ನವದೆಹಲಿ, ಮೇ 16: ಹಲವಾರು ಉಚಿತ ಅನುಕೂಲಗಳ ಜತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿರುವ ರಾಜ್ಯ ಸರ್ಕಾರವು ಇದೀಗ ಆಸ್ತಿ ತೆರಿಗೆ ಪಾವತಿಸುವವರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ.
ಎಷ್ಟೋ ಮಂದಿ ಸರ್ಕಾರಕ್ಕೆ ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ತೆರಿಗೆ ಸಂಗ್ರಹದಲ್ಲಿಯೂ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಏನೆಲ್ಲ ಐಡಿಯಾಗಳನ್ನು ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹಣೆ ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಪಂಚಾಯತ್‌ರಾಜ್ ಇಲಾಖೆಯು ಇದೀಗ ಆಸ್ತಿ ತೆರಿಗೆ ಪಾವತಿಯನ್ನು ಉತ್ತೇಜಿಸಲು ಶೇ.5ರಷ್ಟು ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಮಾಡಿದೆ.

ಯಾರಿಗೆಲ್ಲ ಈ ತೆರಿಗೆ ಲಾಭ ಪಡೆಯಬಹುದು:
ಈ ವಿಶೇಷ ರಿಯಾಯಿತಿಯನ್ನು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ವಿಧಿಸುವ ತೆರಿಗೆಯನ್ನು ಪಾವತಿಸುವವರು ಇದರ ಲಾಭವನ್ನು ಪಡೆಯಬಹುದು.
ಈ ಸಲದ ಆರ್ಥಿಕ ವರ್ಷವು 2024ರ ಮಾ.3೧ಕ್ಕೆ ಕೊನೆಗೊಂಡಿದ್ದು, ಏಪ್ರಿಲ್ ಒಂದರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ಹೊಸ ಆರ್ಥಿಕ ವರ್ಷದ ಆರಂಭದ ಮೂರು ತಿಂಗಳು ಅಂದರೆ ಏಪ್ರಿಲ್‌ನಿಂದ ಜುಲೈ ಅಂತ್ಯದೊಳಗೆ ತೆರಿಗೆ ಪಾವತಿ ಮಾಡುವ ಆಸ್ತಿದಾರರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ದೊರೆಯಲಿದೆ.
ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಒಳಪಡುವ ತೆರಿಗೆ ಪಾವತಿಯನ್ನು ಕೂಡ ಇನ್ನುಮುಂದೆ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ. ಅರ್ಹ ತೆರಿಗೆದಾರರು ಪಂಚಾಯತ್‌ರಾಜ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://bsk.karnataka.gov.in/BSK/csLOgin/loginpageಗೆ ತೆರಳಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ತೆರಿಯನ್ನು ಬಹಳ ಸುಲಭವಾಗಿ ಮನೆಯಲ್ಲಿ ಕುಳಿತುಕೊಂಡೇ ಪಾವತಿ ಮಾಡಬಹುದಾಗಿದೆ. ಈ ಹೊಸ ಆನ್‌ಲೈನ್ ಪಾವತಿ ವ್ಯವಸ್ಥೆಯಿಂದ ತೆರಿಗೆ ಸಂಗ್ರಹದಲ್ಲಿಯೂ ಏರಿಕೆ ಕಂಡುಬರುವ ಸಾಧ್ಯತೆಯಿದೆ.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರುವ ನಿಟ್ಟಿನಲ್ಲಿ ಈಗಾಗಲೇ ಆನ್‌ಲೈನ್ ತೆರಿಗೆ ಪಾವತಿ, ಆನ್‌ಲೈನ್‌ನಲ್ಲಿ ಆಸ್ತಿಗಳ ಬಗ್ಗೆ ಮಾಹಿತಿ ಪಡೆಯುಲು ಹಾಗೂ ನಮ್ಮ ಆಸ್ತಿಗಳ ಪೂರ್ಣ ವಿವರಗಳನ್ನು ಪಡೆಯುವುದಕ್ಕೂ ಇದರಿಂದ ಅನುಕೂಲವಾಗುತ್ತದೆ. ಇತ್ತೀಚೆಗೆ, ಕಂದಾಯ ಇಲಾಖೆ ಕೂಡ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಗಳ ಮೂಲಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿದೆ. ಅದರಂತೆ, ಆಸ್ತಿ ಮಾಲೀಕರ ಪಹಣಿಗೆ ಆಧಾರ್ ಜೋಡಿಸುವ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ. ಈ ವ್ಯವಸ್ಥೆಯಿಂದ ಆಸ್ತಿಗಳ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಲು ಅನುಕೂಲವಾಗುತ್ತದೆ. ಬೇರೆಯವರ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳುವ ಅಕ್ರಮ ಚಟುವಟಿಕೆಗಳಿಗೂ ಇದರಿಂದ ಕಡಿವಾಣ ಬೀಳುತ್ತದೆ.
ಆನ್‌ಲೈನ್ ಮೂಲಕ ಆಸ್ತಿ ವಿವರ ಪಡೆಯಿರಿ:
ನೀವು ಪಂಚಾಯತ್‌ರಾಜ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಆಸ್ತಿಯ ವಿಸ್ತೀರ್ಣ, ನಿಮ್ಮ ಮನೆಯ ವಿಸ್ತೀರ್ಣ ಹಾಗೂ ಕೃಷಿ ಭೂಮಿ ಆಗಿದ್ದರೆ ಮಣ್ಣಿನ ಫಲವತ್ತತೆ, ಬೆಳೆಗಗಳ ವಿವರ ಹೀಗೆ ಪ್ರತಿಯೊಂದು ಮಾಹಿತಿಯನ್ನು ಪಡೆಯಬಹುದು. ಜತೆಗೆ ತೆರಿಗೆ ಮಾಹಿತಿ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಯಾವುದೇ ಕೆಲಸಗಳು ನಡೆದಿದ್ದರೆ ಅದರ ಮಾಹಿತಿಗಳನ್ನು ಕೂಡ ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು.


Click it and Unblock the Notifications