ಬೆಂಗಳೂರು, ಸೆಪ್ಟೆಂಬರ್ 16: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಬೆಂಗಳೂರಿನ ನಿವಾಸಿಯೊಬ್ಬರು ಪ್ರಯಾಣದ ಸಮಯದಲ್ಲಿ ಗಾಡಿ ಹಲವಾರು ಸ್ಥಗಿತಗೊಳುತ್ತಿದ್ದು, ಓಲಾ ದ್ವಿಚಕ್ರ ವಾಹನವನ್ನು ಖರೀದಿಸದಂತೆ ಜನರಿಗೆ ಕರೆ ನೀಡಿದ್ದಾರೆ.
ಕಸ್ಟಮರ್ ಕೇರ್ ಸಾಫ್ಟ್‌ವೇರ್ ಅನ್ನು ಅಪಡೇಟ್ ಎಂದು ತೋರಿಸಿದೆ. ಆದರೆ ಸಮಸ್ಯೆ ಮುಂದುವರಿದಿದೆ. ಸ್ಕೂಟರ್ ಪಡೆಯಲು ತಾನು ಸುಮಾರು ಒಂದು ತಿಂಗಳು ಕಾಯಬೇಕಾಯಿತು. ಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಿದ್ದೇನೆ ಎಂದು ನಿಶಾ ಸಿ ಶೇಖರ್ ಎಂಬುವವರು ಹೇಳಿಕೊಂಡಿದ್ದಾರೆ.

"ನಾನು ಓಲಾ ಎಲೆಕ್ಟ್ರಿಕ್ ವಿರುದ್ಧ ಜಾಗೃತಿ ಮೂಡಿಸಲು ಮಾಹಿತಿ ಹರಡುತ್ತೇನೆ" ಎಂದು ನಿಶಾ ಸಿ ಶೇಖರ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಪ್ಲೆಕಾರ್ಡ್ ಅಂಟಿಸಿರುವ ತನ್ನ ಸ್ಕೂಟರ್ ನ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ "ಪ್ರಿಯ ಕನ್ನಡಿಗರೇ, ಓಲಾ ಒಂದು ಡಬ್ಬ ಗಾಡಿ. ದಯವಿಟ್ಟು ತೆಗೆದುಕೊಳ್ಳಬೇಡಿ. ಓಲಾ ತೆಗೆದುಕೊಂಡ್ರೆ ನಿಮ್ಮ ಜೀವನ ಗೋಳು. ದಯವಿಟ್ಟು ಓಲಾ ಎಲೆಕ್ಟ್ರಿಕ್. ಒಬ್ಬ ಅಸಮಾಧಾನ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.
ಹೀಗೆ ತನ್ನ ಸ್ಕೂಟರ್‌ನಲ್ಲಿ ಕಾಗದದಲ್ಲಿ ಬರೆದು ಅಂಟಿಸುವ ಮೂಲಕ, ಅದನ್ನು ನೋಡುವ ಪ್ರತಿಯೊಬ್ಬರಿಗೂ ವಾಹನದ ಬಗ್ಗೆ ರಿಯಾಲಿಟಿ ಚೆಕ್ ಅನ್ನು ನೀಡುವ ಉದ್ದೇಶ ವ್ಯಕ್ತಪಡಿಸಿದ್ದಾರೆ. ಅದನ್ನು ಖರೀದಿಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
"ಹತಾಶೆಗೊಂಡ ಅವರು ಕಂಪನಿಯ ವಿರುದ್ಧ ಅನನ್ಯವಾಗಿ ಪ್ರತಿಭಟಿಸುವುದಲ್ಲದೆ, ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ನಮ್ಮ ಪ್ರಕರಣವನ್ನು ಒಪ್ಪಿಕೊಂಡಿದೆ ಮತ್ತು ಓಲಾ ಕಂಪೆನಿಗೆ ನೋಟಿಸ್ ಕಳುಹಿಸಿದೆ" ಎಂದು ಅವರು ಬರೆದಿದ್ದಾರೆ.
ಆಗಸ್ಟ್ 4 ರ ಪೋಸ್ಟ್‌ನಲ್ಲಿ, ನಿಶಾ ತನ್ನ ಸ್ಕೂಟರ್ ಅನ್ನು ರಿಪೇರಿ ಮಾಡಲು ಓಲಾ ಎಲೆಕ್ಟ್ರಿಕ್‌ನ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಆದರೆ "ತರಬೇತಿ ಪಡೆಯದ ತಂತ್ರಜ್ಞರು" 1.5 ಗಂಟೆಗಳ ದುರಸ್ತಿ ಮಾಡಿದ ನಂತರ ಅದು ಮಧ್ಯದಲ್ಲಿ ಕೆಟ್ಟುಹೋಯಿತು ಎಂದು ಬರೆದುಕೊಂಡಿದ್ದಾರೆ. ರಾತ್ರಿ 1 ಕಿ.ಮೀ ಸ್ಕೂಟರ್ ಅನ್ನು ಮನೆಯ ಕಡೆಗೆ ತಳ್ಳಿಕೊಂಡು ಹೋಗಿದ್ದಾಗಿ ಹೇಳಿಕೊಂಡಿದ್ದಾಳೆ.
"1,62,000 ಪಾವತಿಸಿದ ನಂತರ, ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರನ್ನು ಗುಲಾಮರಿಗಿಂತ ಕೆಟ್ಟದಾಗಿ ಪರಿಗಣಿಸುತ್ತದೆ. ಇದು ಅವರ ತಪ್ಪು ಮತ್ತು ನಾನು ನನ್ನ ಕೆಲಸವನ್ನು ಬಿಟ್ಟು ಈ ವೇಸ್ಟ್ ಇ-ಸ್ಕೂಟರ್ ಅನ್ನು ಸೇವಾ ಕೇಂದ್ರಕ್ಕೆ ಏಕೆ ಎಳೆಯಬೇಕು? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಲಾ ಎಲೆಕ್ಟ್ರಿಕ್ ಶೋರೂಮ್‌ಗೆ ಬೆಂಕಿ:
ಹೊಸದಾಗಿ ಖರೀದಿಸಿದ ಇ-ಸ್ಕೂಟರ್‌ನ ಸೇವೆಯ ಬಗ್ಗೆ ಅಸಮಾಧಾನದ ಕಾರಣ ಓಲಾ ಎಲೆಕ್ಟ್ರಿಕ್ ಶೋರೂಮ್‌ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಭಾರತದ ಪ್ರಮುಖ ಇ-ಸ್ಕೂಟರ್ ತಯಾರಕ ಓಲಾ ಎಲೆಕ್ಟ್ರಿಕ್‌ನ ಸೇವೆಯ ಗುಣಮಟ್ಟದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು.
ವರದಿಗಳ ಪ್ರಕಾರ, ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಮೊಹಮ್ಮದ್ ನದೀಮ್ ಅವರು 25 ದಿನಗಳ ಹಿಂದೆ ಶೋರೂಮ್‌ನಿಂದ ಓಲಾ ಸ್ಕೂಟರ್ ಅನ್ನು ಖರೀದಿಸಿದ್ದರು. ಆದರೆ ಅದು ಪದೇ ಪದೇ ತೊಂದರೆ ಉಂಟು ಮಾಡಿತ್ತು. ವಾಹನದ ಸಮಸ್ಯೆಗಳ ನಂತರ, ನದೀಮ್ ಬೆಂಗಳೂರಿನಿಂದ ಸುಮಾರು 570 ಕಿಲೋಮೀಟರ್ ದೂರದಲ್ಲಿರುವ ಕಲಬುರಗಿಯಲ್ಲಿರುವ ಶೋರೂಮ್‌ನಲ್ಲಿ ಪದೇ ಪದೇ ಸೇವೆಯನ್ನು ಕೋರಿದರು. ಕಲಬುರಗಿಯ ಪೊಲೀಸ್ ಆಯುಕ್ತರ ಪ್ರಕಾರ, ನದೀಮ್ ಹಲವು ಬಾರಿ ಶೋರೂಮ್‌ಗೆ ಹೋದರು" ಆದರೆ ಪ್ರತಿಕ್ರಿಯೆಯಿಂದ ಅವರು ಸಮಾಧಾನಗೊಳ್ಳಲಿಲ್ಲ. ಆಗ ಮಂಗಳವಾರದಂದು ಶೋರೂಮ್ ಗೆ ಪೆಟ್ರೋಲ್ ತಂದು ಆರು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ 850,000 ರೂ.ಗಳಷ್ಟು ಹಾನಿ ಸಂಭವಿಸಿತು, ಆದರೂ ಯಾವುದೇ ಗಾಯಗಳು ವರದಿಯಾಗಿಲ್ಲ.


Click it and Unblock the Notifications