For Quick Alerts
ALLOW NOTIFICATIONS  
For Daily Alerts

ಎಲ್ಲೆಡೆ ನಿಷೇಧದ ಭೀತಿ: ಚೀನಾದಿಂದಲೇ ಹೊರಬರಲು ನಿರ್ಧರಿಸಿದ ಟಿಕ್ ಟಾಕ್

|

ಕೊರೊನಾವೈರಸ್ ಹುಟ್ಟಿಗೆ ಕಾರಣವಾದ ಹಾಗೂ ಭಾರತದೊಂದಿಗೆ ಗಡಿ ತಂಟೆ ತೆಗೆದ ಚೀನಾ ಇದೀಗ ಇಡೀ ಜಗತ್ತಿನಲ್ಲಿ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಚೀನಾದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಅನೇಕ ರಾಷ್ಟ್ರಗಳು ಹೆಜ್ಜೆ ಇಡುತ್ತಿವೆ. ಈ ನಿಟ್ಟಿನಲ್ಲಿ ಭಾರತ ಚೀನಾ ಮೂದಲ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಆ ದೇಶಕ್ಕೆ ಮರ್ಮಾಘಾತ ನೀಡಿದೆ.

ಎಲ್ಲೆಡೆ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್‌ ಟಾಕ್ ಇದೀಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಟಿಕ್‌ಟಾಕ್ ಒಡೆತನದ ಬೈಟ್‌ಡ್ಯಾನ್ಸ್ ಕಂಪನಿಯಿಂದ ಪ್ರತ್ಯೇಕಗೊಂಡು ಚೀನಾವನ್ನೇ ತೊರೆದು ಹೊರ ಬರಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಭಾರತದ ಟಿಕ್‌ಟಾಕ್ ಪ್ರಿಯರಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್

 

ಹೌದು, ಟಿಕ್‌ಟಾಕ್ ಯೋಜಿಸಿದಂತೆ ನಡೆದರೆ ಇನ್ನೇನು ಆಗಸ್ಟ್ ವೇಳೆಗೆ ಚೀನಾವನ್ನು ತೊರೆದು ಹೊರ ಬರಲಿದೆ. ಅದು ಭಾರತ ಇಲ್ಲವೇ ಅಮೆರಿಕವನ್ನು ಎದುರು ನೋಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಆಡಳಿತಾತ್ಮಕ ಮಂಡಳಿಯನ್ನು ರದ್ದು ಮಾಡುವುದು

ಆಡಳಿತಾತ್ಮಕ ಮಂಡಳಿಯನ್ನು ರದ್ದು ಮಾಡುವುದು

ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಟಿಕ್ ಟಾಕ್‌ನ್ನು ನಿಷೇಧಿಸಲಾಗಿದೆ. ಅಮೆರಿಕದಲ್ಲೂ ನಿಷೇಧಿಸುವ ಸೂಚನೆ ಇದೆ. ಇದರಿಂದ ಕಂಗಾಲಾಗಿರುವ ಟಿಕ್‌ಟಾಕ್ ತನ್ನ ಆಡಳಿತಾತ್ಮಕ ಮಂಡಳಿಯನ್ನೇ ಬೈಟ್‌ಡ್ಯಾನ್ಸ್‌ನೊಂದಿಗೆ ಕಡಿದುಕೊಂಡು ಹೊರ ಬರಲು ನಿರ್ಧರಿಸಿದೆ. ಹೊಸ ಆಡಳಿತ ಮಂಡಳಿಯನ್ನು ರಚಿಸಿಕೊಂಡು ಚೀನಾ ಬಿಟ್ಟು ಯಾವುದಾದರೂ ದೇಶದಲ್ಲಿ ಟಿಕ್‌ಟಾಕ್‌ನ್ನು ಪುನರ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

ಚೀನಾ ಆಪ್‌ಗಳಿಗೆ 79 ಪ್ರಶ್ನೆ

ಚೀನಾ ಆಪ್‌ಗಳಿಗೆ 79 ಪ್ರಶ್ನೆ

ಟಿಕ್‌ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಆಫ್‌ಗಳನ್ನು ನಿಷೇಧಿಸಿರುವ ಭಾರತ ಸರ್ಕಾರ ಇದೀಗ ಈ ಕಂಪನಿಗಳಿಗೆ 79 ಪ್ರಶ್ನೆಗಳನ್ನು ಕೇಳಿದೆ. ಸಮರ್ಪಕ ಉತ್ತರ ನೀಡದಿದ್ದರೆ ಖಾಯಂ ನಿಷೇಧ ಹೇರುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಅಮೆರಿಕವೂ ನಿಷೇಧಿಸಲಿದೆ
 

ಅಮೆರಿಕವೂ ನಿಷೇಧಿಸಲಿದೆ

ಟಿಕ್‌ಟಾಕ್ ನಿಷೇಧಿಸಲು ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಮುಂದಾಗಿದೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಆಪ್‌ಗಳನ್ನು ನಿಷೇಧಿಸಲು ಮುಂದಾಗಿದೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವುದನ್ನು ಅಮೆರಿಕ ಖಂಡಿತವಾಗಿಯೂ ಎದುರು ನೋಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

'ಡಿಜಿಟಲ್ ಸ್ಟ್ರೈಕ್'

'ಡಿಜಿಟಲ್ ಸ್ಟ್ರೈಕ್'

ಜೂನ್ 29 ರಂದು ಭಾರತ ಸರ್ಕಾರವು ಟಿಕ್‌ಟಾಕ್ ಮತ್ತು ವೀಚಾಟ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸುವುದಾಗಿ ಘೋಷಿಸಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಈ ಅಪ್ಲಿಕೇಶನ್‌ಗಳು ದಕ್ಕೆ ತರುತ್ತವೆ ಎಂದು ಆರೋಪಿಸಲಾಗಿದೆ. ಚೀನಾ ವಿರುದ್ಧ ಇದೊಂದು 'ಡಿಜಿಟಲ್ ಸ್ಟ್ರೈಕ್' ಎನ್ನಲಾಗಿದೆ.

English summary

Tiktok Says It Will Exit Hong Kong Market Within Days

Fear Of Prohibition Everywhere: TIk Tok Decided To Come Out From China
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more