ಶಾಸ್ತ್ರೋಕ್ತಾಗಿ ಒಂದು ಅಚ್ಚುಕಟ್ಟಾದ ಮದುವೆ ಮಾಡಿ ಮಗಳನ್ನ ಕಳುಹಿಸಿಕೊಡಬೇಕು ಅಂದ್ರೆ ಏನಿಲ್ಲ ಅಂದ್ರೂ ಕನಿಷ್ಠ 15ರಿಂದ 25 ಲಕ್ಷ ರೂಪಾಯಿ ಬೇಕು. ಇದು ಹೆಣ್ಣೆತ್ತವರ ಪಾಲಿಗೆ ದೊಡ್ಡ ಸವಾಲೇ ಸರಿ. ಇಡೀ ಜೀವಮಾನದ ಉಳಿತಾಯವನ್ನ ಮಗಳ ಮದುವೆಗಾಗಿ ಖರ್ಚು ಮಾಡೋ ತಂದೆ, ಆಸ್ತಿ ಮಾರಿ ಮಗಳ ಮದುವೆ ಮಾಡೋ ಕಟುಂಬ ಹೀಗೆಲ್ಲಾ ನೋಡಿರ್ತೀರಾ. ಸರಿಯಾದ ಪ್ಲಾನಿಂಗ್ ಇಲ್ಲದಿದ್ರೆ ಮದುವೆ ಮಾಡೋದು ಸುಲಭದ ಸಂಗತಿಯಂತೂ ಅಲ್ಲ.
ಇಂತಹ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡಬಹುದಾದ ಉಪಾಯಗಳು ಅಂದ್ರೆ ಅದು ನಾವು ಮಾಡುವ ಹೂಡಿಕೆಗಳು. ಭವಿಷ್ಯದ ಬಗ್ಗೆ ಈಗಲೇ ಯೋಚಿಸಿ ಒಂದಿಷ್ಟು ಹೂಡಿಕೆ ಮಾಡಿದವರು ಒಂದು ಹಂತಕ್ಕೆ ಸೇಫ್ ಆಗ್ತಾರೆ. ಆದ್ರೆ ಹೂಡಿಕೆಯ ಆಯ್ಕೆ ಕೂಡ ಅಷ್ಟೇ ಸಕ್ತ ಮತ್ತು ಸಮಂಸಜವಾಗಿರಬೇಕು. ಇದೀಗ ಹೆಣ್ಣು ಮಕ್ಕಳ ಮದುವೆಗೆ ತಂದೆಯಂದಿರು ಕಷ್ಟ ಪಡಬಾರದು ಎಂಬ ಕಾರಣಕ್ಕೆ ಹೊಸ LIC ಸ್ಕೀಮ್ ಒಂದು ಇದೀಗ ಜಾರಿಗೆ ಬಂದಿದೆ.

ಏನಿದು LIC ಕನ್ಯಾದಾನ ಪಾಲಿಸಿ ?!
ಇದು ಹೆಣ್ಣು ಮಕ್ಕಳ ಮದುವೆ ಕಾಳಜಿಯಿಂದ ಜಾರಿಗೆ ಬಂದಿರುವ ಹೊಸ ಸ್ಕೀಮ್. ಎಲ್ ಐ ಸಿ ಹೆಣ್ಣು ಮಕ್ಕಳ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ ಹೊಸ ಯೋಜನೆಯನ್ನು ಆರಂಭ ಮಾಡಿದೆ. ಅದುವೇ ಎಲ್ಐಸಿಯ ಕನ್ಯಾದಾನ ಪಾಲಿಸಿ (LIC Kanyadan Policy) ಯೋಜನೆಯಾಗಿದೆ. ಇಲ್ಲಿ ಕೂಡಿಟ್ಟ ಹಣದ ಮೂಲಕ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ಈ ಹಣವನ್ನ ಖರ್ಚು ಮಾಡಬಹುದಾಗಿದೆ.
ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಕೀಮ್ ಸೆಲೆಕ್ಟ್ ಮಾಡಬಹುದು. ಈ ಪಾಳಿಸಿಯ ಅವಧು 25 ವರ್ಷಗಳಿಗೆ ವಿಸ್ತರಿಸಿದೆ. ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ಟ್ಯಾಕ್ಸ್ ಅಪ್ಲೈ ಆಗೋದಿಲ್ಲ. ಒಂದು ವೇಳೆ ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟಲ್ಲಿ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಕೂಡ ದೊರೆಯಲಿದೆ.
ಈ ಪಾಲಿಸಿಯಲ್ಲಿ ಎರಡು ರೀತಿಯ ಆಯ್ಕೆಗಳಿದೆ. ಒಂದು 25 ವರ್ಷದ ಕೊನೆಯಲ್ಲಿ 31 ಲಕ್ಷ ಹಣ ಪಡೆದುಕೊಳ್ಳಬಹುದಾದಾ ಪ್ಲಾನ್ . ಇದಕ್ಕೆ ನೀವು ಪ್ರತಿ ತಿಂಗಳು 4530ರೂ ಗಳನ್ನ ಪಾವತಿಸಬೇಕು. ಮತ್ತೊಮದು ಪ್ಲಾನ್ನಲ್ಲಿ ಪ್ರತಿ ತಿಂಗಳು ನೀವು 3630 ರೂ ಕಟ್ಟಲು ಮುಂದಾದ್ರೆ 25 ವರ್ಷದ ಕೊನೆಗೆ 27 ಲಕ್ಷ ನಿಮ್ಮದಾಗಲಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.
ಈ ಪಾಲಿಸಿಗೆ ಅಪ್ಲೈ ಮಾಡಲು ಹೆಣ್ಣು ಮಗುವಿನ ತಂದೆಯ ವಯಸ್ಸು 18 ಮತ್ತು 50ರ ಒಳಗೆ ಇರಬೇಕು . ಹೆಣ್ಣುಮಗುವಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು. ಈ ಯೋಜನೆಗೆ ತಂದೆಯ ಮತ್ತು ಮಗುವಿನ ಆಧಾರ್ ಕಾರ್ಡ್ ಪ್ರತಿ, ಆದಾಯ ಪ್ರಮಾಣ ಪತ್ರ, ವಿಳಾಸ ಪ್ರಮಾಣ ಪತ್ರ, ಮಗುವಿನ ಜನನ ಪ್ರಮಾಣ ಪತ್ರ, ಪೋಟೋ ಇತ್ಯಾದಿ ದಾಖಲೆ ನೀಡೀ ನೊಂದಾಯಿಸಿಕೊಂಡದರೆ ನಿಮ್ಮ ಪಾಲಿಸಿ ರೆಡಿ.


Click it and Unblock the Notifications