ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಲೇ (Bengaluru Power Cut) ಇದೆ. ನವೆಂಬರ್ ಆರಂಭದಿಂದ ಬೆಂಗಳೂರಿಗೆ ಒಂಥರಾ ವಿದ್ಯುತ್ ಕಂಟಕವಾಗಿಬಿಟ್ಟಂತಾಗಿದೆ. ಏಕೆಂದರೆ ಪ್ರತೀ ದಿನ ಒಂದಲ್ಲಾ ಒಂದು ನಗರಗಳಲ್ಲಿ ಪವರ್ ಕಟ್ ಆಗಲಿದೆ ಎಂಬ ಪ್ರಕಟಣೆ ಜಾರಿಯಾಗುತ್ತಲೇ ಇದೆ. ಈ ವಾರದ ಆರಂಭದಿಂದಲೂ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗುತ್ತಲೇ ಇದೆ. ಇದೀಗ ಇಂದೂ (ನವೆಂಬರ್ 27, ಗುರುವಾರ) ಕೂಡಾ ಬೆಂಗಳೂರಿನ ಹಲವು ನಗರಗಳಲ್ಲಿ ಪವರ್ ಕಟ್ ಇರಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಇಂದು ಹಲವೆಡೆ ಕರೆಂಟ್ ಇರಲ್ಲ. ಹಾಗಿದ್ರೆ ಎಲ್ಲೆಲ್ಲಾ ಕರೆಂಟ್ ಇರಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಲ್ಲೆಲ್ಲಾ "ನೋ ಕರೆಂಟ್"!
ನವೆಂಬರ್ 27ರಂದು ಬೆಂಗಳೂರಿನ ಲಾಲ್‌ಬಾಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಲಾಲ್‌ಬಾಗ್ ರಸ್ತೆ, ಸಿದ್ದಯ್ಯ ರಸ್ತೆ, ಮಿನರ್ವ ಸರ್ಕಲ್ ಮತ್ತು ಡಬಲ್ ರೋಡ್ ಎಕ್ಸ್ಟೆನ್ಷನ್ ಸೇರಿದಂತೆ ಹಲವು ಕಡೆಗಳಲ್ಲಿ ಪವರ್ ಕಟ್ ಆಗಲಿದೆ ಎಂದು ವರದಿಯಾಗಿದೆ. ಈ ನಿರ್ವಹಣಾ ಕಾರ್ಯವು ದಿನವಿಡೀ ಇರಲಿದ್ದು, ಆಯಾ ಪ್ರದೇಶದ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಈ ಪ್ರಕಟಣೆ ಹೊರಡಿಸಲಾಗಿದೆ.
ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಲಾಲ್‌ಬಾಗ್ ಸೇರಿ ಈ ಪ್ರದೇಶಗಳಲ್ಲಿನ ಕರೆಂಟ್ ಲೈನ್ ನಿರ್ವಹಣೆ ಮತ್ತು ಕಾರ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇಡೀ ದಿನ ವಿದ್ಯುತ್ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ. ಲಾಲ್‌ಬಾಗ್, ವಿಲ್ಸನ್ ಗಾರ್ಡನ್, ಶಾಂತಿನಗರ ಮತ್ತು ಜಯನಗರದಂತಹ ಪ್ರದೇಶಗಳಲ್ಲಿನ ವಿದ್ಯುತ್ ಬೇಡಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿಎ.
ನವೆಂಬರ್ 27ರಂದು ನಡೆಯಲಿರುವ ಈ ವಿದ್ಯುತ್ ಕಾರ್ಯವು ಟ್ರಾನ್ಸ್‌ಫಾರ್ಮರ್‌ಗಳನ್ನು ಬಲಪಡಿಸುವುದು, ಕೇಬಲ್ ಕನೆಕ್ಷನ್‌ಗಳನ್ನು ಬಿಗಿಗೊಳಿಸಲಾಗುತ್ತದೆ ಎಂದಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕರ ಸುರಕ್ಷತೆಗಾಗಿ ಹಲವಾರು ಲೈನ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎನ್ನಲಾಗಿದೆ.
ವರ್ಷಾಂತ್ಯವೂ ಬರುತ್ತಿದೆ, ಇನ್ಮೇಲೆ ಸಾರ್ವಜನಿಕ ಕಾರ್ಯಕ್ರಮ, ಮದುವೆ, ಹಬ್ಬಗಳು ಹೆಚ್ಚಾಗಿಯೇ ಇರಲಿದೆ. ಈ ಸಂದರ್ಭದಲ್ಲಿ ವಿದ್ಯುತ್ ಬಹಳಷ್ಟು ಬಳಕೆಯಾಗುತ್ತದೆ. ಆದ್ದರಿಂದ ಬೆಸ್ಕಾಂ ಇಲಾಖೆ ಈ ಕಾಮಗಾರಿಯನ್ನು ಕೈಗೊಂಡಿದೆ. ಆ ಪ್ರಕಾರ, ಲಾಲ್‌ಬಾಗ್ ರಸ್ತೆ, ಸಿದ್ದಯ್ಯ ರಸ್ತೆ, ಮಿನರ್ವ ಸರ್ಕಲ್, ಡಬಲ್ ರಸ್ತೆ ವಿಸ್ತರಣೆ, ಸಿದ್ದಾಪುರ, ಲಕ್ಷ್ಮಿ ರಸ್ತೆ, ಜೆಸಿ ರಸ್ತೆ ಮತ್ತು ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್ ವ್ಯತ್ಯಯಕ್ಕೆ ಪ್ರಭಾವ ಬೀರಲಿದೆ ಎನ್ನಲಾಗಿದೆ.
ಲಾಲ್‌ಬಾಗ್‌ನ ವೆಸ್ಟ್ ಮತ್ತು ಈಸ್ಟ್ ಗೇಟ್‌ಗಳ ಬಳಿಯ ಅಪಾರ್ಟ್‌ಮೆಂಟ್‌ಗಳು ಸಹ ಕೆಲಸದ ಸಮಯದಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಪ್ರಭಾವ ಬೀರಬಹುದು. ಅಲ್ಲದೇ ಕೆಆರ್ ಮಾರುಕಟ್ಟೆ ರಸ್ತೆ ಮತ್ತು ಉದ್ಯಾನವನದ ಸಿದ್ದಾಪುರ ಭಾಗದ ಸಮೀಪವಿರುವ ಅಂಗಡಿಗಳು ಸಹ ದಿನವಿಡೀ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ ಎಂದು ವರದಿಯಾಗಿದೆ. ಇನು ಈ ಪ್ರಕಟಣೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರಕಟಿಸಲಾಗಿದ್ದು, ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿ ಮುಗಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.


Click it and Unblock the Notifications