ಹೊಸ ವರ್ಷ ಆರಂಭವಾದಾಗಿನಿಂದ ಬೆಂಗಳೂರು ನಗರದಲ್ಲಿ ಎದುರಾಗುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅದು ವಿದ್ಯುತ್ ಕಡಿತ. ನಗರದಲ್ಲಿ ವಾರದ ಒಂದು ದಿನವಾದ್ರೂ ಕೆಲವೆಡೆ ಪವರ್ ಕಟ್ ಇದ್ದೇ ಇರುತ್ತದೆ. ಅದೇ ರೀತಿ ಇಂದೂ (ಜ.11) ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Power Cut) ಎಂದು ಬೆಸ್ಕಾಂ (BESCOM) ಸೂಚನೆ ನೀಡಿದೆ. ಹಾಗಿದ್ರೆ ಇಂದು ಎಲ್ಲೆಲ್ಲಿ ಕರೆಂಟ್ ಇರುವುದಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು (ಜನವರಿ 11) ವಿದ್ಯುತ್ ಕಡಿತ ಇರಲಿದೆ. ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 8:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆ ಬೆಸ್ಕಾ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಹೇಳಿಕೊಂಡಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) 66/11 ಕೆವಿ ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿದೆ. ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಬೆಸ್ಕಾಂ ಈ ಕಾಮಗಾರಿ ಕೈಗೊಂಡಿದೆ. ಸೊಲದೇವನಹಳ್ಳಿ, ಪುಟ್ಟೇನಹಳ್ಳಿ, ಪೀಣ್ಯ 1 ಹಾಗೂ 2 ರ ಉಪಕೇಂದ್ರಗಳಿಗೆ ಸಂಬಂಧಿಸಿದಂತೆ ಈ ಕೆಲಸ ನಡೆಯಲಿದೆ. ಇದು ಉತ್ತರ ಬೆಂಗಳೂರಿನ ಹೆಚ್ಚಿನ ಭಾಗದಲ್ಲಿ ಪರಿಣಾಮ ಬೀರಲಿದೆ.
ಆದ್ದರಿಂದ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಸೊಲದೇವನಹಳ್ಳಿ, ಟಿಬಿ ಕ್ರಾಸ್, ಹೇಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣವಾರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ ಮತ್ತು ಬಜ್ಜಪ್ಪ ಲೇಔಟ್‌ಗಳಲ್ಲಿ ಪವರ್ ಕಟ್ ಇರಲಿದೆ ಎಂದು ಹೇಳಲಾಗಿದೆ.
ಅಲ್ಲದೇ ಶಿವಕುಮಾರಸ್ವಾಮಿ ಲೇಔಟ್, ಗುಡ್ಡದಹಳ್ಳಿ, ದಾಸನಹಳ್ಳಿ, ತೋತಗೇರೆ ಬಸವಣ್ಣ ದೇವಾಲಯ ಪ್ರದೇಶ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ, ಗುನಿಯಾಗ್ರಹಾರದಲ್ಲೂ ವಿದ್ಯುತ್ ಕಡಿತವಾಗಲಿದೆ.
ಬೆಸ್ಕಾಂ ಪಟ್ಟಿ ಮಾಡಿದ ಪ್ರಕಾರ, ಸೋಮಶಿಟ್ಟಹಳ್ಳಿ, ಗಾಣಿಗಾರಹಳ್ಳಿ, ಕೆರೆಗುಡ್ಡ ಲೈನ್, ಕೆಟಿ ಪುರ, ಐಐಎಚ್‌ಆರ್, ಮತ್ಮೂರ್, ಐವರಕೊಂಡಾಪುರ, ಸೀತಕೆಂಪನಹಳ್ಳಿ, ಲಿಂಗಪ್ಪನಹಳ್ಳಿ, ಮದಾಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ, ಮಾವಳ್ಳೀಪುರ, ಕೊಂಡಶೆಟ್ಟಹಳ್ಳಿ ಹಾಗೂ ಮಧುಗಿರಿ ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸ್ವಲ್ಪ ಅಡ್ಡಿ ಉಂಟಾಗಲಿದೆ.
ಇನ್ನು ಸೋಲದೇವನಹಳ್ಳಿ ಸುತ್ತಮುತ್ತಲಿನ ಕುರುಬರಹಳ್ಳಿ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ, ಅಚ್ಯುತ್ ನಗರ ಪ್ರದೇಶಗಳಲ್ಲೂ ವಿದ್ಯುತ್ ಕಡಿತ ಉಂಟಾಗಲಿದೆ. ಕಾಮಗಾರಿ ಹಿನ್ನೆಲೆ ದಿನವಿಡೀ ವಿದ್ಯುತ್ ಇರುವುದಿಲ್ಲ, ಆದ್ದರಿಂದ ಇಲ್ಲಿನ ನಿವಾಸಿಗಳ ಅಗತ್ಯ ಕೆಲಸಗಳಿಗೆ ಅಡ್ಡಿಯಾಗಬಹುದು. ಅದಕ್ಕಾಗಿ ಮೊದಲೇ ಎಚ್ಚೆತ್ತುಕೊಳ್ಳುವಂತೆ ಈ ಸೂಚನೆ ನೀಡಿದೆ.
ಜನರಿಗೆ ಸಲಹೆ
ಸಾಮಾನ್ಯವಾಗಿ ಪವರ್ ಕಟ್ ಸಂದರ್ಭದಲ್ಲಿ ದಿನವಿಡೀ ಕರೆಂಟ್ ಇರುವುದಿಲ್ಲ. ಆ ಸಂದರ್ಭದಲ್ಲಿ ಅಗತ್ಯ ಕೆಲಸಗಳಿಗೆ ಲ್ಯಾಪ್‌ಟಾಪ್, ಮೊಬೈಲ್ ಬೇಕಾಗುತ್ತದೆ. ಆದ್ದರಿಂದ ಮೊದಲೇ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಮಾಡಿಕೊಂಡರೆ ಉತ್ತಮ. ಹಾಗೆಯೇ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದೆ.


Click it and Unblock the Notifications