ಕಳೆದ ವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian Stock Market) ತೀವ್ರ ಕುಸಿತ ಕಂಡುಬಂದಿತ್ತು. ಸೆನ್ಸೆಕ್ಸ್ 2,032.65 ಅಂಕಗಳು (ಶೇ. 2.43%) ಇಳಿಕೆ ದಾಖಲಿಸಿತು. ಈ ಹಿನ್ನಲೆಯಲ್ಲಿ, ಟಾಪ್-10 ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂಭತ್ತರ ಒಟ್ಟು ಮಾರುಕಟ್ಟೆ ಮೌಲ್ಯ (mcap) ₹2,51,711.6 ಕೋಟಿಗಳಷ್ಟು ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ ಇದು ದೊಡ್ಡ ಪೆಟ್ಟು ಕೊಟ್ಟಿದೆ. ಈ ಮೂಲಕ ಭಾರೀ ನಷ್ಟ ಅನುಭವಿಸಿದೆ.

ಆದರೆ ಇದೀಗ ಖ್ಯಾತ ಷೇರು ತಜ್ಞ ಸುಮಿತ್ ಬಗಾಡಿಯಾ ಅವರು ಜನವರಿ 27, ಮಂಗಳವಾರದಂದು ಖರೀದಿಸಲು ಮೂರು ಸ್ಟಾಕ್‌ಗಳನ್ನು ಶಿಫಾರಸು ಮಾಡಿದ್ದಾರೆ. ಈ ಮೂರು ಸ್ಟಾಕ್ ಆಯ್ಕೆಗಳಲ್ಲಿ ಏಷ್ಯನ್ ಗ್ರಾನಿಟೋ ಇಂಡಿಯಾ, ಐಎಫ್‌ಸಿಐ (IFCI) ಮತ್ತು ಎಂಎಂಟಿಸಿ (MMTC) ಸೇರಿವೆ. ಕಳೆದ ವಾರ ಮಾರುಕಟ್ಟೆಯಲ್ಲಿ ಗಣನೀಯ ಕುಸಿತ ಕಂಡ ಈ ಸಜೆಷನ್ ಕೊಟ್ಟಿದ್ದಾರೆ.
ಮಾರುಕಟ್ಟೆಯಲ್ಲಿ ಕುಸಿತದ ಹಿಂದಿನ ಕಾರಣಗಳನ್ನು ಗಮನಿಸಿದರೆ, ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ ಮತ್ತು ಲಾಭ ಗಳಿಕೆ ಪ್ರಮುಖವಾಗಿ ಕಾಣುತ್ತವೆ. ಈ ಕಾರಣಗಳಿಂದ ಜನವರಿ 23, ಶುಕ್ರವಾರದಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಪ್ರಮುಖ ಸೂಚ್ಯಂಕಗಳು ಕೆಳಮಟ್ಟದಲ್ಲಿ ಕೊನೆಗೊಂಡವು. ಅಂದು, ಸೆನ್ಸೆಕ್ಸ್ 770 ಅಂಕಗಳು (ಶೇ. 0.94%) ಕುಸಿದು 81,537.70 ಕ್ಕೆ ತಲುಪಿದರೆ, ನಿಫ್ಟಿ 50 ಕೂಡ 241 ಅಂಕಗಳು (ಶೇ. 0.95%) ಇಳಿಕೆ ಕಂಡು 25,048.65 ರಲ್ಲಿ ದಿನದ ವಹಿವಾಟು ಮುಗಿಸಿದೆ.
ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮಿತ್ ಬಗಾಡಿಯಾ ಅವರ ವಿಶ್ಲೇಷಣೆಯ ಪ್ರಕಾರ, ನಿಫ್ಟಿ 50 ಕಡಿಮೆಯಿಂದ ಆರಂಭವಾಗಿ ಏರಿಕೆಯಾಯ್ತು. ಇದು ದಿನದ ಗರಿಷ್ಠ ಮಟ್ಟವಾದ 25,347.95 ಕ್ಕೆ ತಲುಪಿತ್ತು, ಆದರೆ ಬಳಿಕ ಇದು ಕುಸಿತ ಕಂಡಿತು. ಷೇರು ಸೂಚ್ಯಂಕವು 25,100 ರ ಪ್ರಮುಖ ಬೆಂಬಲವನ್ನು ಮುರಿದು, 25,050 ರ ಕನಿಷ್ಠ ಮಟ್ಟವನ್ನು ತಲುಪಿ, ಅಂತಿಮವಾಗಿ 25,048.65 ರಲ್ಲಿ ಕೊನೆಗೊಂಡಿತು.
ದೈನಂದಿನ RSI (ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್) 29.12 ರಲ್ಲಿದ್ದು, ಕೆಳಮುಖವಾಗಿ ಸಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಅತಿಯಾದ ಮಾರಾಟದ ಸ್ಥಿತಿ ಮತ್ತು ದುರ್ಬಲ ಚಲನೆಯನ್ನು ತೋರಿಸುತ್ತದೆ. ಇಂಡಿಯಾ VIX, ಮಾರುಕಟ್ಟೆ ಚಂಚಲತೆಯ ಸೂಚ್ಯಂಕ, ಶೇ. 6.31 ರಷ್ಟು ಇಳಿದು 14.19 ಕ್ಕೆ ತಲುಪಿದೆ. ಇದು ಮಾರುಕಟ್ಟೆಯ ಚಂಚಲತೆ ಕಡಿಮೆಯಾಗುತ್ತಿರುವುದನ್ನು ಮತ್ತು ಅಲ್ಪಾವಧಿಯ ಅನಿಶ್ಚಿತತೆಯಲ್ಲಿ ಕೆಲವು ಇಳಿಕೆಯನ್ನು ಸೂಚಿಸುತ್ತದೆ.
ಬ್ಯಾಂಕ್ ನಿಫ್ಟಿ ಕೂಡ ಫ್ಲಾಟ್‌ನಿಂದ-ಧನಾತ್ಮಕವಾಗಿ ಆರಂಭವಾಗಿ, ಸುಮಾರು 146 ಅಂಕಗಳ ಸಾಧಾರಣ ಲಾಭ ಗಳಿಸಿತು. ಇದು ದಿನದ ಗರಿಷ್ಠ ಮಟ್ಟವಾದ 59,400 ತಲುಪಿತು. ಆದರೆ, ಸೂಚ್ಯಂಕವು ಉನ್ನತ ಮಟ್ಟದಲ್ಲಿ ಮಾರಾಟದ ಒತ್ತಡವನ್ನು ಎದುರಿಸಿತು ಮತ್ತು 59,000 ದ ಪ್ರಮುಖ ಬೆಂಬಲಕ್ಕಿಂತ ಕೆಳಗೆ ಇಳಿಯಿತು. ಇದು 58,823 ರ ದಿನದ ಕನಿಷ್ಠ ಮಟ್ಟವನ್ನು ತಲುಪಿತು, ಇದು ಲಾಭ ಗಳಿಕೆಯ ಸೂಚನೆಯಾಗಿದೆ.
ಸುಮಿತ್ ಬಗಾಡಿಯಾ ಅವರು ಶಿಫಾರಸು ಮಾಡಿದ ಸ್ಟಾಕ್‌ಗಳ ವಿವರಗಳು ಇಲ್ಲಿವೆ:
1. ಏಷ್ಯನ್ ಗ್ರಾನಿಟೋ ಇಂಡಿಯಾ: ₹69.15 ಕ್ಕೆ ಖರೀದಿಸಿ | ಗುರಿ ಬೆಲೆ: ₹76.50 | ಸ್ಟಾಪ್ ಲಾಸ್: ₹65.50
2. ಐಎಫ್‌ಸಿಐ (IFCI): ₹56.35 ಕ್ಕೆ ಖರೀದಿಸಿ | ಗುರಿ ಬೆಲೆ: ₹62 | ಸ್ಟಾಪ್ ಲಾಸ್: ₹53.30
3. ಎಂಎಂಟಿಸಿ (MMTC): ₹63.83 ಕ್ಕೆ ಖರೀದಿಸಿ | ಗುರಿ ಬೆಲೆ: ₹70 | ಸ್ಟಾಪ್ ಲಾಸ್: ₹60.50
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications