ಬೆಂಗಳೂರು: ಬೆಂಗಳೂರಿನಲ್ಲಿ ನವೆಂಬರ್ ತಿಂಗಳ ಆರಂಭದಿಂದಲೇ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಸುದ್ದಿಗಳಳು ಹರಿದಾಡುತ್ತಲೇ ಇದೆ. ಕಳೆದ ವಾರವಿಡೀ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂದು ಬೆಸ್ಕಾಂ ಇಲಾಖೆ (BESCOM) ಸೂಚನೆ ನೀಡಿತ್ತು. ಇದೀಗ ಈ ವಾರ ನವೆಂಬರ್ 23 ಮತ್ತು 24 ರಂದು ಬೆಂಗಳೂರಿನ ಹಲವು ಪ್ರದೇಶಗಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ (Bengaluru Power Cut) ಎಂದು ಸೂಚನೆ ನೀಡಲಾಗಿದೆ.

66/11 ಕೆವಿ ವಿಡಿಯಾ ಸಬ್‌ಸ್ಟೇಷನ್ ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಇರುವ ಪರಿಣಾಮ ಜಾಲಹಳ್ಳಿ ವಿಭಾಗದ ಎನ್-9 ಉಪವಿಭಾಗದ ಹಲವೆಡೆ ನವೆಂಬರ್ 23, 24 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪವರ್ ಕಟ್ ಉಂಟಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.
ಇಲ್ಲೆಲ್ಲಾ ಇರಲ್ಲ ಕರೆಂಟ್!
ವಿಕಾಸ್ ನಗರ 8ನೇ ಮೈಲ್ ರಸ್ತೆ, ಹಾವನೂರು ಎಕ್ಸ್‌ಟಿಎನ್, ವಿಡಿಯಾ ಸ್ಕೂಲ್ ವಿಡಿಯಾ ಬಸ್ ಸ್ಟಾಪ್, ಮುನಿಕೊಂಡಪ್ಪ ಲೇಔಟ್, ವಿದ್ಯಾ ನಗರ, ಮಂಜುನಾಥ್ ನಗರ, ಕಾಟರಾಯ ನಗರ, ವಿಜಯಲಕ್ಷ್ಮಿ ಲೇಔಟ್ ಬಿಟಿಎಸ್ ಲೇಔಟ್, ಸಾಸುವೆಟ್ಟ, ತರಬನಹಳ್ಳಿ ಮೈನ್‌ರೋಡ್, ವಿಶ್ವೇಶ್ವರಯ್ಯ ಲೇಔಟ್ ಭೈರವೇಶ್ವರ ವೃತ್ತ, ವಿನಾಯಕ ನಗರ, ಶೋಭಾ ಅಪಾರ್ಟ್‌ಮೆಂಟ್, ರಾಮಯ್ಯ ಲೇಔಟ್, ನಾರಾಯಣ ಲೇಔಟ್, ಕುವೆಂಪು ನಗರ, ರಿಲಯನ್ಸ್ ಫ್ರೆಶ್, ಅಶೋಕ ನಗರ, ಡಿಫೆನ್ಸ್ ಕಾಲೋನಿ, ಮಹಾಲಕ್ಷ್ಮಿ ನಗರ, ಸೋಪ್ ಫ್ಯಾಕ್ಟರಿ ಲೇಔಟ್ ಅಂದಾನಪ್ಪ ಲೇಔಟ್ ಸಿದ್ದೇಶ್ವರ ಲೇಔಟ್, ಸೋಲದೇನಹಳ್ಳಿ, ಹೇಸರಘಟ್ಟ ಮೈನ್ ರೋಡ್, ರಾಯಲ್ ಎನ್‌ಕ್ಲೇವ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾ ಸೂಚನೆಯಲ್ಲಿ ತಿಳಿಸಿದೆ.
ಯಲಹಂಕ ವ್ಯಾಪ್ತಿಯಲ್ಲೂ ಇರಲ್ಲ ಕರೆಂಟ್!
KPTCL ವತಿಯಿಂದ ನಿರ್ವಹಣಾ ಕಾರ್ಯ ನಿಮಿತ್ತ, 66/11 ಕೆವಿ ಯಲಹಂಕ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಇಂದು (ನ.23, ಭಾನುವಾರ) ಬೆಳಿಗ್ಗೆ 11 ಗಂಟೆಯಿಂದ ಸಂಜೆ 4:30 ಗಂಟೆವರೆಗೆ ಪವರ್ ಕಟ್ ಉಂಟಾಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ಅಂದರೆ, ವೈಎನ್‌ಕೆ ನ್ಯೂ ಟೌನ್ 208, 407, ಅಲ್ಲಾಳ ಸಂದ್ರ, ಜನಪ್ರಿಯ, ಮಾರುತಿ ನಗರ, ಬಿಬಿ ರಸ್ತೆ, ಯಲಹಂಕ, ಕೆಎಂಎಫ್, ಸಿಬಿ ಸಂದ್ರ, ಅನ್ರಿಯಾ, ಕೋಗಿಲು, ಬಾಗಲೂರು ಕ್ರಾಸ್, ನಿಟ್ಟೆ ಕಾಲೇಜು, ಐಎಎಫ್ ಪಾಲನಹಳ್ಳಿ, ದ್ವಾರಕ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಕರೆಂಟ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಹಾಗೇಯೇ ಪೀಣ್ಯ ವ್ಯಾಪ್ತಿಯಲ್ಲೂ ಇಂದು (ನ.23) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆ ಪ್ರಕಾರ, ಪೀಣ್ಯ 10ನೇ ಮುಖ್ಯ ರಸ್ತೆ, 11ನೇ ಮುಖ್ಯರಸ್ತೆ, ರಾಘವೇಂದ್ರ ನಗರ, ಯಶವಂತಪುರ ಕೈಗಾರಿಕಾ ಪ್ರೇಶ, ಹೆಚ್‌ಎಂಟಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗುವ ಸಾಧ್ಯತೆ ಇದೆ.


Click it and Unblock the Notifications