ಬೆಂಗಳೂರು, ಜುಲೈ 14: ಆ ಕಂಪನಿಯಲ್ಲಿ ಲೇ ಆಫ್ ಆಯ್ತು.. ಈ ಕಂಪನಿಯಿಂದ ಒಂದೇ ದಿನ 150 ಸಿಬ್ಬಂದಿ ಕೆಲಸದಿಂದ ಕಿತ್ತುಹಾಕಿದರು... ಈ ರೀತಿಯ ಸುದ್ದಿಗಳನ್ನು 2024ರ ಆರಂಭದಿಂದಲೂ ಕೇಳಿಕೊಂಡೆ ಬಂದಿದ್ದೇವೆ. ಕೇಂದ್ರ ಸರ್ಕಾರ ಇದೀಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ. ಹಾಗಿದ್ದರೆ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಅಥವಾ ಉದ್ಯೋಗ ಸೃಷ್ಟಿಗೆ ಕಾರಣವಾಗುವಂತಹ ಕ್ರಮಗಳು ಈ ಬಾರಿಯ ಬಜೆಟ್ ನಲ್ಲಿ ಸಿಗಲಿಗವೆಯೇ?
ಸರ್ಕಾರ ಹೊಸ ಶಿಕ್ಷಣ ಪದ್ಧತಿ ಜಾರಿ ಮಾಡಿದೆ. ಆದರೆ ಈ ಹೊಸ ಶಿಕ್ಷಣ ಪದ್ಧತಿಯ ಫಲಿತಾಂಶಗಳು ಮಾತ್ರ ಕಾಣಸಿಗುತ್ತಿಲ್ಲ. ಅನೇಕ ಮಹತ್ವದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯ ವದಂತಿಗಳು ಹರಿದಾಡುತ್ತಿವೆ. ಈ ಸಮಸ್ಯೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತೀವ್ರ ತೆರನಾದ ಪರಿಣಾಮ ಬೀರುತ್ತಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಮಾತನಾಡಿದ್ದ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗರಿಯಾ ' ನಿರುದ್ಯೋಗ ಅಂಥ ದೊಡ್ಡ ಸಮಸ್ಯೆ ಅಲ್ಲ' ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಬಂಡವಾಳ ಒಂದೇ ಕಡೆ ಕೇಂದ್ರಿಕೃತವಾಗಿದ್ದು ಅದನ್ನು ಶ್ರಮಿಕ ವರ್ಗಕ್ಕೆ ತಲುಪುವಂತೆ ಮಾಡಬೇಕಿದೆ. ಸಂಬಂಧಿಸಿದ ವಿಭಾಗದಲ್ಲಿ ಹಂಚಿಕೆ ಮಾಬೇಕಿದೆ ಎಂದು ಹೇಳಿದ್ದರು.
ನ್ಯಾಶನಲ್ ಸ್ಯಾಂಪಲ್ ಸರ್ವೇ ಸಹ ನಿರುದ್ಯೋಗ ವಿಚಾರದಲ್ಲಿ ತನ್ನದೆ ಆದ ವರದಿ ಮಂಡನೆ ಮಾಡಿದೆ. ನಿರುದ್ಯೋಗ ದರದಲ್ಲಿಕೊಂಚ ಇಳಿಕೆಯಾಗಿದೆ ಎನ್ನುವುದನ್ನು ಹೇಳಿದೆ. ನಗರ ಭಾಗದಲ್ಲಿ ನಿರುದ್ಯೋಗದ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಜನವರಿ-ಮಾರ್ಚ್ 2024 ರ ಅವಧಿಯಲ್ಲಿ ನಿರುದ್ಯೋಗ ದರ ಶೇ. 6.7 ರಷ್ಟಿತ್ತು, ಹಿಂದಿನ ವರ್ಷದ ಅದೇ ಅವಧಿಯಲ್ಲಿ ಶೇ. 6.8 ರಷ್ಟಿತ್ತು.
ಈ ವಿಚಾರಗಳು ಏನೇ ಇದ್ದರೂ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಈ ಬಾರಿಯ ಬಜೆಟ್‌ನಲ್ಲಿ ಪರಿಹಾರದ ಕ್ರಮ ತೆಗೆದುಕೊಳ್ಳಲೇಬೇಕಿದೆ. ನಿರ್ಮಲಾ ಸೀತಾರಾಮನ್ ಯಾವ ಹೊಸ ಸೂತ್ರಗಳನ್ನು ಇಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications