ನವದೆಹಲಿ, ಮಾರ್ಚ್ 7: ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ 14,58,380 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದ್ದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಇವರು ಮಾರ್ಚ್ 1ರಿಂದ ಮಾರ್ಚ್ 3ರವರೆಗೆ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಅಂತರಾಷ್ಟ್ರೀಯ ಅತಿಥಿಗಳಾಗಿ ಆಗಮಿಸಿದ್ದರು. ಗುಜರಾತ್ ನ ಜಾಮ್‌ನಗರದ ಭವ್ಯ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮೆಟಾ ಸಂಸ್ಥಾಪಕ "ವಂತಾರ" ಎಂದರೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸಿದ್ಧಪಡಿಸಿದ ವಿಶ್ವದ ಅತಿದೊಡ್ಡ ಪ್ರಾಣಿ ರಕ್ಷಣಾ ಕೇಂದ್ರ ಮತ್ತು ಪುನರ್ವಸತಿ ಸೌಲಭ್ಯವನ್ನು ನೋಡಲು ಬಯಸಿದ್ದರು.

ಇದೇ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯಾವಳಿಗಳಲ್ಲಿ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅನಂತ್ ಅಂಬಾನಿ ಅವರ ಐಷಾರಾಮಿ ಗಡಿಯಾರವನ್ನು ಹೊಗಳುವುದನ್ನು ಕಾಣಬಹುದುದಾಗಿದೆ.
ಜುಕರ್‌ಬರ್ಗ್ ದಂಪತಿಗೆ ಅನಂತ್ ಅಂಬಾನಿ ವಾಚ್ ಬಗ್ಗೆ ಕುತೂಹಲ:
ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ, ಜುಕರ್‌ಬರ್ಗ್ ಡಿಸೈನರ್ ಉಡುಪನ್ನು ಧರಿಸಿದ್ದರೂ, ಇವರು ಸಾಮಾನ್ಯವಾಗಿ ಸರಳವಾದ ಟೀ ಶರ್ಟ್ ಮತ್ತು ಜೀನ್ಸ್ ನಲ್ಲಿಯೇ ಹೆಚ್ಚಾಗಿ ಕಂಡುಬರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅನಂತ್ ಅವರು ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ನಿಂತು ಮಾತನಾಡುತ್ತಿದ್ದರು. ಪ್ರಾಣಿ ರಕ್ಷಣಾ ಕೇಂದ್ರ "ವಂತಾರ" ಕಾಡಿನಲ್ಲಿ ಒಂದು ಸುತ್ತು ಹಾಕಿ ಬರುವ ಬಗ್ಗೆ ಅನಂತ್ ಜುಕರ್‌ಬರ್ಗ್ ದಂಪತಿ ಕೇಳಿದ್ದಾರೆ. ಅಲ್ಲಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡುವ ಬಗ್ಗೆ ಅನಂತ್ ಮಾತನಾಡಿದ್ದಾರೆ. ಇದೇ ಸಂದರ್ಭ ಅನಂತ್ ಅವರ ಮನಮೋಹಕ ವಾಚ್ ಪ್ರಿಸ್ಸಿಲ್ಲಾ ಅವರ ಗಮನ ಸೆಳೆದಿದೆ.
ವಾಚ್ನ ಬಗ್ಗೆ ತಕ್ಷಣ ಮೆಚ್ಚುಗೆ ವ್ಯಕ್ತಪಡಿಸಿ ಈ ಗಡಿಯಾರ ಅದ್ಭುತವಾಗಿದೆ, ತುಂಬಾ ಕೂಲ್ ಲುಕ್ ನೀಡುತ್ತಿದೆ ಈ ವಾಚ್ನ ಯಾವ ಕಂಪನಿ ತಯಾರಿಸಿದೆ?' ಎಂದು ಕೇಳಿದ್ದಾರೆ. ಇದೇ ವೇಳೆ ಜುಕರ್‌ಬರ್ಗ್ ಕೂಡಾ ಸಂಭಾಷಣೆಗೆ ಸೇರಿಕೊಂಡು "ಹೌದು, ನಾನು ವಾಚ್ ಬಗ್ಗೆ ಈಗಾಗಲೇ ಹೇಳಿದ್ದೇನೆ" ಎಂದು ಹೇಳಿದ್ದಾರೆ.
'ನಿಮಗೆ ಗೊತ್ತಾ, ನಾನು ಎಂದಿಗೂ ವಾಚ್ಗಳನ್ನು ಕೊಳ್ಳಲು ಬಯಸಲಿಲ್ಲ. ಆದರೆ ಇದನ್ನು ನೋಡಿದ ನಂತರ, ಈ ಕೈಗಡಿಯಾರ ಕೂಲ್ ಆಗಿದೆ ವಾಚ್ ಚೆನ್ನಾಗಿ ಕಾಣುತ್ತದೆ' ಎಂದಿದ್ದಾರೆ .
ಅನಂತ್ ಅಂಬಾನಿ ಅವರ ಕೈಯಲ್ಲಿ ಇದ್ದಿದ್ದ ವಾಚ್ನ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ ಎನ್ನಲಾಗಿದೆ. ರಿಶಾರ್ ಮಿಲ್ 80000 ಡಾಲರ್‌ಗಳಿಂದ 1 ಮಿಲಿಯನ್ ಡಾಲರ್‌ಗಳವರೆಗೆ ವೆಚ್ಚವಾಗಬಹುದಾದ ಅತಿ ದುಬಾರಿ ಐಷಾರಾಮಿ ಕೈಗಡಿಯಾರಗಳಿಗೆ ಹೆಸರುವಾಸಿಯಾಗಿದೆ. ಇಂಗ್ಲಿಷ್ನಲ್ಲಿ ಇದರ ಸ್ಪೆಲ್ಲಿಂಗ್ Richard Mille ಎಂದಿದ್ದರೂ ಇದನ್ನು ರಿಶಾರ್ ಮಿಲ್ ಎಂದೇ ಉಚ್ಚರಿಸುತ್ತಾರೆ.


Click it and Unblock the Notifications