ಬೆಂಗಳೂರು, ಫೆಬ್ರವರಿ 12: ಬೀದಿ ಬದಿಯ ತಿನಿಸುಗಳು ನಿಜಕ್ಕೂ ಬಾಯಲ್ಲಿ ನೀರೂರಿಸುತ್ತದೆ. ನಮ್ಮ ಭಾರತದ ವಿವಿಧ ಭಾಗಗಳಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಆಹಾರಗಳನ್ನು ನೀವು ಈಗಾಗಲೇ ಸವಿದಿರಬಹುದು. ಅದೆಷ್ಟೋ ಮಂದಿ ಸ್ಟ್ರೀಟ್ ಫುಡ್ ಮಾರಾಟ ಮೂಲಕವೇ ತಮ್ಮ ಬದುಕು ಕಟ್ಟಿಕೊಂಡವರಿದ್ದಾರೆ.
ಆದರೆ ದೆಹಲಿಯ ನೆಹರೂ ಪ್ಲೇಸ್‌ನಲ್ಲಿರುವ ಬೀದಿ ಬದಿ ವ್ಯಾಪಾರಿಯೊಬ್ಬರು ಚಾಟ್ ಮಾರಾಟ ಮಾಡಿಯೇ ಕೋಟ್ಯಾಧಿಪತಿಯಾಗಿದ್ದಾರೆ ಅಂದ್ರೆ ನಂಬಲೇ ಬೇಕು. ಶರ್ಮಾಜಿ ಚಾಟ್ ವಾಲಾ ಎಂದೂ ಕರೆಯಲ್ಪಡುವ ಇವರು ಈಗ ಸುಪ್ರಸಿದ್ದ ವ್ಯಕ್ತಿಯಾಗಿದ್ದಾರೆ. ದೆಹಲಿಯ ನೆಹರೂ ಪ್ಲೇಸ್‌ನಲ್ಲಿರುವ ಶರ್ಮಾಜಿ ಚಾಟ್ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿಯೇ ಶರ್ಮಾ ಅವರು "ದಹಿ ಭಲ್ಲಾ" ಚಾಟ್ ಮಾರಾಟ ಮಾಡಿ ಕೋಟ್ಯಂತರ ರೂ. ಗಳಿಸುತ್ತಿದ್ದಾರೆ. ಶರ್ಮಾ ಅವರ ಚಾಟ್ ಪ್ಲೇವರ್ ಗೆ ಪ್ರಸಿದ್ದವಾಗಿದ್ದು ಗ್ರಾಹಕರನ್ನು ಸೆಳೆಯುತ್ತಿದೆ.

ಆಧುನಿಕ ಭಾರತದಲ್ಲಿ, ಆಹಾರ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನರು ಹೆಚ್ಚಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಲು ಬಯಸುತ್ತಿರುತ್ತಾರೆ. ಈಗಂತು ಆಹಾರ ಪ್ರಿಯರು ಆಯಾ ಋತುವಿನ ಆಹಾರಕ್ಕಾಗಿ ಕಾಯುವುದಿಲ್ಲ. ಮಳೆಗಾಲದಲ್ಲೂ ಐಸ್ ಕ್ರೀಂ ಸವಿಯುವ ಜನರಿದ್ದಾರೆ. ಹೀಗಾಗಿ ಇಂದು ಆಹಾರೋದ್ಯಮದಲ್ಲಿ ಬಹಳಷ್ಟು ಮಂದಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ.
ಅದೇ ರೀತಿ ದೆಹಲಿಯ ಶರ್ಮಾಜಿಯ ಚಾಟ್ ಕೂಡಾ ಹೆಚ್ಚು ಪ್ರಸಿದ್ಧವಾಗಿದೆ. ಬದುಕು ನಡೆಸಲು ಸ್ಟ್ರೀಟ್‌ಫುಡ್ ಸ್ಟಾಲ್ ಆರಂಭಿಸಿದ ಶರ್ಮಾ ಅವರು ಹಲವು ಕೋಟಿಗಳ ಒಡೆಯ. ಎಷ್ಟೆಂದರೇ BMW ಕಾರಿನಲ್ಲಿ ಬಂದು ಬೀದಿ ಬದಿ ಆಹಾರಗಳನ್ನು ಮಾರಾಟ ಮಾಡುತ್ತಾರೆ. ಸಿರಿವಂತಿಕೆ ಬಂದರೂ ಚಾಟ್ ಮಾರಾಟ ಮಾಡುವುದನ್ನು ಮುಂದುವರಿಸಿದ್ದಾರೆ.
ಶರ್ಮಾ ಅವರ ಪೂರ್ಣ ಹೆಸರು ಮುಕೇಶ್ ಕುಮಾರ್ ಶರ್ಮಾ. ಅವರು ಹಲವು ವರ್ಷಗಳಿಂದ ನೆಹರೂ ಪ್ಲೇಸ್ ಎಂಬ ಸ್ಥಳದಲ್ಲಿ ತಮ್ಮ ಆಹಾರವನ್ನು ಮಾರಾಟ ಮಾಡುತ್ತಾರೆ.ಶರ್ಮಾ ಜಿ ಚಾಟ್ ಭಂಡಾರ್ ತನ್ನ ಶುಚಿತ್ವದ ಜೊತೆಗೆ ರುಚಿಗೂ ಹೆಚ್ಚು ಪ್ರಸಿದ್ದಿ ಪಡೆದಿದೆ. ದಹಿ ಭಲ್ಲದ ವಿಶಿಷ್ಟವಾದ ಪ್ಲೇವರ್ ಗಾಗಿ ಆಹಾರಪ್ರೇಮಿಗಳು ಅವರು ತಯಾರಿಸುವ ಚಾಟ್ ಗೆ ಮುಗಿಬೀಳುತ್ತಾರೆ.
ಬಿಎಂಡಬ್ಲ್ಯೂ ಕಾರಿನಲ್ಲಿ ಮೊಸರು- ಪೂರಿಗಳನ್ನು ತಂದು ನಿತ್ಯದ ಸ್ಥಳದಲ್ಲಿ ಶರ್ಮಾ ಅವರು ಚಾಟ್ಸ್ ಮಾರಾಟ ಮಾಡುತ್ತಾರೆ. ಪ್ರತಿದಿನ ಲೆಕ್ಕವಿಲ್ಲದಷ್ಟು ದಹಿ ಭಲ್ಲಾ ಚಾಟ್ ಮಾರಿ ಈಗ ಶರ್ಮಾ ಕೋಟ್ಯಾಧಿಪತಿಯಾಗಿದ್ದಾರೆ. ಹೀಗಾಗಿಯೇ ಜನರು ಅವರನ್ನು ಕರೋಡ್‌ಪತಿ ಭಲ್ಲಾವಾಲಾ ಎಂದೂ ಕರೆಯುತ್ತಾರೆ.
ಶರ್ಮಾ ಜಿಯವರ ಚಾಟ್ ತುಂಬಾ ರುಚಿಕರವಾಗಿರುವುದರಿಂದ, ಚಾಟ್ ಸವಿಯಲು ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು, ಬೀದಿ ಅಂಗಡಿ ಸ್ಥಾಪಿಸಲು ಬೇಕಾದ ವಸ್ತುಗಳನ್ನು ಕಾರಿನಲ್ಲಿ ತರುತ್ತಾರೆ. ಆಹಾರವನ್ನು ಮಾರಾಟ ಮಾಡಲು ಪುಟ್ಟ ಸ್ಟ್ಯಾಂಡ್ ಹಾಗೂ ಟೇಬಲ್ ಬಳಸುತ್ತಾರೆ. ಸದಾ ಜನರ ಓಡಾಟ ಇರುವ ಈ ಬೀದಿಯಲ್ಲಿ ಶರ್ಮಾ ಜಿಯವರ ಚಾಟ್ ಸವಿಯದೇ ಬರೀ ಹೊಟ್ಟೆಯಲ್ಲಿ ಯಾರು ತೆರಳುವುದಿಲ್ಲ.
ನೆಹರು ಪ್ಲೇಸ್‌ನಲ್ಲಿ ಮುಕೇಶ್ ಅವರು ಕಳೆದ 36 ವರ್ಷಗಳಿಂದ ದಹಿ ಭಲ್ಲೆ ಮತ್ತು ಪಾಪ್ರಿ ಮಾರಾಟ ಮಾಡುತ್ತಿದ್ದಾರೆ. ಅಂದರೆ ಈ ಫುಡ್ ಸ್ಟ್ಯಾಂಡ್ ಅನ್ನು 1989ರಿಂದ ಮುಕೇಶ್ ಕುಮಾರ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಮುಕೇಶ್ ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದು, ಮಗ UPSC ಗೆ ತಯಾರಿ ನಡೆಸುತ್ತಿದ್ದಾರೆ.
ಶರ್ಮಾ ಅವರ ರುಚಿಯಾದ ಚಾಟ್ಸ್‌ನ್ನು ಸವಿಯಲು ಜನರು ಹಲವೆಡೆಯಿಂದ ಇಲ್ಲಿಗೆ ಬರುತ್ತಾರೆ. ಆರಂಭದಲ್ಲಿ ದಹಿ ಭಲ್ಲಾವನ್ನು ಒಂದು ಪ್ಲೇಟ್ ಗೆ ಕೇವಲ 2 ರೂ.ಗೆ ಮಾರಾಟ ಮಾಡುತ್ತಿದ್ದು ಈಗ 40 ರೂ.ಗೆ ಮಾರಾಟವಾಗುತ್ತಿದೆದೆ. ಶರ್ಮಾಜೀ ವರ್ಷದಿಂದ ವರ್ಷಕ್ಕೆ ಹೆಚ್ಚು ಲಾಭವನ್ನು ಗಳಿಸಿ ಕೋಟ್ಯಾಧಿಪತಿಗಳಾಗಿದ್ದಾರೆ.


Click it and Unblock the Notifications