ಯಾವುದೇ ಕಾಮಗಾರಿಗಳಿದ್ದಾಗ ಬೆಂಗಳೂರಿನಲ್ಲಿ ಬೆಸ್ಕಾಂ ಇಲಾಖೆ (BESCOM) ಪವರ್ ಕಟ್ ಘೋಷಣೆ ಮಾಡುತ್ತವೆ. ಆ ಪ್ರಕಾರ ಕೆಲವು ದಿನಗಳವರೆಗೆ, ನಿರ್ದಿಷ್ಟ ಅವಧಿಯವರೆಗೆ ಬೆಂಗಳೂರಿನಲ್ಲಿ (Bengaluru) ಕರೆಂಟ್ ಇರುವುದಿಲ್ಲ. ಅದೇ ರೀತಿ ಈ ವಾರವಿಡೀ ಬೆಂಗಳೂರಿನ ಹಲವು ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೀಗ ವಾರದ ಅಂತ್ಯ ಇಂದು (ಶನಿವಾರ) ಕೂಡಾ ಬೆಂಗಳೂರಿನ ಕೆಲವು ನಗರಗಳಲ್ಲಿ ಕರೆಂಟ್ ಇರಲ್ಲ (No Electricity) ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ "ನೋ ಕರೆಂಟ್"!
ವೀಕೆಂಡ್‌ನಲ್ಲಿ ಮಜಾ ಮಾಡ್ಬೇಕು ಅನ್ನೋರಿಗೆ ಇಲ್ಲೊಂದು ಬ್ಯಾಡ್ ನ್ಯೂಸ್ ಇದೆ. ಅದೇನೆಂದರೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಸ್ಥಾವರಗಳು ಮತ್ತು ಉಪಕೇಂದ್ರಗಳ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವ ಹಿನ್ನೆಲೆ ಹಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ಆದ್ದರಿಂದ ಡಿಸೆಂಬರ್ 20 ರದು ಕೆಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದ್ದು, ಆ ಪ್ರದೇಶಗಳ ಮಾಹಿತಿ ಈ ಕೆಳಗಿದೆ ಓದಿ.
ಬೆಂಗಳೂರಿನ ಬ್ಯಾಡರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 20 ರಂದು (ಶನಿವಾರ) ಸುಮಾರು 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಹಲಿದೆ ಎಂದು ಬೆಸ್ಕಾಂ ಸೂಚನೆಯಲ್ಲಿ ತಿಳಿಸಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್!
ಇಂದು (ಡಿ.20) 66/11 ಕೆವಿ 'ಬಿ' ಸ್ಟೇಷನ್‌ನ 20 ಎಂ.ವಿ.ಎ ಪವರ್ ಕನ್ವರ್ಟರ್ 1 & 2 ವ್ಯಾಪ್ತಿ ಹಾಗೂ 66/11 ಕೆವಿ ಭಾರತೀಯ ಸಿಟಿ ಸ್ಟೇಷನ್‌ನಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಇಂದು ಬೆಳಿಗ್ಗೆ 10 ಗಂಟೆಯಿದ ಸಂಜೆ 5 ಗಂಟೆಯವರೆಗೆ ಪವರ್ ಕಟ್ ಆಗಲಿದೆ ಎಂದು ವರದಿಯಾಗಿದೆ.
ಆದ್ದರಿಂದ ಇಂದು ಒಂದು ದಿನ ಅಗಾ ಅಬಾಸ್ ಅಲಿ ರಸ್ತೆ, ಬ್ರಂಟನ್ ಕ್ರಾಸ್ ರಸ್ತೆ, ಕೇಂಬ್ರಿಡ್ಜ್ ರೋಡ್, ಬ್ರಿಗೇಡ್ ರೋಡ್, ಕ್ಯಾಸಲ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕಾನ್ ರಾಡ್ ಹೋಟೆಲ್, ಡೆಕ್ಸನ್ ರಸ್ತೆ, ಗೌತಂಪುರ, ಗಂಗಾಧರ ಶೆಟ್ಟಿ ರಸ್ತೆ, ಈಶ್ವರ ಲೇಔಟ್, ಜೋಗು ಪಾಳ್ಯ, ಕಾಮರಾಜ್ ರಸ್ತೆ, ಎಂಜಿ ರೋಡ್ ಮತ್ತು ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೇ ರಿಚ್‌ಮಂಡ್ ಟೌನ್, ಸಾಯಿ ಬಾಬಾ ದೇವಸ್ಥಾನ ಟ್ರಿನಿಟಿ ಸರ್ಕಲ್, ಸೇಂಟ್ ಜಾನ್ಸ್ ರೋಡ್, ಯೂನಿಯನ್ ಸ್ಟ್ರೀಟ್, ನಾಗೇನಹಳ್ಳಿ ಕಾಲೋನಿ, ಕೆಎಂಪಿ ಲೇಔಟ್, ಆರ್ಮಿ ಕಾಲೇಜು, ಮದರ್ ಥೆರೇಸಾ ಲೇಔಟ್, ಕುಂಬಾರ ಲೇಔಟ್, ಆದಿತ್ಯ ಲೇಔಟ್‌ನಲ್ಲಿ ಪವರ್ ಕಟ್ ಇರಲಿದೆ.
ಪ್ರಯಾಣಿಕರಿಗೆ ಸಲಹೆ: ಈಗಾಗಲೇ ಹಲವು ಬಾರಿ ಬೆಸ್ಕಾ ಇಲಾಖೆಯಿಂದ ವಿದ್ಯುತ್ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದೀಗ ಈ ವಾರವಿಡೀ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದ್ದು, ಆದ್ದರಿಂದ ಜನರು ಮೊದಲೇ ತಮ್ಮ ಕೆಲಸಗಳನ್ನು ಮಾಡಿಮುಗಿಸುವಂತೆ ಸಲಹೆ ನೀಡಲಾಗಿದೆ.


Click it and Unblock the Notifications