ಭಾರತದಲ್ಲಿ ಹಲವಾರು ಕೋಟ್ಯಾಧಿಪತಿಗಳಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ (Richest Man) ಅವರ ಹೆಸರಿದೆ. ಇನ್ನು ಈ ಶ್ರೀಮಂತರು ಕಲೆ, ಶಿಕ್ಷಣ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಲವಾರು ದೇಣಿಗೆಗಳನ್ನು ನೀಡುತ್ತಾರೆ. ರಿಲಯನ್ಸ್ ಒಡೆತನದ ಮುಕೇಶ್ ಅಂಬಾನಿ (Mukesh Ambani) ದೇಣಿಗೆ ನೀಡುವ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಇದೀಗ ಈ ಪಟ್ಟಿಯಲ್ಲಿ ಕಳೆದ 4 ವರ್ಷದಿಂದ HCL Tech ಸಂಸ್ಥಾಪಕ ಶಿವ ನಾಡರ್ (Shiv Nadar) ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ರೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ನಂತರದ ಸ್ಥಾನಗಳಲ್ಲಿ ಸಾವಿತ್ರಿ ಜಿಂದಾಲ್, ಸುನಿಲ್ ಮಿತ್ತಲ್, ಶಿವ್ ನಾಡಾರ್ ಹೀಗೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರತೀ ವರ್ಷ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದಂತೆ ಯಾರೆಲ್ಲಾ ಶ್ರೀಮಂತರು ಎಷ್ಟು ದೇಣಿಗೆ ನೀಡಿದ್ದಾರೆ? ಎಂಬ ಪಟ್ಟಿಯನ್ನು ರಿಲೀಸ್ ಮಾಡಲಾಗುತ್ತದೆ. ಹಾಗಿದ್ರೆ 2025 ರಲ್ಲಿ ಯಾರು ಹೆಚ್ಚು ದೇಣಿಗೆ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ಓದಿ.
ಅತೀ ಹೆಚ್ಚು ದೇಣಿಗೆ ನೀಡಿದವರು ಯಾರು?
ಭಾರತದ ಅತ್ಯಂತ ಶ್ರೀಮಂತರೆಂದು ಗುರುತಿಸಿಕೊಂಡವರು ಎಷ್ಟು ಮಟ್ಟದಲ್ಲಿ ದಾನ ಮಾಡುತ್ತಿದ್ದಾರೆ ಗೊತ್ತಾ? ಇದೀಗ ಈ ಬಗ್ಗೆ ಎಡೆಲ್‌ಗಿವ್ & ಹುರೂನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2025 ಬಿಡುಗಡೆ ಮಾಡಿದೆ. ಆ ಪ್ರಕಾರ, ಭಾರತದ ಶ್ರೀಮಂತರು ಕಳೆದ ಹಣಕಾಸು ವರ್ಷದಲ್ಲಿ ಒಟ್ಟಾಗಿ 10,380 ಕೋಟಿಯಷ್ಟು ದಾನ ಮಾಡಿದ್ದಾರೆ. ಈ ದೇಣಿಗೆ ನೀಡಿದವರ ಪಟ್ಟಿಯಲ್ಲಿ 191 ದಾನಿಗಳಿದ್ದು, ಅವರಲ್ಲಿ 12 ಮಂದಿ ಹೊಸ ದಾನಿಗಳು ಎಂಬುದೇ ವಿಶೇಷ ಸಂಗತಿ. ಕಳೆದ ಮೂರು ವರ್ಷಕ್ಕೆ ಹೋಲಿಸಿದ್ರೆ ದೇಣಿಗೆಯ ಮೊತ್ತ ಶೇ.85% ರಷ್ಟು ಏರಿಕೆ ಕಂಡಿದೆ.
ಇನ್ನು ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ ಮತು ಅದಾನಿ ಮೊದಲೆರಡು ಸ್ಥಾನದಲ್ಲಿದ್ದರೂ, ದೇಣಿಗೆ ನೀಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬೇರೊಬ್ಬರಿದ್ದಾರೆ. HCL Technologiesನ ಸ್ಥಾಒಕ ಶಿವ ನಾಡಾರ್ ಮತ್ತು ಅವರ ಕುಟುಂಬ ಮತ್ತೊಮ್ಮೆ ದಾನಶೂರರು ಎಂದು ಗುರುತಿಸಿಕೊಂಡಿದ್ದಾರೆ.
ಮತ್ತೊಮ್ಮೆ ದಾನಶೂರರಾದ ಶಿವ ನಾಡಾರ್!
ಕಳೆದ ಹಣಕಾಸು ವರ್ಷದ ಅಂತ್ಯದೊಳಗೆ ಶಿವ ನಾಡಾರ್ ಮತ್ತು ಅವರ ಕುಟುಂಬ ಬರೋಬ್ಬರಿ 2708 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ದಾನಶೂರರ ಪಟ್ಟಿಯಲ್ಲಿ ಶಿವ ನಾಡಾರ್ ಮತ್ತು ಕುಟುಂಬ ಅಗ್ರಸ್ಥಾನದಲ್ಲಿದೆ. ಅಂದರೆ ಸರಾಸರಿ ನೋಡವುದಾದ್ರೆ ದಿನಕ್ಕೆ 7.4 ಕೋಟಿಯಂತೆ ದಾನ ನೀಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ದೇಣಿಗೆ ಶೇ.26% ರಷ್ಟು ಏರಿಕೆಯಾಗಿದೆ. ಈ ದಾಖಲೆಯ ಮೊತ್ತದಲಿ ಬಹುಪಾಲು ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಶಿವ ನಾಡಾರ್ ಫೌಂಡೇಶನ್‌ನಿಂದ ಬಂದಿದೆ.
ಇನ್ನು ದೇಣಿಗೆ ನೀಡಿದವರ ಎರಡನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ ಮತ್ತು ಕುಟುಂಬ ಸ್ಥಾನ ಪಡೆದಿದೆ. ಈ ವರ್ಷ ಮುಕೇಶ್ ಅಂಬಾನಿ ಮತ್ತು ಕುಟುಂಬ ಒಟ್ಟು 626 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.54 ರಷ್ಟು ಹೆಚ್ಚಳ ಕಂಡು ಬಂದಿದೆ. ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗಾಗಿ ಸ್ಥಾಪಿಸಲಾದ ರಿಲಯನ್ಸ್ ಫೌಂಡೇಶನ್ ಮೂಲಕ ಬಹುಪಾಲು ದೇಣಿಗೆಗಳು ನೀಡಲಾಗಿದೆ.


Click it and Unblock the Notifications