ಬೆಂಗಳೂರು: ಬೆಸ್ಕಾಂ ಇಲಾಖೆ (BESCOM) ಈ ವಾರವಿಡೀ ಬೆಂಗಳೂರಿನಲ್ಲಿ ಪವರ್ ಕಟ್ ಆಗಲಿದೆ ಎಂದು ಸೂಚನೆ ನೀಡುತ್ತಲೇ ಇದೆ. ನಿರ್ವಹಣಾ ಕಾರ್ಯದ ಹಿನ್ನೆಲೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Bengaluru Power Cut) ಎಂದು ವರದಿಯಾಗಿದೆ. ಇನ್ನು ಬೆಸ್ಕಾಂನಿಂದ ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ನಡೆಯುವ ಪರಿಣಾಮ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಪ್ರಕಟಿಸಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಬೆಂಗಳೂರಿನ ಚಳ್ಳಕೆರೆ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಿದೆ. ಅಲ್ಲದೇ ನಿನ್ನೆ (ಡಿ.28) ಕೂಡಾ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಎಲ್ಲೆಲ್ಲಿ ಇರಲ್ಲ ಕರೆಂಟ್?
ಇಂದೂ (ಡಿ.29) ಕೂಡಾ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ಚಳ್ಳಕರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುರ್ ಕಡಿತ ಉಂಟಾಗಲಿದೆ. ಆ ಪ್ರಕಾರ, ಸಾಣಿಕೆರೆ, ಸೋಮಗುದ್ದು, ಗೋಪನಹಳ್ಳಿ, ಸಾಣಿಕೆರೆ ಶಾಖೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ನಿನ್ನೆ ಚಳ್ಳಕೆರೆ ನಗರದ ಬಳ್ಳಾರಿ ರೋಡ್, ಬುಡ್ನಹಟ್ಟಿ, ನಗರಂಗೇರೆ, ನನ್ನಿವಾಳ ಗ್ರಾಮ ಪಂಚಾಯತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.
66/11 ಕೆವಿ ಮತ್ತಿಕೆರೆ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಮಲ್ಲೇಶ್ವರಂ ವಿಭಾಗರ ಸಿ-6 ಉಪ ವಿಭಾಗದ ಹಲವು ಕಡೆಗಳಲ್ಲಿ ಇಂದು (ಡಿ.29) ಬೆಳಗ್ಗೆ 10 ರಿಂದ ಸಂಜೆ 5 ರ ತನಕ ಕರೆಂಟ್ ಇರುವುದಿಲ್ಲ ಎಂದು ಪ್ರಕಟಿಸಿದೆ.
ಆ ಪ್ರಕಾರ ಲೊಟ್ಟಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್.ಕೆ. ಉದ್ಯಾನ, ಸಂಜೀವಪ್ಪ ಕಾಲೋನಿ, ಎಂಎಲ್‌ಎ ಲೇಔಟ್, ನೇತಾಜಿ ನಗರ, ಪೈಪ್ ಲೈನ್ ರಸ್ತೆ, ಮತ್ತಿಕೆರೆ, ಮೋಹನ್ ಕುಮಾರ್ ನಗರ, ಕೆಪಿ ಪಾರ್ಕ್, ಅಕ್ಕಿಯಪ್ಪ ಉದ್ಯಾನ, ಬಿಕೆ ನಗರ, ಎಲ್‌ಐಸಿ ಕಾಲೋನಿ, ಪಂಪ ನಗರ, ಒಂದನೇ ಮೈನ್ ರೋಡ್ ಯಶವಂತಪುರ, ಎಚ್‌ಎಂಟಿ ಲೇಔಟ್, ಎಲ್‌ಸಿಆರ್ ಶಾಲಾ ರೋಡ್, ಗೋಕುಲ 1ನೇ ಹಂತ, ಗುರುಮೂರ್ತಿ ರೆಡ್ಡಿ ಕಾಲೋನಿ, ಬೃಂದಾವನ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿಯಾಗಿದೆ.
66/11 ರೆಮೋ ವಿದ್ಯುತ್ ಕೇಂದ್ರದಲ್ಲೂ ಪವರ್ ಕಟ್!
ಬಾಪೂಜಿ ನಗರ, ಕವಿತಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ ಐಯ್ಯಣ್ಣ ಶೆಟ್ಟಿ ಲೇಔಟ್, ಗಣಪತಿ ನಗರ, ಪ್ರೈಡ್ ಅಪಾರ್ಟ್‌ಮೆಂಟ್, ದೀಪಾಂಜಲಿ ನಗರ, ಪಟೇಲ್ ಪುಟ್ಟಯ್ಯ ಇಂಡಸ್ಟ್ರೀಯಲ್ ಏರಿಯಾ, ಬಿ.ಹೆಚ್.ಇ.ಎಲ್, ಮುತ್ತಚಾರಿ ಇಂಡಸ್ಟ್ರಿಯಲ್ ಏರಿಯಾ, ಜ್ಯೋತಿ ನಗರ, ಗಂಗೊಂಡನಹಳ್ಳಿ, ಅಜಿತ್ ಸೇರ್ ಇಂಡಸ್ಟ್ರೀಯಲ್ ಏರಿಯಾ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ, ಬ್ಯಾಟರಾಯನಪುರ ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸ್ಟೆನ್ಷನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, RR ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲು ವಿದ್ಯುತ್ ಕಡಿತವಾಗಲಿದೆ ಎಂದು ವರದಿಯಾಗಿದೆ.


Click it and Unblock the Notifications