Republic Day: ಈ ಬಾರಿಯ ಗಣರಾಜ್ಯೋತ್ಸವ 77ನೇ ಅಥವಾ 78ನೇ ಆಚರಣೆ! ಗೊಂದಲ ಬೇಡ ಇಲ್ಲಿದೆ ಉತ್ತರ

ಪ್ರತಿ ವರ್ಷ ಜನವರಿ 26ರಂದು ಭಾರತದಲ್ಲಿ (India) ಅದ್ಧೂರಿಯಾಗಿ ಗಣರಾಜ್ಯೋತ್ಸವವನ್ನು (Republic Day 2026) ಆಚರಿಸಲಾಗುತ್ತದೆ. 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26ರಂದು ಸಂವಿಧಾನವನ್ನು ರಚಿಸುವ ಮೂಲಕ ಸಾರ್ವಭೌಮ, ಪ್ರಜಾಸತ್ತಾತ್ಮಕ ಮತ್ತು ಗಣರಾಜ್ಯವಾಗಿ ಘೋಷಣೆಯಾಯಿತು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ 77ನೇ ಗಣರಾಜ್ಯೋತ್ಸವಕ್ಕೆ ಸಿದ್ಧತೆ ನಡೆದಿವೆ.

ಈ ಬಾರಿಯ ಗಣರಾಜ್ಯೋತ್ಸವ 77ನೇ ಅಥವಾ 78ನೇ ಆಚರಣೆ! ಗೊಂದಲ ಬೇಡ ಇಲ್ಲಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 26ರ ಸೋಮವಾರ ಕರ್ತವ್ಯ ಪಥದಲ್ಲಿ 77ನೇ ಗಣರಾಜ್ಯೋತ್ಸವ ಪಥಸಂಚಲನವನ್ನು ಮುನ್ನಡೆಸಲಿದ್ದಾರೆ. ಪಥಸಂಚಲನ ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಲಿದ್ದು, 10:30ರಿಂದ ಲೈವ್‌ ಮೂಲಕ ತೋರಿಸಲಾಗುತ್ತದೆ. ಸಾರ್ವಜನಿಕರಿಗೆ ಬೆಳಿಗ್ಗೆ 7 ಗಂಟೆಯಿಂದ ಪ್ರವೇಶಾವಕಾಶವಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸೇನಾ ಶಕ್ತಿ ಮತ್ತು ತಾಂತ್ರಿಕ ಪ್ರಗತಿಯನ್ನು ಈ ಪರೇಡ್ ಅನಾವರಣಗೊಳಿಸಲಿದೆ.

ಈ ವರ್ಷದ ಗಣರಾಜ್ಯೋತ್ಸವವು ರಾಷ್ಟ್ರಗೀತೆ 'ವಂದೇ ಮಾತರಂ'ನ 150 ವರ್ಷ ಪೂರೈಸಿದ ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಲಿದೆ. ಆಚರಣೆಯು 29 ಭಾರತೀಯ ವಾಯುಪಡೆಯ ವಿಮಾನಗಳ ವಾಯುಪ್ರದರ್ಶನದೊಂದಿಗೆ ಮುಕ್ತಾಯವಾಗಲಿದೆ. ಭಾರತೀಯ ವಾಯುಪಡೆ (IAF) ಈ ಬಾರಿ 'ಸಿಂಧೂರ್' ರಚನೆಯನ್ನು ಪ್ರದರ್ಶಿಸಲಿದೆ. 'ಆಪರೇಷನ್ ಸಿಂಧೂರ್'ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿಯನ್ನು ಪ್ರದರ್ಶಿಸಲಿದೆ.

ಈ 'ಸಿಂಧೂರ್' ರಚನೆಯಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ 'ವಂದೇ ಮಾತರಂ' ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಬಗ್ಗೆ ಪ್ರದರ್ಶನ ನೀಡಲಿದ್ದಾರೆ.

ಕರ್ತವ್ಯ ಪಥದಲ್ಲಿ ಒಟ್ಟು 30 ಸ್ತಬ್ಧಚಿತ್ರಗಳು ಸಾಗಲಿವೆ. 'ಸ್ವಾತಂತ್ರ್ಯದ ಮಂತ್ರ: ವಂದೇ ಮಾತರಂ' ಮತ್ತು 'ಸಮೃದ್ಧಿಯ ಮಂತ್ರ: ಆತ್ಮನಿರ್ಭರ ಭಾರತ' ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳು. ಅಸ್ಸಾಂನ ಟೆರ್ರಾಕೋಟಾ ಕಲೆ, ಮಣಿಪುರದ ಕೃಷಿ ಪ್ರಗತಿ ಮತ್ತು ಹಿಮಾಚಲ ಪ್ರದೇಶದ 'ದೇವ್ ಭೂಮಿ' ಗುರುತನ್ನು ಬಿಂಬಿಸುವ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರಲಿವೆ.

ಇನ್ನುಳಿದ 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಇದರಲ್ಲಿ ಪ್ರದರ್ಶಿಸಲಿದೆ.

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು?
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿಗಳು. ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿ 21-ಬಾರಿಯ ಗೌರವ ವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ವೀರರಿಗೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಲಿದ್ದಾರೆ. ನಂತರ ಕರ್ತವ್ಯ ಪಥದಲ್ಲಿರುವ ವಂದನಾ ವೇದಿಕೆಗೆ ಆಗಮಿಸಿ ಪಥಸಂಚಲನ ವೀಕ್ಷಿಸಲಿದ್ದಾರೆ.

ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು, ನೈಸರ್ಗಿಕ ಕೃಷಿಕರು, ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಧನ ಪಡೆದ ಕಂಪನಿಗಳ ಮುಖ್ಯಸ್ಥರು/ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ಬಿಗಿ ಭದ್ರತೆಯಲ್ಲಿ ರಾಜಧಾನಿ ದೆಹಲಿ!
ಗಣರಾಜ್ಯೋತ್ಸವ ಪಥಸಂಚಲನ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಸಿದ್ಧವಾಗಿದೆ. ಕರ್ತವ್ಯ ಪಥ ಮತ್ತು ರೈಸಿನಾ ಹಿಲ್ ಸುತ್ತಮುತ್ತ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ದೆಹಲಿಯಲ್ಲಿ 1,000ಕ್ಕೂ ಹೆಚ್ಚು ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಮೆರವಣಿಗೆ ಮಾರ್ಗದುದ್ದಕ್ಕೂ ಅಳವಡಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+