ವಿಶ್ವದ ದುಬಾರಿ ಅಣಬೆಯ ಬೆಲೆ ಚಿನ್ನಕ್ಕೆ ಸಮ.!ಗುಚ್ಚಿಯ ವಿಶೇಷತೆ ಏನು?

ಅಣಬೆಗಳು ಪೌಷ್ಟಿಕಾಂಶದ ಆಗರ. ಅವು ಪ್ರೋಟೀನ್, ವಿಟಮಿನ್ ಅದರಲ್ಲೂ ವಿಶೇಷವಾಗಿ ಬಿ ವಿಟಮಿನ್ ಜೊತೆಗೆ ಖನಿಜಾಂಶ ಮತ್ತು ನಾರಿನಂಶವನ್ನು ಒಳಗೊಂಡಿರುತ್ತವೆ. ಇವು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಈ ಹಿಂದಿನ ಕಾಲದಲ್ಲಿ ಅಣಬೆ ಸೀಸಲ್ ಫುಡ್ ಆಗಿತ್ತು. ಆದರೆ ಈಗ ಹಾಗಲ್ಲ. ಇದರ ಸವಿಯನ್ನು ವರ್ಷಪೂರ್ತಿಯಾಗಿ ಸವಿಯಬಹುದು. ಯಾಕೆಂದರೆ ಕೃಷಿಕರು ಅಣಬೆ ಸುಲಭವಾಗಿ ಕೃಷಿ ಮಾಡಿ ಹೆಚ್ಚು ಆದಾಯ ಗಳಿಸುತ್ತಾರೆ. ಜೊತೆಗೆ ಇದರಿಂದಾಗಿ ವಿಧ ವಿಧವಾದ ಅಣಬೆಗಳು ಕೂಡಾ ಮಾರುಕಟ್ಟೆಗೆ ಕಾಲಿಡುವುದರಿಂದ ಯಾವಾಗ ಬೇಕಿದ್ರೂ ಅಣಬೆ ಖಾದ್ಯ ತಯಾರಿಸಿಕೊಳ್ಳಬಹುದು. ಇದಲ್ಲದೇ ಅಣಬೆಯನ್ನು ಆಹಾರವಾಗಿಯೂ ಔಷಧಿಯಾಗಿಯೂ ಹಿಂದಿನಿಂದಲೂ ಬಳಸಲಾಗುತ್ತಿದೆ. ಏಕೆಂದರೆ ಇದು ಅನೇಕ ವಿಧದ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ.

ಈ ಅಣಬೆಯ ಬೆಲೆ ಚಿನ್ನಕ್ಕೆ ಸಮ.! ಗುಚ್ಚಿಯ  ವಿಶೇಷತೆ ಏನು?

ಅಣಬೆ ಇತರ ತರಕಾರಿಗಳಿಂದ ಒಂಚೂರು ದುಬಾರಿ. ಆದರೆ ಅದರ ರುಚಿ ಕೂಡಾ ಒಂದು ತೂಕ ಹೆಚ್ಚೇ ಅನ್ನಬಹುದು. ಅಣಬೆ ಮಾತ್ಯಾಕೆ ಈಗ ಅಂದ್ರೆ, ನಿಮಗೆ ಭಾರತದ ದುಬಾರಿ ಅಣಬೆಯ ಬಗ್ಗೆ ತಿಳಿದಿದೆನಾ? ಇಲ್ಲವಾದ್ರೆ ಇದ್ರ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದ ಅತ್ಯಂತ ಮೌಲ್ಯಯುತ ಅಣಬೆಗಳನ್ನು ಗುಚ್ಚಿ ಮಶ್ರೂಮ್‌ಗಳು(Gucchi Mushrooms) ಎಂದು ಕರೆಯಲಾಗುತ್ತದೆ. ಚಿನ್ನದ ಬೆಲೆಯನ್ನು ಹೊಂದಿರುವ ಇದರ ವೈಜ್ಞಾನಿಕ ಹೆಸರು 'ಮಾರ್ಕುಲಾ ಎಸ್ಕುಲೆಂಟಾ'( Morchella esculenta). ಇದು ಸುಂದರವಾದ ಹಿಮಾಲಯ ಪರ್ವತಗಳಲ್ಲಿ ಅಡಗಿರುವ ಅಪರೂಪದ ಮತ್ತು ರುಚಿಕರವಾದ ಮಶ್ರೂಮ್ ಗಳಾಗಿವೆ.

ಗುಚ್ಚಿ ಮಶ್ರೂಮ್ ಹೆಸರೇ ಹೇಳುವಂತೆ ನೋಡಲು ಗುಚ್ಚ ಗುಚ್ಚದಂತೆ ಅಥವಾ ಜೇನುಗೂಡಿನಂತಹ ರಚನೆಯನ್ನು ಹೊಂದಿರುತ್ತದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದಾಗಿರುವ ಇದು ತಿಳಿ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಅಣಬೆಯ ತಿರುಳು ಸ್ಪಂಜಿನಂತಿರುತ್ತದೆ ಮತ್ತು ಕಾಯಿಗಳಂತಹ ವಿಶೇಷವಾರ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಪ್ರತಿ ಅಣಬೆಗಳು ಪ್ರತಿ ಕಿಲೋಗ್ರಾಂಗೆ 40,000 ರೂ.ಗಳವರೆಗೆ ಮಾರಾಟವಾಗುತ್ತದೆ. ಆದರೆ ಈ ಮಶ್ರೂಮ್ ಏಕೆ ಇಷ್ಟೊಂದು ದುಬಾರಿಯಾಗಿದೆ ಯಾಕೆ?

ಪರ್ವತದ ದಟ್ಟಾರಣ್ಯದಲ್ಲಿ ಅಡಗಿದೆ ಗುಚ್ಚಿ.!

ಸಾಮಾನ್ಯವಾಗಿ ಅಣಬೆಗಳನ್ನು ಸೀಸನ್ ಆಗಿ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವುಗಳನ್ನು ಕೃಷಿ ಮಾಡಿ ಬೆಳೆಯಬಹುದು. ಆದರೆ ಗುಚ್ಚಿ ಅಣಬೆಗಳು ಕಾಡಿನಲ್ಲಿ ಮಾತ್ರ ಬೆಳೆಯುತ್ತವೆ. ಅದರಲ್ಲೂ ಪರ್ವತ ಪ್ರದೇಶದಲ್ಲಿ ಹಿಮ ಕರಗಿದ ನಂತರ, ಮತ್ತು ಕಾಡಿನ ಬೆಂಕಿಯ ನಂತರ, ವಿಶೇಷ ವಾತಾವರಣದಲ್ಲಿ ಮಾತ್ರ ಈ ಅಣಬೆ ಕಾಣಿಸಿಕೊಳ್ಳುತ್ತವೆ. ಇದರಿಂದ ಅವುಗಳನ್ನು ಪತ್ತೆ ಹಚ್ಚುವುದು ಅಥವಾ ಹುಡುಕುವುದು ತುಂಬಾ ಕಷ್ಟ. ಈ ಅಣಬೆಗಳು ಮುಖ್ಯವಾಗಿ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತದೆ. ಸ್ಥಳೀಯ ಹಳ್ಳಿಗರು ಚಳಿಯಿಂದ ಕೂಡಿದ ಮತ್ತು ಕಠಿಣವಾದ ದಾರಿಗಳಲ್ಲಿ ಎತ್ತರದ ಪರ್ವತದ ಕಾಡುಗಳಲ್ಲಿ ವಾರಗಟ್ಟಲೆ ಅಲೆದಾಡಿ ಅವುಗಳನ್ನು ಹುಡುಕಿ ತರುತ್ತಾರೆ.

ಹುಡುಕುವುದೇ ದೊಡ್ಡ ಸವಾಲು

ಗುಚ್ಚಿ ಅಣಬೆಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ. ಜನರು ಕಡಿದಾದ, ಅಪಾಯಕಾರಿ ಪ್ರದೇಶಗಳನ್ನು ಏರಿ, ಎಲೆಗಳ ರಾಶಿಗಳ ಕೆಳಗೆ ಹುಡುಕಬೇಕಾಗುತ್ತದೆ. ಈ ಅಣಬೆಗಳು ಕೆಲವು ವಾರಗಳವರೆಗೆ ಮಾತ್ರ ಕಾಣಿಸಿಕೊಳ್ಳುತ್ತವೆ, ಮತ್ತು ಅವು ಬೆಳೆಯುತ್ತವೆಯೋ ಇಲ್ಲವೋ ಎಂಬುದು ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಹೆಚ್ಚು ಮಳೆಯಾದರೆ ಅಥವಾ ಸಾಕಷ್ಟು ತೇವಾಂಶವಿಲ್ಲದಿದ್ದರೆ, ಅಣಬೆಗಳು ಬೆಳೆಯುವುದಿಲ್ಲ. ಈ ಕೆಲಸವು ಅಪಾಯಕಾರಿ ಕೂಡ - ಅಣಬೆಗಳನ್ನು ಹುಡುಕುವವರು ಚಿರತೆಗಳು ಅಥವಾ ಹಿಮಾಲಯದ ಕರಡಿಗಳಂತಹ ಕಾಡು ಪ್ರಾಣಿಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ಅನೇಕ ಜನರು ಈ ಅಣಬೆಗಳನ್ನು ಒಂದೇ ಸಮಯದಲ್ಲಿ ಹುಡುಕುತ್ತಿರುತ್ತಾರೆ, ಇದು ಹುಡುಕಾಟವನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸುತ್ತದೆ. ಒಮ್ಮೆ ಸಿಕ್ಕಿದ ನಂತರ, ಅಣಬೆಗಳನ್ನು ಎಚ್ಚರಿಕೆಯಿಂದ ಆರಿಸಿ, ಅವುಗಳನ್ನು ತಾಜಾ ಮತ್ತು ರುಚಿಕರವಾಗಿಡಲು ದಿನಗಟ್ಟಲೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಫಾರ್ಮ್ನಲ್ಲಿ ಈ ಅಣಬೆಗಳನ್ನು ಸ್ವತಃ ಬೆಳೆಯುಲು ಪ್ರಯತ್ನಿಸುತ್ತಿದ್ದಾರೆ.

ಅಡುಗೆಮನೆಯಲ್ಲಿ, ಗುಚ್ಚಿ ಅಣಬೆಗೆ ಸರಿಸಾಟಿ ಇಲ್ಲದ ಕಾರಣ, ಹಾಗೂ ಅತ್ಯಂತ ಸ್ವಾದ ಹಾಗೂ ಸುವಾಸನೆಯುಕ್ತವಾಗಿ ಇದರಿಂದ ಯಾವುದೇ ಖಾದ್ಯವನ್ನು ತಯಾರಿಸಿದರೂ ಅವುಗಳನ್ನು ವಿಶೇಷವಾಗಿಸುತ್ತದೆ. ಅವು ತುಂಬಾ ದುಬಾರಿಯಾಗಿರುವುದರಿಂದ, ಅವುಗಳನ್ನು ಹೆಚ್ಚಾಗಿ ವಿಶೇಷ ಸಂದರ್ಭಗಳಲ್ಲಿ ಅಥವಾ ಫ್ಯಾನ್ಸಿ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಬಳಸಲಾಗುತ್ತದೆ. ಜೊತೆಗೆ ಅವುಗಳನ್ನು ಸಾಂಪ್ರದಾಯಿಕ ಔಷಧದಲ್ಲಿಯೂ ಬಳಸಲಾಗುತ್ತದೆ. ಈ ಅಣಬೆಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+