ಇನ್‌ಸ್ಟಾಗ್ರಾಂನ ಹೊಸ ಅಪ್ಲಿಕೇಷನ್ ಆರಂಭವಾಗಿದ್ದು, ಈ ಥ್ರೆಡ್ ಆಪ್ ಅನ್ನು ಟ್ವಿಟ್ಟರ್‌ನ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತಿದೆ. ಥ್ರೆಡ್ ಕೊಂಚ ಟ್ವಿಟ್ಟರ್‌ನಂತಹ ಫೀಚರ್ ಅನ್ನು ಹೊಂದಿದ್ದರೂ ಹಲವು ವಿಧಗಳಲ್ಲಿ ವಿಭಿನ್ನವಾಗಿದೆ. ಟ್ವಿಟ್ಟರ್‌ನಲ್ಲಿರುವಂತೆ ಥ್ರೆಡ್‌ನಲ್ಲಿ ಕಂಡು ಬರುತ್ತಿಲ್ಲ. ಥ್ರೆಡ್‌ನಲ್ಲಿ ಕಡಿಮೆ ಸುದ್ದಿ, ರಾಜಕೀಯ ವಿಚಾರ ಕಂಡು ಬರುತ್ತಿದೆ. ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ ಪ್ರಕಾರ, ಇದು ಮೆಟಾ ಮಾಡಿದ ಉದ್ದೇಶಪೂರ್ವಕ ಆಯ್ಕೆಯಾಗಿದೆ.
ದಿ ವರ್ಜ್ ಪತ್ರಕರ್ತ ಅಲೆಕ್ಸ್ ಹೀತ್ ಜೊತೆ ಥ್ರೆಡ್ ಬಗ್ಗೆ ಮಾತನಾಡಿದ ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ, ಟ್ವಿಟ್ಟರ್ ಥ್ರೆಡ್‌ನ ಪ್ರತಿಸ್ಪರ್ಧಿಯೇನಲ್ಲ. ಇದು ಒಂದು ಆಪ್ ಆಗಿದೆ. ಇದು ವಿಭಿನ್ನವಾದ ಆಪ್ ಆಗಿದೆ ಎಂದು ಆಡಮ್ ಮೊಸ್ಸೆರಿ ತಿಳಿಸಿದ್ದಾರೆ. ಈ ಥ್ರೆಡ್ ಆಪ್ ಆರಂಭವಾದ ಕೆಲವೇ ದಿನಗಳಲ್ಲಿ 78 ಮಿಲಿಯನ್ ಜನರು ಈ ಆಪ್ ಅನ್ನು ಬಳಸುತ್ತಿದ್ದಾರೆ.

"ರಾಜಕೀಯ ಮತ್ತು ಕಠಿಣ ಸುದ್ದಿಗಳು ಅನಿವಾರ್ಯವಾಗಿ ಥ್ರೆಡ್‌ಗಳಲ್ಲಿ ಕಾಣಿಸಿಕೊಳ್ಳಲಿವೆ. ಅವು ಸ್ವಲ್ಪ ಮಟ್ಟಿಗೆ ಇನ್‌ಸ್ಟಾಗ್ರಾಂನಲ್ಲಿಯೂ ಇದೆ. ಆದರೆ ನಾವು ಈ ವರ್ಟಿಕಲ್‌ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯಾವುದೇ ಉತ್ತೇಜನವನ್ನು ನೀಡುವುದಿಲ್ಲ," ಎಂದು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ ತಿಳಿಸಿದ್ದಾರೆ. ರಾಜಕೀಯ ಭಾಷಣ ಮತ್ತು ಕಠಿಣ ಸುದ್ದಿಗಳ ಪ್ರಾಮುಖ್ಯತೆಯನ್ನು ಆಡಮ್ ಮೊಸ್ಸೆರಿ ಅಲ್ಲಗಳೆದಿಲ್ಲ.
ಟ್ವಿಟ್ಟರ್ ಪ್ರತಿಸ್ಪರ್ಧಿ ಇನ್ಟಾಗ್ರಾಮ್‌ನ ಥ್ರೆಡ್‌ಗೆ ಸೈನ್ ಅಪ್, ಪೋಸ್ಟ್ ಮಾಡುವುದು ಹೇಗೆ?
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಅದಾದ ಬಳಿಕ ಟ್ವಿಟ್ಟರ್ ಬಳಕೆದಾರರು ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಮಾರುತ್ತಿರುವ ಬೇರೆ ಬೇರೆ ರೀತಿಯ ಬದಲಾವಣೆಗಳಾಗಿದೆ. ಇನ್ನು ಈಗ ಟ್ವಿಟ್ಟರ್‌ನಲ್ಲಿ ಒಂದು ದಿನದಲ್ಲಿ ಎಷ್ಟು ಟ್ವೀಟ್‌ಗಳನ್ನು ನೋಡಬಹುದು ಎಂಬುವುದುಕ್ಕೂ ಮಿತಿ ಹೇರಲಾಗಿದೆ.
ಟ್ವಿಟ್ಟರ್, ಥ್ರೆಡ್ ನಡುವೆ ಇರುವ ವ್ಯತ್ಯಾಸಗಳು
ಥ್ರೆಡ್ ಆ್ಯಪ್ ಬಳಕೆದಾರರಿಗೆ 500 ಅಕ್ಷರಗಳ ಮಿತಿಯನ್ನು ನೀಡುತ್ತದೆ. ಆದರೆ ಟ್ವಿಟ್ಟರ್‌ನಲ್ಲಿ ಬ್ಲ್ಯೂಟಿಕ್ ಹೊಂದಿರದ ಬಳಕೆದಾರರು ಗರಿಷ್ಠ 280 ಅಕ್ಷರಗಳ ಮಿತಿಯನ್ನು ಹೊಂದಿದ್ದಾರೆ. ಥ್ರೆಡ್ ಖಾತೆಯನ್ನು ತೆರೆಯಲು ನೀವು ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರಬೇಕಾಗುತ್ತದೆ. ಆದರೆ ಟ್ವಿಟ್ಟರ್‌ಗೆ ಈ ರೀತಿಯ ನಿಯಮಗಳು ಇಲ್ಲ.
ಥ್ರೆಡ್‌ಗಳಲ್ಲಿ, ಬಳಕೆದಾರರು ಐದು ನಿಮಿಷಗಳ ಅವಧಿಯ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ. ಟ್ವಿಟ್ಟರ್‌ನಲ್ಲಿ, ಬ್ಲ್ಯೂ ಟಿಕ್ ಇಲ್ಲದವರು 260 ಸೆಕೆಂಡ್‌ನ ವೀಡಿಯೊಗಳನ್ನು ಮಾತ್ರ ಪೋಸ್ಟ್ ಮಾಡಲು ಅವಕಾಶವಿದೆ. ಥ್ರೆಡ್‌ನಲ್ಲಿ ಖಾತೆಗಳನ್ನು ಮ್ಯೂಟ್ ಮತ್ತು ಬ್ಲಾಕ್ ಮಾಡಲು ಇನ್ಸ್ಟಾಗ್ರಾಂನಂತೆಯೇ ಆಯ್ಕೆಗಳು ಇರಲಿವೆ.
ದಿನಕ್ಕೆ ನಾವೆಷ್ಟು ಟ್ವೀಟ್‌ಗಳನ್ನು ನೋಡಬಹುದು?
ಎಲಾನ್ ಮಸ್ಕ್ ಪ್ರಕಾರ ವೆರಿಫೈ ಆದ ಖಾತೆಗಳು ದಿನಕ್ಕೆ 600 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಹೊಸದಾಗಿ ತೆರೆಯಲಾಗಿರುವ ವೆರಿಫೈ ಆಗದ ಖಾತೆಗಳು ದಿನಕ್ಕೆ 300 ಟ್ವೀಟ್‌ಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನು ವೆರಿಫೈ ಆಗಿರುವ ಟ್ವಿಟ್ಟರ್ ಖಾತೆಗಳು ದಿನಕ್ಕೆ ಗರಿಷ್ಠವಾಗಿ 6000 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಕೂಡಾ ಮಸ್ಕ್ ಹೇಳಿಕೊಂಡಿದ್ದಾರೆ.
ಶೀಘ್ರವೇ ಈ ಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ. ವೆರಿಫೈಡ್ ಖಾತೆಗಳು ದಿನಕ್ಕೆ 8000 ಪೋಸ್ಟ್‌ಗಳು, ವೆರಿಫೈ ಆಗದ ಖಾತೆಗಳು 800 ಪೋಸ್ಟ್‌ಗಳು, ಹೊಸದಾಗಿ ತೆರೆಯಲಾದ ವೆರಿಫೈ ಆಗದ ಖಾತೆಗಳು ದಿನಕ್ಕೆ 400 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುವಂತೆ ಶೀಘ್ರವೇ ಮಿತಿ ಏರಿಕೆ ಮಾಡಲಾಗುತ್ತದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಟ್ವೀಟ್ ಮಾಡಿರವ ಎಲಾನ್ ಮಸ್ಕ, "ಈ ಮಿತಿಯನ್ನು 10 ಸಾವಿರ, 1 ಸಾವಿರ, 0.5 ಸಾವಿರಕ್ಕೆ ಏರಿಸಲಾಗುತ್ತದೆ," ಎಂದು ತಿಳಿಸಿದ್ದಾರೆ. ಅಂದರೆ ಶೀಘ್ರವೇ ಒಂದು ದಿನದಲ್ಲಿ ನೋಡಬಹುದಾದ ಪೋಸ್ಟ್‌ಗಳ ಮಿತಿಯನ್ನು ವೆರಿಫೈಡ್ ಖಾತೆಗಳಿಗೆ 10 ಸಾವಿರಕ್ಕೆ, ವೆರಿಫೈ ಆಗದ ಖಾತೆಗಳಿಗೆ ಒಂದು ಸಾವಿರಕ್ಕೆ, ಹೊಸದಾಗಿ ತೆರೆಯಲಾದ ವೆರಿಫೈ ಆಗದ ಖಾತೆಗಳು ದಿನಕ್ಕೆ 500ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications