ಬೆಂಗಳೂರಿಗರು ಬಹುದಿನಗಳಿಂದ ಕಾಯುತ್ತಿದ್ದ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಥಾಪನೆಗೆ ಸ್ಥಳ ನಿಗದಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದರ ಕಾರ್ಯಾಚರಣೆ ಕೂಡ ಆರಂಭವಾಗಲಿದೆ. ಅಮೆರಿಕಾ ವೀಸಾಗಾಗಿ ಹೈದ್ರಾಬಾದ್, ಚೈನ್ನೈಗೆ ಹೋಗುತ್ತಿದ್ದ ಬೆಂಗಳೂರಿನ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ವ್ಯಾಪಾರ ಪ್ರಯಾಣಿಕರಿಗೆ ಇದು ಸಹಾಯಕವಾಗಲಿದೆ. ಇನ್ನು ಮುಂದೆ ಕರ್ನಾಟಕದ ಜನರು ಬೇರೆ ರಾಜ್ಯಕ್ಕೆ ಹೋಗಿ ವೀಸಾ ಮಾಡಿಸಿಕೊಳ್ಳುವ ತೊಂದರೆ ಬರುವುದಿಲ್ಲ.
ಸಮಾರಂಭದ ವಿವರ ಮತ್ತು ತಾತ್ಕಾಲಿಕ ಕಾರ್ಯಾಚರಣೆ
ಈಗಾಗಲೇ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್‌ಗಾಗಿ ಸ್ಥಳ ನಿಗದಿಯಾಗಿದ್ದು, ಅದರ ಸಮರ್ಪಣಾ ಸಮಾರಂಭವನ್ನ ಆಯೋಜಿಸಲಾಗಿದೆ. ಸಮರ್ಫಣಾ ಸಮಾರಂಭವು ಜನವರಿ 17, 2025 ರಂದು ಬೆಳಿಗ್ಗೆ 9:30 ಕ್ಕೆ ವಿಟ್ಟಲ್ ಮಲ್ಯ ರಸ್ತೆಯ JW ಮ್ಯಾರಿಯಟ್‌ನಲ್ಲಿ ನಡೆಯಲಿದೆ. ನಗರದಲ್ಲಿ ಕಾನ್ಸುಲೆಟ್ ಅನ್ನು ಸ್ಥಾಪನೆ ಮಾಡುತ್ತಿರುವುದು ಮಹತ್ವದ ಮೈಲುಗಲ್ಲು ಎಂದು ಗುರುತಿಸಲಾಗಿದೆ.

ಸಧ್ಯಕ್ಕೆ ತಾತ್ಕಾಲಿಕ ಸ್ಥಳ ನಿಗದಿಯಾಗಿದ್ದು ಕಾನ್ಸುಲೇಟ್‌ಗಾಗಿ ಶಾಶ್ವತ ಜಾಗ ಇನ್ನೂ ನಿಗದಿಯಾಗಿಲ್ಲ. ಈಗ ಸಧ್ಯಕ್ಕೆ JW ಮ್ಯಾರಿಯಟ್‌ನಲ್ಲಿ ವೀಸಾ ಕಾರ್ಯಾಚರಣೆ ಆರಂಭವಾಗಲಿದೆ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್‌ಗಾಗಿ ದೊಡ್ಡ ಕ್ಯಾಂಪಸ್ ದೊರೆತ ನಂತರ ವೀಸಾ ಸಂಬಂಧೀತ ಎಲ್ಲಾ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ.
ಸ್ಥಳದ ಬಗ್ಗೆ ಊಹಾಪೋಹಗಳು
ಇನಲ್ಲಿನ್ನೂ ಅಂತಿಮ ಸ್ಥಳದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದ್ರೂ ಕೂಡ ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮಾಡಬಹುದು ಎನ್ನಲಾಗ್ತಿದೆ. ಅಲ್ಲದೆ ಈ ಹಿಂದೆ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಅವರು ವೈಟ್‌ಫೀಲ್ಡ್‌ನಲ್ಲಿ ಯುಎಸ್ ಕಾನ್ಸುಲೇಟ್ ಆರಂಭಿಸಲು ಅಲ್ಲಿರುವ ಜಾಗದ ಬಗ್ಗೆ ಪ್ರಸ್ತಾಪಿಸಿದ್ದರು.
ಸಿಲಿಕಾನ್ ಸಿಟಿ ಬೆಂಗಳೂರು ಹಲವು ದೇಶಗಳ ವೀಸಾ ಕಚೇರಿಯನ್ನ ಹೊಂದಿದೆ. ಆದ್ರೆ ಯುಎಸ್ ವೀಸಾ ಕಚೇರಿ ಮಾತ್ರ ಇರಲಿಲ್ಲ. ಇನ್ನು ಇದನ್ನು ಆರಮಭ ಮಾಡುವುದರಿಂದ ಇದು ಭಾರತದಲ್ಲಿರುವ US ರಾಯಭಾರ ಕಚೇರಿಯೊಂದಿಗಿನ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡಲಿದೆ. ಹಾಗೆ ಈ ಬೆಎಳವಣಿಗೆ ಭಾರತದಲ್ಲಿನ US ರಾಯಭಾರ ಕಚೇರಿಯ ವಿಶಾಲ ವಿಸ್ತರಣೆ ಯೋಜನೆಗಳೊಂದಿಗೆ ಕೂಡ ಹೊಂದಿಕೆಯಾಗುತ್ತದೆ.
ಭಾರತದಲ್ಲಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಯುಎಸ್ ಕಾನ್ಸುಲೇಟ್‌ಗಳು ಇವೆ. ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್‌ನಲ್ಲಿ ಕಾನ್ಸುಲರ್ ನೆಟ್‌ವರ್ಕ್ಗೆ ಈಗ ಬೆಂಗಳೂರು ಕೂಡ ಸೇರ್ಪಡೆಯಾಗಲಿದೆ. ಅಲ್ಲದೆ ಇಸು ಕರ್ನಾಟಕದ ಸಾವಿರಾರು ನಿವಾಸಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್‌ನ ಪ್ರಯೋಜನಗಳು
ವರ್ದಿತ ಪ್ರವೇಶಿಸುವಿಕೆ: ನೂತನವಾಗಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಅನ್ನು ಸ್ಥಾಪನೆ ಮಾಡುವುದರಿಮದ ಕರ್ನಾಟಕದ ಜನರು ಯುಎಸ್ ಕಾನ್ಸುಲೇಟ್‌ಗಾಗಿ ಹೊರ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ. ಹಾಗೆ ಇದು ಜನರ ಸಮಯ ಹಾಗು ಶ್ರಮ ಎರಡನ್ನು ಉಳಿಸುತ್ತದೆ.
ವ್ಯಾಪಾರ ಮತ್ತು ಬದಲಾವಣೆಗೆ ಉತ್ತೇಜನ: ಬೆಂಗಳೂರು ಈಗಾಗಲೇ ಸಾಫ್ಟ್‌ವೇರ್ ಉದ್ಯಮದ ಉತ್ಪಾದನೆಯಲ್ಲಿ ಭಾರತಕ್ಕೆ 40% ಕೊಡುಗೆಯನ್ನ ನೀಡ್ತಿದೆ. ಇನ್ನು ಇಲ್ಲಿ ಯುಎಸ್ ಕಾನ್ಸುಲೇಟ್ ಆರಂಭವಾಗುವುದರಿಂದ ಬೆಂಗಳೂರು ಹೆಚ್ಚಿನ ಪ್ರಯೋಜನಗಳನ್ನ ಪಡೆಯಲಿದೆ. ಕಾನ್ಸುಲೇಟ್ ಭಾರತ ಮತ್ತು ಯುಎಸ್ ನಡುವಿನ ತಂತ್ರಜ್ಞಾನ-ಚಾಲಿತ ಸಹಯೋಗಗಳು ಹಾಗೆ ಎರಡು ದೇಶಗಳ ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಬೆಂಬಲ: ವೃತ್ತಿಪೊರರಿಗೆ ಹಾಗು ವಿದ್ಯಾರ್ಥಿಗಳಿಗೆ ನೆಲೆಯಾಗಿರುವ ಬೆಂಗಳೂರು ಮುಂಬರುವ ದಿನಗಳಲ್ಲಿ ಯುಎಸ್‌ನಲ್ಲಿ ಶೈಕ್ಷಣಿಕ ಮತ್ತು ಕೆಲಸದ ಅವಕಾಶಗಳಿಗೆ ವೀಸಾ ಅರ್ಜಿಗಳಿಗಾಘಿ ಈ ಕಾನ್ಸುಲೇಟ್ ಸಹಾಯಕವಾಗಲಿದೆ.
ಬೆಂಗಳೂರು ಈಗಾಗಲೇ ಆಸ್ಟ್ರೇಲಿಯಾ ಕಾನ್ಸುಲೇಟ್‌ಗೆ ನೆಲೆಯಾಘಿದೆ. ಈ ಕಾನ್ಸುಲೇಟ್ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಟ್ಜ್-ಕಾರ್ಲ್‌ಟನ್‌ನಲ್ಲಿದೆ. ಬಹು ರಾಜತಾಂತ್ರಿಕ ಕಾರ್ಯಗಳ ಉಪಸ್ಥಿತಿ ತಂತ್ರಜ್ಞಾನ ಮತ್ತು ಬದಾವಣೆಗಳಿಗೆ ಜಾಗತಿಕ ಕೇಂದ್ರವಾಗಿದೆ. ಇನ್ನು ಇದು ನಗರದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನ ಕೂಡ ಒತ್ತಿಹೇಳುತ್ತದೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭ ಮಾಡುವುದರಿಂದ ಕರ್ನಾಟಕದ ಜನರು ನೆರೆ ರಾಜ್ಯಗಳಾದ ಹೈದ್ರಾಬಾದ್, ಚೆನ್ನೈಗೆ ಹೋಗಿ ವೀಸಾ ಮಾಡಿಸಿಕೊಳ್ಳುವುದು ತಪ್ಪುತ್ತದೆ. ಹಾಗೆ ನಗರದಲ್ಲಿರುವ ವೃತ್ತಿಪರರು, ವ್ಯಾಪಾರಿಗಳು ಹಾಗೆ ಮುಖ್ಯವಾಗಿ ವಿದೇಶಕ್ಕೆ ಹೋಗಿ ಓದಲು ಆಶಿಸುವ ವಿದ್ಯಾರ್ಥಿಗಳಿಗೆ ಇದು ಸುಲಭವಾಗಲಿದೆ. ಅಲ್ಲದೆ ಕಾನ್ಸುಲೇಟ್ ಆರಂಭಸುವುದು ಬಹುನಿರೀಕ್ಷಿತ ಅಭಿವೃದ್ಧಿಯಾಗಿದ್ದು ಅದು ಅನುಕೂಲತೆ, ಅವಕಾಶಗಳು ಮತ್ತು ನಿಕಟ ಅಂತರರಾಷ್ಟ್ರೀಯ ಸಹಯೋಗವನ್ನು ನೀಡುತ್ತದೆ.


Click it and Unblock the Notifications