ಬೆಂಗಳೂರಿನಲ್ಲಿ (Bengaluru) ಕಳೆದೊಂದು ವಾರದಿಂದ ನಿರಂತರವಾಗಿ ಅಲ್ಲಲ್ಲಿ ವಿದ್ಯುತ್ ವ್ಯತ್ಯಯಗಳಾಗುತ್ತಲೇ (Power Cut) ಇದೆ. ಅತ್ತ ಬೆಸ್ಕಾಂ ಇಲಾಖೆ (BESCOM) ಕೂಡಾ ಜನರಿಗೆ ಮುನ್ನೆಚ್ಚರಿಕೆ ಪಾಲಿಸುವಂತೆ ಮನವಿ ಮಾಡುತ್ತಲೇ ಇದೆ. ಇದೀಗ ಇಂದೂ ಕೂಡಾ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ಹೊರಡಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನವೆಂಬರ್ 25 ಮತ್ತು 26 ರಂದು ಕ್ಯಾತಸಂದ್ರ ಉಪವಿಭಾಗದಲ್ಲಿ ವಿದ್ಯುತ್ ಲೈನ್ ಕಾರ್ಯ ಕೈಗೊಳ್ಳಲಿದೆ. ಈ ಕಾರಣದಿಂದಾಗಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು (ನ. 26) ಏಳು ಗಂಟೆಗಳ ಕಾಲ ಕರೆಂಟ್ ಇರಲ್ಲ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೇ ಈ ಅವಧಿಯಲ್ಲಿ ಸಹಕರಿಸುವಂತೆ ಇಲಾಖೆ ನಾಗರಿಕರಲ್ಲಿ ಮನವಿ ಮಾಡಿದೆ.
ಎಲ್ಲೆಲ್ಲಾ ಇರಲ್ಲ ಕರೆಂಟ್!
ಅಧಿಕಾರಿಗಳ ಪ್ರಕಾರ, ಲಿಂಕ್ ಲೈನ್ ಕೆಲಸ ಎರಡೂ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುವ ಸಾಧ್ಯತೆ ಇದೆ. ಈ ಪರಿಣಾಮಾನ ಗಂಧಮಚನಹಳ್ಳಿ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಅಥವಾ ಸಂಪೂರ್ಣವಾಗಿ ಕರೆಂಟ್ ಇಲ್ಲದೇ ಇರಬಹುದು ಎಂದು ವರದಿಯಾಗಿದೆ. ವಿದ್ಯುತ್ ಕಡಿತದಿಂದ ಪ್ರಭಾವಿತವಾಗಲಿರುವ ಪ್ರದೇಶಗಳಲ್ಲಿ ಹುಲ್ಲೇನಹಳ್ಳಿ, ಕಾಲಿಂಗಯ್ಯನಪಾಳ್ಯ, ಹೊಳಕಲ್ಲು, ಸಿಂಗಿಪಾಳ್ಯ, ಬಡೇಸಾಬ-ರಾಯಪಾಳ್ಯ, ವಿರುಪಸಂದ್ರ, ಮತ್ತು ವೀರನಾಯಕನಹಳ್ಳಿಗಳು ಕೂಡಾ ಸೇರಿವೆ.
8 ಜಿಲ್ಲೆಗಳಲ್ಲಿ ಬೆಸ್ಕಾಂ ಸೇವೆ!
ಬೆಸ್ಕಾಂ ಈಗಾಗಲೇ ಕರ್ನಾಟಕದ 8 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಾಗಿದೆ. ಕಂಪನಿಯು 41,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ 2 ಕೋಟಿಗೂ ಹೆಚ್ಚು ಜನಸಂಖ್ಯೆಗೆ ವಿದ್ಯುತ್ ಪೂರೈಕೆ ಮಾಡುತ್ತದೆ. ಇದು ನಾಲ್ಕು ವಲಯಗಳು, ಒಂಬತ್ತು ಸರ್ಕಲ್‌ಗಳು, 32 ವಿಭಾಗಗಳು, 147 ಉಪವಿಭಾಗಗಳು ಮತ್ತು 500 ಕ್ಕೂ ಹೆಚ್ಚು ಸೆಕ್ಷನ್ ಕಚೇರಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
ಸಾರ್ವಜನಿಕರಿಗೆ ಸಲಹೆ
ಬೆಂಗಳೂರು ನಿವಾಸಿಗಳು ಬೆಸ್ಕಾಂನ ಇತ್ತೀಚಿನ ಅಪ್‌ಡೇಟ್‌ಗಳನ್ನು ನೋಡಿಕೊಂಡು ಪವರ್ ಕಟ್ ಸಂದರ್ಭದಲ್ಲಿ ಅಗತ್ಯ ಕೆಲಸಗಳನ್ನು ಮಾಡಿಮುಗಿಸುವಂತೆ ಕೋರಲಾಗಿದೆ. ನಿಗದಿತ ವಿದ್ಯುತ್ ಕಡಿತದ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ನಿರಂತರ ಅಪ್ಡೇಟ್‌ಗಾಗಿ, ಜನರು ಬೆಸ್ಕಾಂನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ 1912 ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಈ ಸಹಾಯವಾಣಿಯು ಬೆಂಗಳೂರಿನ ಹಲವು ಪ್ರದೇಶಗಳ ಮಾಹಿತಿ, ಸಮಯದ ಅಪ್‌ಡೇಟ್‌ಗಳು ಅಥವಾ ವಿದ್ಯುತ್ ಕಡಿತದ ಸಮಯದಲ್ಲಿ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನೆರವಾಗಲಿದೆ. ಇನ್ನು ವಿದ್ಯುತ್ ವ್ಯತ್ಯಯದಿಂದಾಗುವ ಸಮಸ್ಯೆಯನ್ನು ತಪ್ಪಿಸಲು ಸಾರ್ವಜನಿಕರು, ಇನ್ವರ್ಟರ್‌ಗಳು, ಪವರ್ ಬ್ಯಾಂಕ್‌ಗಳು, ಬ್ಯಾಟರಿ ಲೈಟ್‌ಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಎಲ್ಲಾ ಅಗತ್ಯ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇನ್ನು ಅಗತ್ಯ ಸಮಯದಲ್ಲೇ ವಿದ್ಯುತ್ ಕಡಿತವಾಗುವ ಹಿನ್ನೆಲೆ ಸಾರ್ವಜನಿಕರಿಗೆ ಮೊದಲೇ ಬೆಸ್ಕಾಂ ಇಲಾಖೆ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ.


Click it and Unblock the Notifications