ಕರ್ನಾಟಕದ ವಿವಿಧೆಡೆ ಈಗಾಗಲೇ ವಿದ್ಯುತ್ ವ್ಯತ್ಯಯದ (Power Cut) ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಬೆಸ್ಕಾಂ ವಿದ್ಯುತ್ ಸ್ಥಾವರ ಹಾಗೂ ಉಪಕೇಂದ್ರಗಳ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆ ಇದೀಗ ಬೆಸ್ಕಾಂ ಇಲಾಖೆ ಬೆಂಗಳೂರಿನಲ್ಲೂ ಪವರ್ ಕಟ್ ಘೋಷಿಸಿದೆ. ಡಿಸೆಂಬರ್ 19 ಮತ್ತು 20ಕ್ಕೆ ವಿದ್ಯುತ್ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಕೆಲವೆಡೆ ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ. ನಿರ್ವಹಣಾ ಕಾರ್ಯಗಳ ಕಾರಣದಿಂದ ಬೈಯಪ್ಪನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ವಿದ್ಯುತ್ ಕಡಿತ ಉಂಟಾಗಲಿದೆ.

ಬೈಯಪ್ಪನಹಳ್ಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಡಿಸೆಂಬರ್ 14ರಿಂದ 19ರವರೆಗೆ ಪ್ರತಿದಿನ 12 ಗಂಟೆಗಳ ಕಾಲ (ಬೆಳಿಗ್ಗೆ 10ರಿಂದ ರಾತ್ರಿ 10) ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಬೈಯಪ್ಪನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕಾಗಿ ಈ ಅಡಚಣೆ ಸಂಭವಿಸಲಿದೆ ಎಂದು ಬೆಸ್ಕಾಂ ಹೇಳಿದೆ.
ಎಲ್ಲೆಲ್ಲಾ ಪವರ್ ಕಟ್?
ಮಾದೇಶ್ವರನಗರ, ಪ್ರಸನ್ನ ಲೇಔಟ್, ಹೊಸಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ನಾದಕೇರಪ್ಪ ಕೈಗಾರಿಕಾ ಪ್ರದೇಶ, ಹೆರೋಹಳ್ಳಿ, ತುಂಗಾನಗರ, ವಿಶ್ವೇಶ್ವರನಗರ.
ಅಲ್ಲದೆ, ಅಂಜನಾ ನಗರ, ಅನ್ನಪೂರ್ಣೇಶ್ವರಿ ನಗರ, ಸುಂಕದಕಟ್ಟೆ, ನೀಲಗಿರಿ ಹೆಗ್ಗನಹಳ್ಳಿ, ಕೊಡಿಗೇಹಳ್ಳಿ, ಸ್ಕಂದ ನಗರ, ಚಿಕ್ಕಗೊಲ್ಲರಹಟ್ಟಿ, ಸೀಗೆಹಳ್ಳಿ, ಪದ್ಮಾವತಿ ಕೈಗಾರಿಕಾ ಪ್ರದೇಶ, ಶಾಂತಿಲಾಲ್ ಲೇಔಟ್, ಬಿಬಿಎಂಪಿ ಪ್ಲಾಂಟ್, ರಂಗೇಗೌಡ ಲೇಔಟ್, ಕನ್ನಹಳ್ಳಿ, ಸುಂಕದಕಟ್ಟೆ ಕೈಗಾರಿಕಾ ಪ್ರದೇಶ, ಡಿ ಗ್ರೂಪ್ ಲೇಔಟ್, ಆರ್‌ಎಚ್‌ಸಿಎಸ್‌ಎಸ್ ನಲ್ಲಿಯೂ ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ.
ಡಬಲ್ ರೋಡ್ ಅಭಿವೃದ್ಧಿಗೆ ಮುಂದು!
ಬೆಂಗಳೂರಿನ ಡಬಲ್ ರೋಡ್‌ನ ಪಾದಚಾರಿ ಮಾರ್ಗ ಅಭಿವೃದ್ಧಿಗೆ ಅಡ್ಡಿಯಾಗಿದ್ದ 11ಕೆವಿ/ಸೆಕೆಂಡರಿ ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ಕಂಬಗಳ ಸ್ಥಳಾಂತರಕ್ಕೆ ಬೆಸ್ಕಾಂ ಡಿಸೆಂಬರ್ 10 ರಿಂದ 20ರವರೆಗೆ ಕಾರ್ಯ ಕೈಗೊಂಡಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಈ ಕೆಲಸ ನಡೆಯಲಿದ್ದು, 7 ಗಂಟೆಗಳ ಕಾಲ ವಿದ್ಯುತ್ ಕಡಿತವಿರಲಿದೆ ಎಂದು ವರದಿಯಾಗಿದೆ.
ಇನ್ನು ಕಾಮಗಾರಿ ಹಿನ್ನೆಲೆ ಎಫ್-10 ಪ್ರಭಾಕರ್ ಲೇಔಟ್ ಮತ್ತು ಎಫ್-22 ಕೆಇಬಿ ಕ್ವಾರ್ಟರ್ಸ್ ಫೀಡರ್ಗಳಿಗೆ ವಿದ್ಯುತ್ ಸರಬರಾಜು ಮಾಡುವ 11ಕೆವಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ರಸ್ತೆ, ಕನಂಪಲ್ಲಿ, ಪ್ರಭಾಕರ್ ಲೇಔಟ್, ಗುಂಡಪ್ಪ ಲೇಔಟ್, ಅಂಜನಿ ಲೇಔಟ್, ಆಶ್ರಯ ಲೇಔಟ್, ಕೆಂಪಮ್ಮ ಲೇಔಟ್‌ಗಳಲ್ಲೂ ಪವರ್ ಕಟ್ ಇರಲಿದೆ ಎನ್ನಲಾಗಿದೆ.
ಇನ್ನು ನಿಗದಿತ ವಿದ್ಯುತ್ ಕಡಿತದ ಕುರಿತು ಹೆಚ್ಚಿನ ಮಾಹಿತಿಗಾಗಿ, ನಿರಂತರ ಅಪ್ಡೇಟ್‌ಗಾಗಿ, ಬೆಸ್ಕಾಂ ಅಧಿಕೃತ ವೆಬ್‌ಸೈಟ್ http://bescom.karnataka.gov.in ಗೆ ಓಪನ್ ಮಾಡಿ ತಿಳಿಯಬಹುದು.


Click it and Unblock the Notifications