ ಸಣ್ಣ-ಪಟ್ಟಣದ ಉದ್ಯಮಿಗಳು ಭಾರತದ 'ಬಾಹುಬಲಿಗಳು',ಎಂದು ಆನಂದ್ ಮಹೇಂದ್ರ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗುಜರಾತ್‌ನ ಮೋರ್ಬಿ ಎಂಬ ನಗರವು ಜಾಗತಿಕ ಸೆರಾಮಿಕ್ ಉದ್ಯಮದಲ್ಲಿ ಹೇಗೆ ಪ್ರಮುಖ ಸ್ಥಾನವನ್ನು ಗಳಿಸಿದೆ ಎಂಬುದನ್ನು ಒಂದು ನಿಮಿಷದ ವೀಡಿಯೊ ಕ್ಲಿಪ್ ವಿವರಿಸುತ್ತದೆ. ಈ ವೀಡಿಯೊದಲ್ಲಿ, ಇಲ್ಲಿನ ಉದ್ಯಮಗಳು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿವೆ ಮತ್ತು ಸುಮಾರು ನಾಲ್ಕು ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ ಎಂದು ಹೇಳಲಾಗಿದೆ

ಮೋರ್ಬಿಯ ಸೆರಾಮಿಕ್ ಉದ್ಯಮವು ಜಾಗತಿಕವಾಗಿ ಯಶಸ್ವಿಯಾದರೂ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿತದಿಂದ ತೊಂದರೆ ಅನುಭವಿಸುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಕಂಪನಿಗಳು ಅನಿಲ ಬಳಕೆಯ ತೆರಿಗೆಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೋರುತ್ತಿವೆ. ವ್ಯಾಟ್‌ನಿಂದ ಜಿಎಸ್‌ಟಿಗೆ ಬದಲಾವಣೆ ಮತ್ತು ಇನ್‌ಪುಟ್ ತೆರಿಗೆ ಕ್ರೆಡಿಟ್‌ನ ಪ್ರಯೋಜನಗಳನ್ನು ಅವರು ಒತ್ತಾಯಿಸುತ್ತಿದ್ದಾರೆ. ಪ್ರತಿದಿನ ಸುಮಾರು 3 ಮಿಲಿಯನ್ ಘನ ಮೀಟರ್ ಅನಿಲವನ್ನು ಬಳಸುವ ಉದ್ಯಮಕ್ಕೆ ಇಂಧನ ವೆಚ್ಚಗಳು ದೊಡ್ಡ ಸಮಸ್ಯೆಯಾಗಿವೆ. ಸೌದಿ ಅರೇಬಿಯಾ, ಕತಾರ್ ಮತ್ತು ತೈವಾನ್‌ನಂತಹ ದೇಶಗಳು 50% ರಿಂದ 106% ವರೆಗೆ ಆಂಟಿ-ಡಂಪಿಂಗ್ ಸುಂಕಗಳನ್ನು ವಿಧಿಸಿರುವುದರಿಂದ ರಫ್ತುಗಳು ತೊಂದರೆಗೆ ಒಳಗಾಗಿವೆ. ಇರಾನ್ ಮೇಲಿನ ವ್ಯಾಪಾರ ನಿರ್ಬಂಧಗಳು ಕಝಾಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಅಜೆರ್ಬೈಜಾನ್‌ನಂತಹ ದೇಶಗಳಿಗೆ ರಫ್ತು ಮಾಡಲು ಕಷ್ಟವಾಗುವಂತೆ ಮಾಡಿವೆ, ಆದ್ದರಿಂದ ಕಂಪನಿಗಳು ದುಬಾರಿ ಪರ್ಯಾಯ ಹಡಗು ಮಾರ್ಗಗಳನ್ನು ಬಳಸಬೇಕಾಗಿದೆ.

ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಮೋರ್ಬಿಯ ಚೇತರಿಸಿಕೊಳ್ಳುವ ವ್ಯಾಪಾರ ಸಮುದಾಯವು ಜಾಗತಿಕ ಸೆರಾಮಿಕ್ಸ್ ವಲಯದಲ್ಲಿ ಭಾರತವನ್ನು ಮುನ್ನಡೆಸುತ್ತಿದೆ, ಸಣ್ಣ ಪಟ್ಟಣಗಳಿಂದಲೂ ಜಾಗತಿಕ ಯಶಸ್ಸು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಿದೆ.

ಇನ್ನು ಮುಂಬೈ ಮೂಲದ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರುವ ಮಹೀಂದ್ರಾ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿರುವುದಲ್ಲದೇ, X ನಲ್ಲಿ 11 ಮಿಲಿಯನ್‌ಗಿಂತಲೂ ಹೆಚ್ಚು (1.1 ಕೋಟಿ) ಅನುಯಾಯಿಗಳನ್ನು ಹೊಂದಿದ್ದಾರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+