ದಿನದಲ್ಲಿ ಕೇವಲ ಐದೇ ಗಂಟೆಗಳ ಕಾಲ ಕೆಲಸ ಮಾಡಿ ವರ್ಷಕ್ಕೆ ಕೋಟಿಗಟ್ಟಲೆ ಆದಾಯ ಗಳಿಸುವ 24ರ ಹರೆಯದ ಯುವಕ ಸುದ್ದಿ ಸಖತ್ ವೈರಲ್ ಆಗಿದೆ. ಹಾಗಿದ್ರೆ ಆತ ಮಾಡುವ ಕೆಲಸವೇನು? ಆತನ ಆದಾಯ ಮೂಲಗಳು ಯಾವುವು? ಈತ ಎಲ್ಲಿಯವನು ಎಂಬ ವಿವರಗಳನ್ನು ನೋಡೋಣ....
24ರ ಹರೆಯದ ಸ್ಟೀವನ್ ಗುವೋ ಅವರು ದಿನಕ್ಕೆ ಕೇವಲ 5 ಗಂಟೆ ಕೆಲಸ ಮಾಡಿ ವರ್ಷಕ್ಕೆ ಕೋಟಿಗಟ್ಟಲೆ ರೂಪಾಯಿ ಗಳಿಸುತ್ತಿದ್ದಾರೆ . ವಾರಕ್ಕೆ 30 ಗಂಟೆಗಳ ಕಾಲ ಕೆಲಸ ಮಾಡುವ ಈ ಯುವ ಉದ್ಯಮಿ, ವರ್ಷಕ್ಕೆ ಸುಮಾರು 2.15 ಕೋಟಿ ವಾರ್ಷಿಕವಾಗಿ ($254,000 )ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅವರ ಯಶಸ್ಸಿನ ರಹಸ್ಯವೇನು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅವರು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಉದ್ಯಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕೆ-ಪಾಪ್ ಉತ್ಪನ್ನಗಳ ಅಂಗಡಿ ಮತ್ತು ಐಷಾರಾಮಿ ಕಾರುಗಳಿಗೆ ವಿಶೇಷ ಕವರ್‌ಗಳನ್ನು ಒದಗಿಸುವ ಕಂಪನಿಗಳು ಸೇರಿವೆ.

ಸ್ಟೀವನ್ ಅವರು ಯುನೈಟೆಡ್ ಸ್ಟೇಟ್ಸ್, ಫಿಲಿಪೈನ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಭಾರತದಂತಹ ವಿವಿಧ ದೇಶಗಳಲ್ಲಿ 19 ಜನರನ್ನು ನೇಮಿಸಿಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ.
ಸ್ಟೀವನ್ ಗುವೊ ಮೂಲತದ ಅಮೇರಿಕಾದ ನಿವಾಸಿಯಾಗಿದ್ದು, ಅವರು ವರ್ಕ್- ಲೈಫ್ ನ ನಡುವೆ ಸಮತೋಲನವನ್ನು ಸಾಧಿಸಲು ಬಾಲಿಗೆ ಸ್ಥಳಾಂತರಗೊಂಡರು. 24 ವರ್ಷದ ಈ ಯುವ ಉದ್ಯಮಿ, ಬಾಲಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಇರುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಉತ್ತಮ ಜೀವನವನ್ನು ನಡೆಸಬಹುದೆಂದು ಹೇಳುತ್ತಾ ತಮ್ಮ ಪ್ರಸ್ತುತ ಜೀವನವನ್ನು ಎಂಜಾಯ್ ಮಾಡುತ್ತಾರೆ. ಅಲ್ಲಿನ ಅದ್ಭುತ ಜೀವನಶೈಲಿಯು ಅವರನ್ನು ಬಹಳಷ್ಟು ಸಂತೋಷಪಡಿಸಿದೆ ಎಂದು ಹೇಳುತ್ತಾರೆ. ಈವರೆಗೆ ಸುಮಾರು 15 ದೇಶಗಳಿಗೆ ಪ್ರಯಾಣಿಸಿರುವ ಅವರು ಸರ್ಫಿಂಗ್ ಮತ್ತು ಎಕ್ಸ್‌ಪ್ಲೋರಿಂಗ್‌ಗಾಗಿ ನನಗೆ ನನ್ನ ಮಧ್ಯಾಹ್ನಗಳು ಸಿಗುತ್ತಿದ್ದು, ಇಲ್ಲಿನ ರೋಮಾಂಚಕ ಸಂಸ್ಕೃತಿಗೆ ಸಾಕ್ಷಿಯಾಗಲು ಸಂಜೆ ಸಾಧ್ಯವಾಗುತ್ತದೆ ಎಂದು ಹಂಚಿಕೊಳ್ಳುತ್ತಾರೆ ಸ್ಟೀವನ್..
12 ನೇ ವಯಸ್ಸಿನಲ್ಲಿ ಪಯಣ ಆರಂಭಿಸಿದ್ದ ಸ್ಟೀವನ್ ಗುವೊ:
ಸ್ಟೀವನ್ ಗುವೋ ಅವರು ತಮ್ಮ ಉದ್ಯಮಶೀಲ ಪ್ರಯಾಣವನ್ನು 12ನೇ ವಯಸ್ಸಿನಲ್ಲಿ Minecraft ಸರ್ವರ್‌ಗಳನ್ನು ಹೋಸ್ಟ್ ಮಾಡುವ ಮೂಲಕ ಪ್ರಾರಂಭಿಸಿದರು. ಅವರ ಸರ್ವರ್‌ಗಳಲ್ಲಿ ಆಡಲು ಇತರರು ಹಣವನ್ನು ನೀಡಿದಾಗ ಅವರಿಗೆ ಇಂಟರ್‌ನೆಟ್‌ನಿಂದ ಹಣ ಗಳಿಸುವ ಸಾಧ್ಯತೆ ಅರಿವಾಯಿತು. ಈ ಮೂಲಕ ಕೆಲವೇ ತಿಂಗಳುಗಳಲ್ಲಿ ಅವರು $10,000 ಗಳಿಸಿದರು. ತಮ್ಮ ಆಟಗಳ ಬಗ್ಗೆ ಇದ್ದ ಆಸಕ್ತಿಯನ್ನು ಮತ್ತಷ್ಟು ಬೆಳೆಸಲು ಆಟದ ಅಭಿವೃದ್ಧಿ ಕಂಪನಿಯನ್ನು ಪ್ರಾರಂಭಿಸಿದರಾದರೂ, ಅದು ವಿಫಲಗೊಂಡು ಅವರು ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡರು. ಆದರೆ ಈ ಅನುಭವದಿಂದ ಅವರು ಮಾರ್ಕೆಟಿಂಗ್ ಎಂಬುದು ಯಾವುದೇ ವ್ಯವಹಾರಕ್ಕೆ ಅತ್ಯಂತ ಮುಖ್ಯ ಎಂಬ ಪಾಠ ಕಲಿತರು . ಇದಕ್ಕಾಗಿ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಪಾರ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು.
ನನ್ನ GPA(ಅಂಕ) ತುಂಬಾ ಕೆಟ್ಟದಾಗಿತ್ತು, ಹೀಗಾಗಿ ಅಧಿಕ ವೇತನದ ದ ಕೆಲಸವನ್ನು ಪಡೆಯುವುದು ಬಹುಶಃ ಅಸಂಭವವೆಂದು ನನಗೆ ಅರ್ಥವಾಗಿತ್ತು. ಹೀಗಾಗಿ ಇದು ನನ್ನ ಸ್ವಂತ ವ್ಯವಹಾರಗಳಲ್ಲಿ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ನನ್ನನ್ನು ಮಾಡಿತು" ಎನ್ನುತ್ತಾರೆ ಸ್ಟೀವನ್.
ಗುವೊ ಸೋಮವಾರದಿಂದ ಶುಕ್ರವಾರದವರೆಗೆ ಆರು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಸರಿಸುಮಾರು ವಾರಕ್ಕೆ 30 ಗಂಟೆಗಳಿಗಿಂತಲೂ ಕಡಿಮೆ. ಇವುಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾ ಸಮಯ ಕಳೆಯುವುದಿಲ್ಲ. ಅವರ ಕೆಲಸದ ಸಮಯದ 40 ಪ್ರತಿಶತವು ಅವರ ಗ್ರಾಹಕರು ಮತ್ತು ಅವರ ಉತ್ಪನ್ನಗಳ ಮಾರುಕಟ್ಟೆ ಸಂಶೋಧನೆಗೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದರು. ಬಾಲಿ ಉತ್ತಮ ಕೈಗೆಟುಕುವ ಶ್ರೇಣಿಯನ್ನು ಹೊಂದಿದೆ ಮತ್ತು ಅವರ ಸಮುದಾಯವು ನಾಲ್ಕು ಬೆಡ್‌ರೂಮ್ ವಿಲ್ಲಾ ಆಗಿದ್ದು, ಇದು ಸ್ನೇಹಿತರೊಂದಿಗೆ ಹಂಚಿಕೊಂಡ ಉದ್ಯೋಗವಾಗಿದೆ ಎಂದು ಗುವೊ ಹಂಚಿಕೊಂಡಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications