1700 ಕೋ.ರೂಗಿಂತ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ಈ ಉದ್ಯಮಿ ಬಾಲಿವುಡ್‌ನ ಅತ್ಯಂತ ದುಬಾರಿ ಚಿತ್ರದ ನಿರ್ಮಾಪಕರು.!

ಬೆಂಗಳೂರು, ಫೆಬ್ರವರಿ 7: ರಣಬೀರ್ ಕಪೂರ್-ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪ್ರಪಂಚದಾದ್ಯಂತದ ಸಿನಿಪ್ರಿಯರ ಮನಗೆದ್ದಿದ್ದು ಇದು ಬಾಲಿವುಡ್ ನಲ್ಲಿ ಬಿಡುಗಡೆಯಾದ ಒಂದೇ ವಾರದಲ್ಲಿ100 ಕೋಟಿ ಕ್ಲಬ್ ಸೇರಿದ ಸಿನಿಮಾ. ನಿರ್ದೇಶಕ ಅಯಾನ್ ಮುಖರ್ಜಿ ಈ ಚಿತ್ರದ ನಿರ್ದೇಶಕರಾಗಿದ್ದು, ಈಗಾಗಲೇ ಈ ಸಿನಿಮಾದ ಪಾರ್ಟ್ -2 ಹಾಗೂ 3 ಮಾಡುವುದಾಗಿ ಘೋಷಿಸಿದ್ದಾರೆ.

ಈ ಸೂಪರ್ ಹಿಟ್ ಚಿತ್ರದ ಪ್ರಮುಖ ನಟರು ಮತ್ತು ನಿರ್ದೇಶಕರು ಎಲ್ಲರಿಗೂ ಪರಿಚಿತವಾಗಿದ್ದು, ಆದರೆ ಇದರ ತೆರೆಮರೆಯ ಹಿಂದಿನ ಪ್ರೇರಕ ಶಕ್ತಿಯೊಬ್ಬರನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ, ಅವರೇ ನಮಿತ್ ಮಲ್ಹೋತ್ರಾ. ನಮಿತ್ ಅವರು ಸಿನಿಮೀಯ ಚಮತ್ಕಾರದ ಬುದ್ಧಿವಂತ ನಿರ್ಮಾಪಕರಾಗಿದ್ದಾರೆ.

ಬಾಲಿವುಡ್‌ನ ಅತ್ಯಂತ ದುಬಾರಿ ಚಿತ್ರದ ನಿರ್ಮಾಪಕ ಈ ಉದ್ಯಮಿ

ಬ್ರಹ್ಮಾಸ್ತ್ರವನ್ನು 410 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ವಿಎಫ್‌ಎಕ್ಸ್ ಕೆಲಸದಿಂದಾಗಿ ವೆಚ್ಚ ಹೆಚ್ಚಿದ್ದು ಭಾರತೀಯ ಚಿತ್ರರಂಗವನ್ನು ಸಾರ್ವಕಾಲಿಕ ವೆಚ್ಚದ ಹಿಂದಿ ಚಿತ್ರವಾಗಿತ್ತು ಎಂದು ವ್ಯಾಖ್ಯಾನಿಸಲಾಗಿದೆ. ನಮಿತ್ ಮಲ್ಹೋತ್ರಾ ಅವರು ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ 752 ನೇ ಸ್ಥಾನದಲ್ಲಿದ್ದು, 1,700 ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದಾರೆ. ನಮಿತ್ ಮಲ್ಹೋತ್ರಾ ಅವರು ಕೇವಲ ಸಿನಿಮಾ ನಿರ್ಮಾಪಕರಲ್ಲ, ಅವರೊಬ್ಬ ವಿಶುಯಲ್ ಎಫೆಕ್ಟ್ಸ್, ಅನಿಮೇಷನ್, ಅಂಡ್ ಸ್ಟೀರಿಯೋ ಕನ್ವರ್ಷನ್ ರೂಪಿಸುವ ದಾರ್ಶನಿಕರಾಗಿದ್ದಾರೆ.

ಖ್ಯಾತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ನರೇಶ್ ಮಲ್ಹೋತ್ರಾ ಅವರ ಹಿರಿಯ ಮಗ ಮತ್ತು ಸಿನಿಮಾಟೋಗ್ರಾಫರ್ ಎಂಎನ್ ಮಲ್ಹೋತ್ರಾ ಅವರ ಮೊಮ್ಮಗನಾಗಿರುವ ನಮಿತ್ ಮಲ್ಹೋತ್ರಾ ಶ್ರೀಮಂತ ಸಿನಿಮಾ ಪರಂಪರೆಯನ್ನು ಹಿನ್ನಲೆಯುಳ್ಳ ಕುಟುಂಬದಿಂದ ಬಂದವರು.ಅವರ ಅಜ್ಜ ಭಾರತದ ಚಲನಚಿತ್ರ ಇತಿಹಾಸದಲ್ಲಿ ಉಲ್ಲೇಖನೀಯರಾಗಿದ್ದು, 1953 ರಲ್ಲಿ ದೇಶದ ಮೊದಲ ಕಲರ್ ಸಿನಿಮಾ ಒಂದಾದ ಝಾನ್ಸಿ ಕಿ ರಾಣಿ ಯಲ್ಲಿ ಅವರ ಕೊಡುಗೆ ಅಗಾಧವಾಗಿದೆ. ಸಿನಿಮಾ ಜಗತ್ತಿನಲ್ಲಿ ಈ ಕೌಟುಂಬಿಕ ನಂಟು ನಮಿತ್ ಮಲ್ಹೋತ್ರಾ ಅವರ ಸಿನಿ ಜಗತ್ತಿನ ಪ್ರಯಾಣಕ್ಕೂ ಅಡಿಪಾಯ ಹಾಕಿತು.

ಮಲ್ಹೋತ್ರಾ ಅವರು ಏಪ್ರಿಲ್ 2, 1976 ರಂದು ಜನಿಸಿದ್ದು, ಅವರು ಕಂಪ್ಯೂಟರ್ ಗ್ರಾಫಿಕ್ಸ್ ಶಾಲೆಗೆ ದಾಖಲಾದಾ ಬಳಿಕ 1995 ರಲ್ಲಿ ವಿಷುಯಲ್ ಎಫೆಕ್ಟ್‌ಗಳ ಕ್ಷೇತ್ರಕ್ಕೆ ಪ್ರವೇಶಿಸಿದರು. ಈ ಪ್ರಮುಖ ಕ್ಷಣವು ಅವರ ವಾಣಿಜ್ಯೋದ್ಯಮ ಮನೋಭಾವಕ್ಕೆ ಅಡಿಪಾಯ ಹಾಕಿತು. ಮುಂದೆ ಅವರು ಕಂಪ್ಯೂಟರ್ ಗ್ರಾಫಿಕ್ಸ್ ಶಾಲೆಯ ತಮ್ಮ ಮೂವರು ಶಿಕ್ಷಕರೊಂದಿಗೆ ವೀಡಿಯೊ ವರ್ಕ್‌ಶಾಪ್, ಎಡಿಟಿಂಗ್ ಸ್ಟುಡಿಯೊವನ್ನು ಸ್ಥಾಪಿಸಲು ಕಾರಣವಾಯಿತು.

ನಮಿತ್ ಮಲ್ಹೋತ್ರಾ ಅವರು ವಿಶ್ಯುಯಲ್ ಎಫೆಕ್ಟ್‌ಗಳು , ಅನಿಮೇಷನ್ ಮತ್ತು ಸ್ಟಿರಿಯೊ ಪರಿವರ್ತನೆ ಕಂಪನಿ DNEG ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಅವರು ವಿಶ್ವದ ಅತಿದೊಡ್ಡ ಸ್ವತಂತ್ರ ಸಂಯೋಜಿತ ಮಾಧ್ಯಮ ಸೇವೆಗಳ ಕಂಪನಿಯಾದ "ಪ್ರೈಮ್ ಫೋಕಸ್ ಲಿಮಿಟೆಡ್‌"ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.

ಮಲ್ಹೋತ್ರಾ ಅವರ ನಾಯಕತ್ವದಲ್ಲಿ, ಪ್ರೈಮ್ ಫೋಕಸ್ 2001 ರಲ್ಲಿ ಸ್ಕ್ಯಾನಿಂಗ್ ಮತ್ತು ರೆಕಾರ್ಡಿಂಗ್ ಸಿಸ್ಟಮ್‌ಗಳನ್ನು ಮತ್ತು 2003 ರಲ್ಲಿ ಡಿಐ ಸಿಸ್ಟಮ್ ಅನ್ನು ಪರಿಚಯಿಸಿದ ಮೊದಲಿಗರಾಗಿದ್ದಾರೆ. 2009 ರಲ್ಲಿ, ಪ್ರೈಮ್ ಫೋಕಸ್ ಸಮ್ಸ್ಥೆ ವ್ಯೂ-ಡಿ ತಂತ್ರಜ್ಞಾನವನ್ನು ಬಳಸಿಕೊಂಡು, ಕಂಪನಿಯು ಕ್ಲಾಷ್ ಆಫ್ ದಿ ಟೈಟಾನ್ಸ್ ಅನ್ನು 3D ಆಗಿ ಪರಿವರ್ತಿಸಿದಾಗ ಸಿನಿ ಜಗತ್ತಿಗೆ ನಿರ್ಣಾಯಕ ಕ್ಷಣವಾಗಿತ್ತು. ಈ ಯಶಸ್ಸು 'ಸ್ಟಾರ್ ವಾರ್ಸ್,' 'ಹ್ಯಾರಿ ಪಾಟರ್,' 'ದಿ ಕ್ರಾನಿಕಲ್ಸ್ ಆಫ್ ನಾರ್ನಿಯಾ,' ಮತ್ತು 'ಟ್ರಾನ್ಸ್‌ಫಾರ್ಮರ್ಸ್' ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಸ್ಟಿರಿಯೊ ಪರಿವರ್ತನೆಗಳಿಗೆ ನೀಡಲು ಪ್ರೈಮ್ ಫೋಕಸ್ ಕಾರಣವಾಯಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+