ಇನ್ನೇನು ಕೆಲವೇ ತಿಂಗಳಲ್ಲಿ ರೋಚಕ ಐಪಿಎಲ್ (IPL) ಹಣಾಹಣಿ ಆರಂಭವಾಗಲಿದೆ. ಈಗಾಗಲೇ ತಂಡಗಳು ಆಟಗಾರರನ್ನು ಆಯ್ಕೆ ಮಾಡಿದ್ದು, ಬಲಿಷ್ಠ ತಂಡಗಳ ರಚನೆಯೂ ಆಗಿದೆ. ನಿನ್ನೆಯಷ್ಟೇ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯೂ ನಡೆದಿದೆ. ಈ ಮಧ್ಯೆ ಐಪಿಎಲ್ 2026ನೇ ಟೂರ್ನಿಯ ಉದ್ಘಾಟನಾ ಪಂದ್ಯ ಎಲ್ಲಿ ನಡೆಯುತ್ತೆ ಎಂಬ ಗೊಂದಲ ಎಲ್ಲರಲ್ಲೂ ಮೂಡಿದೆ. ಇದೀಗ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಮಾತನಾಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ನಿಯಮದಂತೆ ನಡೆಯುತ್ತಾ ಐಪಿಎಲ್?
ಐಪಿಎಲ್ ನಿಯಮದಂತೆ ಹಿಂದಿನ ಟೂರ್ನಿಯಲ್ಲಿ ಯಾರು ಚಾಂಪಿಯನ್ ಆಗಿರುತ್ತಾರೋ, ಅವರ ತವರು ನೆಲದಲ್ಲೇ ಹೊಸ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಸಲಾಗುತ್ತದೆ. ಆದರೆ ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ, ಈ ಬಾರಿಯ ಐಪಿಎಲ್ ಪಂದ್ಯಾಟಗಳಿಗೆ ಪೆಟ್ಟು ಬೀಳುವಂತಾಗಿದೆ. ಅದೇ ಗೊಂದಲಗಳಿಂದಲೇ ಇದೀಗ ಉದ್ಘಾಟನಾ ಪಂದ್ಯ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆ ಹುಟ್ಟಿದೆ.
ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದ್ದೇನು?
ಇನ್ನು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್, ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇವೆ. ಈ ಕುರಿತು ಬಿಸಿಸಿಐ ಜೊತೆ ಚರ್ಚೆ ಕೂಡಾ ನಡೆಸಲಾಗಿದೆ. ಬಿಸಿಸಿಐ ಕೂಡಾ ಈ ಬಗ್ಗೆ ಉತ್ತಮವಾಗಿ ಸ್ಪಂದಿಸಿದೆ ಎಂದು ಹೇಳಿದ್ದಾರೆ.
ಈಗಾಗಲೇ ಐಪಿಎಲ್ ಪಂದ್ಯ ನಡೆಸಲಿ ಸಿಎಂ, ಡಿಸಿಎಂ ಅಸ್ತು ಎಂದಿದ್ದಾರೆ. ಅಲ್ಲದೇ ಗೃಹ ಸಚಿವರೊಂದಿಗೂ ಮಾತನಾಡಿದ್ದೇವೆ. ಶೀಘ್ರದಲ್ಲೇ ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ದಿನಾಂಕ ಮತ್ತು ಸ್ಥಳ ನಿಗದಿಯಾಗಲಿದೆ. ಈ ಮೂಲಕ ಬೆಂಗಳೂರಿನಲ್ಲಿ ಐಪಿಎಲ್ ಮಾತ್ರವಲ್ಲ, ಅಂತರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ ಎಂದು ಹೇಳಿದ್ದಾರೆ.
18 ವರ್ಷಗಳ ಬಳಿಕೆ ಕಪ್ ಗೆದ್ದ ಆರ್‌ಸಿಬಿ!
ಹಲವು ವರ್ಷಗಳ ನಿರೀಕ್ಷೆ, ಕನಸನ್ನು ಆರ್‌ಸಿಬಿ ಕಳೆದ ವರ್ಷ ನನಸು ಮಾಡಿತ್ತು. ಆದ್ರೆ ಚೊಚ್ಚಲ ಕಪ್ ಗೆದ್ದ ಖುಷಿ, ಕ್ಷಣ ಮಾತ್ರದಲ್ಲಿ ಬೆಂಗಳೂರು ಕ್ರೀಡಾಂಗಣದಲ್ಲಿ ದೊಡ್ಡ ದುರಂತವಾಗಿ ಬದಲಾಯ್ತು. ಆದರೆ ಈ ಬಾರಿ ಯಾರೆಲ್ಲಾ ಆರ್‌ಸಿಬಿಯಲ್ಲಿ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
IPL 2026ರ ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು!
- ವೆಂಕಟೇಶ್ ಅಯ್ಯರ್ - 7 ಕೋಟಿ
- ಮಂಗೇಶ್ ಯಾದವ್ - 5.20 ಕೋಟಿ
- ಜೇಕಬ್ ಡಫಿ - 2 ಕೋಟಿ
- ಜೋರ್ಡನ್ ಕಾಕ್ಸ್ - 75 ಲಕ್ಷ
- ಸಾತ್ವಿಕ್ ದೇಸ್ವಾಲ್ - 30 ಲಕ್ಷ
- ವಿಹಾನ್ ಮಲ್ಹೋತ್ರಾ - 30 ಲಕ್ಷ
- ಕನಿಷ್ಕ್ ಚೌಹಾನ್ - 30
- ವಿಕ್ಕಿ ಓಸ್ತ್ವಾಲ್ - 30 ಲಕ್ಷ
ಇದಿಷ್ಟು ಆರ್‌ಸಿಬಿ ಹರಾಜಿನಲ್ಲಿ ತೆಗೆದುಕೊಂಡ ಆಟಗಾರರಾಗಿದ್ದು, ಪಂದ್ಯಾಟ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications