ಚಿನ್ನದ ಬೆಲೆ ಏರಿಕೆಯಿಂದಾಗಿ (Gold Price) ಮಾರುಕಟ್ಟೆಯಲ್ಲಿ ಭಾರೀ ಗ್ರಾಹಕರ ಸಂಖ್ಯೆಯೇ ಇಳಿಕೆಯಾಗಿತ್ತು. ಆದ್ರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದು, ಸದ್ಯ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇದೀಗ ಅಕ್ಟೋಬರ್ 23, 2025 ರಂದು ಚಿನ್ನದ ದರವು ಪ್ರತಿ ಔನ್ಸ್‌ಗೆ 4084 ಡಾಲರ್‌ಗೆ ಇಳಿಕೆಯಾಗಿದೆ. ದಾಖಲೆಯ ಬೆಲೆ ಏರಿಕೆಯಾದ ನಂತರ ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇನ್ನು ಈ ಬೆಲೆ ಇಳಿಕೆಗೆ ಡಾಲರ್, ಮಾರುಕಟ್ಟೆಏರಿಳಿತ ಮತ್ತು ಜಾಗತಿಕವಾಗಿ ವ್ಯಾಪಾರ ವಹಿವಾಟುಗಳಲ್ಲಾದ ಬದಲಾವಣೆ ಸೇರಿದಂತೆ ಹಲವಾರು ಪ್ರಮುಖ ಕಾರಣಗಳಿವೆ.

ಚಿನ್ನದ ಮೇಲಿನ ಹೂಡಿಕೆ ಹೆಚ್ಚಿನವರು ಸೇಫ್ ಮತ್ತು ಲಾಭದ ಹೂಡಿಕೆ ಎನ್ನುತ್ತಾರೆ. ಭಾರತದಲ್ಲಂತೂ ಚಿನ್ನವನ್ನು ಮದುವೆ, ಹಬ್ಬಗಳ ಸಂದರ್ಭದಲ್ಲಿ ಸಂಪ್ರದಾಯವಾಗಿ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ, ಹೆಚ್ಚಿನವರು ಚಿನ್ನದಂಗಡಿಯನ್ನೂ ನೋಡದೆಯೇ ಎಷ್ಟೋ ತಿಂಗಳಾಗಿವೆ. ಆದ್ರೆ ಇದೀಗ ದಿಢೀರ್ ಇಳಿಕೆ ಕಂಡಿದ್ದು, ಎಲ್ಲರಿಗೂ ಆಶ್ಚರ್ಯವುಂಟುಮಾಡಿದೆ.
ಈ ವಾರದ ಮೊದಲ ದಿನವೇ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 4,000 ಡಾಲರ್ ಗಡಿ ದಾಟಿತ್ತು. ಬರೀ ಈ ಒಂದು ವರ್ಷದಲ್ಲೇ 56% ಏರಿಕೆ ಕಂಡಿದೆ. ಆದರೆ, ಗುರುವಾರ ಅಮೆರಿಕದ ಆರ್ಥಿಕ ಅಂಕಿಅಂಶಗಳ ವರದಿಯ ನಿರೀಕ್ಷೆಯಲ್ಲಿ ಹೂಡಿಕೆದಾರರಿದ್ದಾರೆ. ಅಲ್ಲದೇ ಸ್ಪಾಟ್ ಗೋಲ್ಡ್ 0.2% ಇಳಿದು ಪ್ರತಿ ಔನ್ಸ್‌ಗೆ 4,084 ಡಾಲರ್ ತಲುಪಿದೆ. ಇನ್ನು ಯುಎಸ್ ಫ್ಯೂಚರ್ಸ್ 4,100 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿವೆ ಎಂದು ವರದಿಯಾಗಿದೆ.
ಗೋಲ್ಡ್ ಸಿಲ್ವರ್ ಸೆಂಟ್ರಲ್‌ನ ವ್ಯವಸ್ಥಾಪಕ ನಿರ್ದೇಶಕ ಬ್ರಿಯಾನ್ ಲ್ಯಾನ್ ಅವರ ಪ್ರಕಾರ, ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಾದಾಗ ಚಿನ್ನದ ಬೆಲೆ ಏರಿಕೆಯಾಗೋದು ಸಹಜ. ಆದ್ರೆ ಈ ಪ್ರಭಾವ ಚಿನ್ನ ಖರೀದಿಯಲ್ಲಿ ವಿಶ್ವದ ಎರಡನೇ ಅತೀ ದೊಡ್ಡ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಭಾರತದ ಮೇಲೂ ಬಿದ್ದಿದೆ. ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನ 12,508 ರೂ.ಗೆ ಮತ್ತು 22 ಕ್ಯಾರೆಟ್ 11,465 ರೂ.ಗೆ ಇಳಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಾದ ಬದಲಾವಣೆ ಭಾರತದಲ್ಲೂ ಚಿನ್ನದ ಬೆಲೆ ಮೇಳೆ ಪರಿಣಾಮ ಬೀರುತ್ತಿದೆ.
ಅಮೆರಿಕದ ಡಾಲರ್ ಜೊತೆ ಚಿನ್ನದ ಸಂಬಂಧ:
ಅದರಲ್ಲೂ ವಿಶೇಷವಾಗಿ ಅಮೆರಿಕನ್ ಡಾಲರ್ ಚಿನ್ನದ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಡಾಲರ್ ಸೂಚ್ಯಂಕ ಪ್ರಮುಖ ಕರೆನ್ಸಿಗಳ ವಿರುದ್ಧ 0.2% ಏರಿಕೆ ಕಂಡಿದೆ. ಆದ್ದರಿಂದ ಈ ರೀತಿ ಡಾಲರ್ ಬೆಲೆ ಹೆಚ್ಚಾದಾಗ, ಡಾಲರ್ ಬಿಟ್ಟು ಇತರ ಕರೆನ್ಸಿಗಳನ್ನು ಬಳಸುವ ದೇಶಗಳಿಗೆ ಚಿನ್ನ ದುಬಾರಿಯಾಗುತ್ತದೆ, ಏಕೆಂದರೆ ಚಿನ್ನವನ್ನು ಜಾಗತಿಕವಾಗಿ ಡಾಲರ್ ಮೂಲಕ ಮಾರಲಾಗುತ್ತದೆ.
ಇನ್ನು ಅಕ್ಟೋಬರ್ 24 ರಂದು ಬಿಡುಗಡೆಯಾಗಲಿರುವ ಅಮೆರಿಕದ ಗ್ರಾಹಕ ಬೆಲೆ ಸೂಚ್ಯಂಕ (CPI) ವರದಿಗಾಗಿ ಇಡೀ ಮಾರುಕಟ್ಟೆಗಳು ಕಾದುನಿಂತಿದೆ. ಸೆಪ್ಟೆಂಬರ್ ತಿಂಗಳ ಕೋರ್ ಹಣದುಬ್ಬರವು 3.1% ರಷ್ಟು ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. ಫೆಡರಲ್ ರಿಸರ್ವ್‌ನ ಮುಂದಿನ ಸಭೆಯಲ್ಲಿ ಬಡ್ಡಿದರ ಕಡಿತದ ಬಗ್ಗೆಯೂ ನಿರೀಕ್ಷಿಸಲಾಗಿದೆ.
ರಾಜಕೀಯ ಉದ್ವಿಗ್ನತೆಗಳೂ ಕಾರಣ:
ಈ ವರ್ಷ ಚಿನ್ನದ ಏರಿಕೆಗೆ ಮುಖ್ಯ ಕಾರಣವೆಂದರೆ ಅದು ರಾಜಕೀಯ ಉದ್ವಿಗ್ನತೆಗಳು. ಅದೇ ರೀತಿ ಕೇಂದ್ರ ಬ್ಯಾಂಕುಗಳು ಚಿನ್ನದ ಮೇಲೆ ಮಾಡಿದ ಹೂಡಿಕೆಯೇ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಇತ್ತೀಚೆಗೆ ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಬಿಕ್ಕಟ್ಟು ಶುರುವಾಗಿತ್ತು. ಸದ್ಯ ಶಾಂತ ಸ್ಥಿತಿಯನ್ನು ಕಾಯ್ದುಕೊಂಡಿದ್ದು, ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ಬಗ್ಗೆ ಈಗಾಗಲೇ ಟ್ರಂಪ್ ಮಾತನಾಡಿದ್ದು, ಮುಂದಿನ ವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ ರಷ್ಯಾ-ಉಕ್ರೇನ್ ನಡುವಿನ ಶಾಂತಿ ಒಪ್ಪಂದದ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ರಷ್ಯಾದ ತೈಲ ಕಂಪನಿಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಈ ಬದಲಾವಣೆ ಹೂಡಿಕೆದಾರರಲ್ಲಿ ಸ್ವಲ್ಪ ಕಳವಳ ಉಂಟುಮಾಡಿದೆ.
ಆದರೆ ಮುಂದಿನ ಕೆಲವು ದಿನಗಳವರೆಗೆ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗುತ್ತಿರುತ್ತವೆ. ಅಲ್ಲದೇ ಕೇಂದ್ರ ಬ್ಯಾಂಕುಗಳು ನಿರಂತರವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದೆ ಮತ್ತು ಜಾಗತಿಕ ಉದ್ವಿಗ್ನತೆಗಳು ಮುಂದುವರಿಯುತ್ತಲೇ ಇರುತ್ತವೆ. ಅದೇ ರೀತಿ ಮುಂದಿನ ವಾರ ಅಮೆರಿಕದ ಹಣದುಬ್ಬರ ವರದಿ ಮತ್ತು ಫೆಡ್ ದರ ಕಡಿತದ ನಿರ್ಧಾರಗಳು ಚಿನ್ನ ಭವಿಷ್ಯದ ಮೇಲೆ ಕೇಂದ್ರೀಕರಿಸಲೀದೆ ಎನ್ನಲಾಗಿದೆ.
More From GoodReturns

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications