ಸ್ಪಾಮ್ ಕರೆಗಳ ಹಾವಳಿ ಒಮ್ಮೊಮ್ಮೊ ತೀರಾ ಕಿರಿಕಿರಿಯಾಗಿ ಅನ್ನಿಸಿಬಿಡುತ್ತವೆ. ಈ ಸ್ಪ್ಯಾಮ್ ಕರೆಗಳನ್ನು ನಿಭಾಯಿಸುವುದು ನಿಜಕ್ಕೂ ಕಷ್ಟಕರ ಕೆಲಸ ಎನ್ನಬಹುದು. ಬಳಕೆದಾರರಿಗೆ ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ಬರುತ್ತಲೇ ಇರುತ್ತವೆ. ಒಮ್ಮೊಮ್ಮೆ"ಇವರೇನು ಮನುಷ್ಯರಾ, ರೋಬೋಟ್'ಗಳಾ?" ಅಂತ ಅನ್ನಿಸಿಬಿಡುತ್ತೆ.
ನಾವೇನೋ ನಮ್ಮ ಪಾಡಿಗೆ ಕೆಲಸ ಮಾಡ್ತಾ ಇರ್ತೀವಿ, ಇಲ್ಲಾ ಒಂದು ಸ್ವಲ್ಪ ನೆಮ್ಮದಿಯಾಗಿ ಟಿವಿ ನೋಡ್ತಾ ಇರ್ತೀವಿ. ಅಷ್ಟರಲ್ಲಿ, "ರಿಂಗ್... ರಿಂಗ್..." ಅಂತ ಫೋನ್ ಕಿರಿಕಿರಿ ಶುರು. ಎತ್ತಿ ನೋಡಿದ್ರೆ, "ಸರ್, ಮ್ಯಾಡಮ್, ಲೋನ್ ಬೇಕಾ? ಇನ್ಶೂರೆನ್ಸ್ ಬೇಕಾ? ಕ್ರೆಡಿಟ್ ಕಾರ್ಡ್ ಬೇಕಾ?" ಅಂತ ಶುರು ಮಾಡ್ತಾರೆ.

ಒಂದ್ಸಲ ಸಿಕ್ಕಾಪಟ್ಟೆ ಮಾನಸಿಕವಾಗಿ ಕಿರಿಕಿರಿ ಆಗಿಬಿಡುತ್ತದೆ. ಯಾಕ್ರಿ ಕಾಲ್ ಮಾಡ್ತೀರಾ ಅಂದ್ರೆ ಇದು ನಮ್ಮ ಕೆಲಸ ಅಂದು ಸುಮ್ಮನಾಗುತ್ತಾರೆ. ಹಾಗಾದರೆ ಈ ಅನಗತ್ಯ ಕರೆಗಳಿಂದ ಮುಕ್ತಿಪಡೆಯುವುದು ಹೇಗೆ?
ಇತ್ತೀಚೆಗೆ ಟೆಲಿಕಾಂ ವಾಣಿಜ್ಯ ಸಂವಹನ ಗ್ರಾಹಕ ಆದ್ಯತೆ ನಿಯಮಗಳಲ್ಲಿ(TCCCPR) ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳ ಪ್ರಕಾರ, ಗ್ರಾಹಕರು ಸ್ಪ್ಯಾಮ್ ಕರೆಗಳು ಮತ್ತು ಬೇಡದ ವಾಣಿಜ್ಯ ಸಂವಹನಗಳ (UCC) ಬಗ್ಗೆ ದೂರುಗಳನ್ನು ಸ್ವೀಕರಿಸಿದ ಏಳು ದಿನಗಳ ಒಳಗೆ ಸಲ್ಲಿಸಬಹುದು. ಈ ಮೊದಲು, ದೂರು ಸಲ್ಲಿಸಲು ಮೂರು ದಿನಗಳ ಕಾಲಾವಕಾಶವಿತ್ತು.
ಇದರ ಅರ್ಥವೇನೆಂದರೆ, ನಿಮಗೆ ಸ್ಪ್ಯಾಮ್ ಕರೆಗಳು ಅಥವಾ ಬೇಡದ ವಾಣಿಜ್ಯ ಸಂದೇಶಗಳು ಬಂದರೆ, ಅವು ಬಂದ ಏಳು ದಿನಗಳ ಒಳಗೆ ನೀವು ದೂರನ್ನು ದಾಖಲಿಸಬಹುದು. ಈ ಹೊಸ ನಿಯಮದಿಂದ ಗ್ರಾಹಕರಿಗೆ ಹೆಚ್ಚಿನ ಸಮಯಾವಕಾಶ ದೊರೆತಂತಾಗಿದೆ.
ದೂರಿನ ನಂತರ ಕ್ರಮ ಕೈಗೊಳ್ಳಲು ಇರುವ ಸಮಯಾವಕಾಶ ಎಷ್ಟು?
ಹಿಂದೆ, BSNL, ಏರ್‌ಟೆಲ್, ಜಿಯೋ ಮುಂತಾದ ಪ್ರವೇಶ ಸೇವಾ ಪೂರೈಕೆದಾರರು (ASP) ಸ್ಪ್ಯಾಮ್ ಕರೆಗಳು ಅಥವಾ ಇತರ ಅಪೇಕ್ಷಿಸದ ವಾಣಿಜ್ಯ ಸಂವಹನಗಳ (unsolicited commercial communication- UCC) ಬಗ್ಗೆ ಗ್ರಾಹಕರು ನೀಡಿದ ದೂರಿನ ಮೇಲೆ ಕ್ರಮ ಕೈಗೊಳ್ಳಲು 30 ದಿನಗಳ ಕಾಲಾವಕಾಶವನ್ನು ಹೊಂದಿದ್ದರು. ಆದರೆ, ಈಗ ಟೆಲಿಕಾಂ ವಾಣಿಜ್ಯ ಸಂವಹನ ಗ್ರಾಹಕ ಆದ್ಯತೆ ನಿಯಮಗಳಲ್ಲಿ(TCCCPR) ತಿದ್ದುಪಡಿಗಳನ್ನು ಮಾಡಲಾಗಿದೆ. ಅದರ ಪ್ರಕಾರ, ಈ ಸಮಯದ ಮಿತಿಯನ್ನು 5 ದಿನಗಳಿಗೆ ಇಳಿಸಲಾಗಿದೆ. ನಮಗೆ ಸ್ಪ್ಯಾಮ್ ಕರೆಗಳು ಅಥವಾ ಬೇಡದ ವಾಣಿಜ್ಯ ಸಂದೇಶಗಳು ಬಂದರೆ, ನೀವು ದೂರು ಸಲ್ಲಿಸಿದ ನಂತರ ನಿಮ್ಮ ASP ಕೇವಲ 5 ದಿನಗಳಲ್ಲಿ ಆ ದೂರನ್ನು ಪರಿಹರಿಸಬೇಕು.
ಈ ಬದಲಾವಣೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ, ಏಕೆಂದರೆ ಅವರ ಸಮಸ್ಯೆಗಳು ಶೀಘ್ರವಗಿ ಬಗೆಹರಿಯುತ್ತವೆ.
ಸ್ಪ್ಯಾಮ್ ಅಥವಾ ಯುಸಿಸಿ ಕಳುಹಿಸುವವರನ್ನು ಹೇಗೆ ಗುರುತಿಸಲಾಗುತ್ತದೆ?
ಇದಕ್ಕೂ ಮೊದಲು, ಕಳೆದ 7 ದಿನಗಳಲ್ಲಿ ಸ್ಪ್ಯಾಮ್ ಮತ್ತು ಯುಸಿಸಿ ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲು 10 ದೂರುಗಳನ್ನು ಸಲ್ಲಿಸುವುದು ಅಗತ್ಯವಾಗಿತ್ತು. ಈಗ, ಈ ಮಾನದಂಡವನ್ನು ಕಡಿಮೆ ಮಾಡಲಾಗಿದೆ. ಕಳೆದ 10 ದಿನಗಳಲ್ಲಿ 5 ದೂರುಗಳನ್ನು ಹೊಂದಿರುವ ಕಳುಹಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಸ್ಪ್ಯಾಮ್ ಅಥವಾ ಯುಸಿಸಿ ವಿರುದ್ಧ ದೂರು ದಾಖಲಿಸುವುದು ಹೇಗೆ?
ಸ್ಪ್ಯಾಮ್ ಕರೆಗಳು ಮತ್ತು ಬೇಡದ ವಾಣಿಜ್ಯ ಸಂವಹನಗಳಿಂದ (UCC) ತೊಂದರೆಗೊಳಗಾದ ಗ್ರಾಹಕರು ಈಗ ಸುಲಭವಾಗಿ ದೂರು ದಾಖಲಿಸಬಹುದು. 1909 ಸಂಖ್ಯೆಗೆ SMS ಕಳುಹಿಸುವ ಮೂಲಕ, IVRS ಮೂಲಕ ಕರೆ ಮಾಡುವ ಮೂಲಕ, ಸಂಚಾರ ಸಾರಥಿ ಅಪ್ಲಿಕೇಶನ್ ಬಳಸುವ ಮೂಲಕ ಅಥವಾ ದೂರಸಂಪರ್ಕ ಇಲಾಖೆಯ ಚಕ್ಷು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ಸಲ್ಲಿಸುವ ಆಯ್ಕೆಗಳಿವೆ. ಈ ವಿವಿಧ ವಿಧಾನಗಳು ಗ್ರಾಹಕರಿಗೆ ಅನುಕೂಲಕರವಾಗಿದ್ದು, ಸ್ಪ್ಯಾಮ್ ಕರೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಹಾಯ ಮಾಡುತ್ತವೆ.
ಯುಸಿಸಿ ನಿರ್ವಹಣೆ ಹೇಗೆ ಮಾಡಬಹುದು?
ಅನಪೇಕ್ಷಿತ ವಾಣಿಜ್ಯ ಸಂವಹನಗಳ (UCC) ಹಾವಳಿಯಿಂದ ಮುಕ್ತಿ ಪಡೆಯಲು, ಗ್ರಾಹಕರು ತಮ್ಮ ಆದ್ಯತೆಗಳನ್ನು ನೋಂದಾಯಿಸಿಕೊಳ್ಳುವ ಮೂಲಕ ನಿಯಂತ್ರಣ ಹೊಂದಬಹುದು. ಯಾವ ರೀತಿಯ ವಾಣಿಜ್ಯ ಸಂವಹನಗಳು ಬೇಕು, ಯಾವ ಸಮಯದಲ್ಲಿ, ಯಾವ ಮಾಧ್ಯಮದ ಮೂಲಕ ಮತ್ತು ಯಾವ ದಿನಗಳಲ್ಲಿ ಬೇಕು ಎಂಬುದನ್ನು ನಿರ್ಧರಿಸುವ ಮೂಲಕ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಹನಗಳನ್ನು ಸ್ವೀಕರಿಸಬಹುದು. ಈ ಆಯ್ಕೆಗಳು ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಶಿಕ್ಷಣ, ಆಟೋಮೊಬೈಲ್‌ಗಳು ಮುಂತಾದ ವರ್ಗಗಳನ್ನು, ನಿರ್ದಿಷ್ಟ ಸಮಯದ ಶ್ರೇಣಿಗಳನ್ನು, ಧ್ವನಿ ಕರೆ ಅಥವಾ ಆಟೋ ಡಯಲರ್‌ನಂತಹ ಮಾಧ್ಯಮಗಳನ್ನು, ಮತ್ತು ವಾರದ ದಿನಗಳು, ವಾರಾಂತ್ಯಗಳು ಅಥವಾ ರಾಷ್ಟ್ರೀಯ ರಜಾದಿನಗಳಂತಹ ದಿನಗಳನ್ನು ಒಳಗೊಂಡಿರುತ್ತವೆ. ತಮ್ಮ ಟೆಲಿಕಾಂ ಸೇವಾ ಪೂರೈಕೆದಾರರ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ 1909 ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ಈ ಆದ್ಯತೆಗಳನ್ನು ಸುಲಭವಾಗಿ ಹೊಂದಿಸಿಕೊಳ್ಳಬಹುದು, ಇದರಿಂದ ಬೇಡದ ಕರೆಗಳು ಮತ್ತು ಸಂದೇಶಗಳಿಂದ ಮುಕ್ತಿ ಹೊಂದಿ, ತಮ್ಮ ಸಮಯ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Silver Rate Today: ಮತ್ತೆ ಸ್ಥಿರವಾದ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bus Fare Hike: ಯುಗಾದಿ ಹತ್ತಿರದಲ್ಲಿರೋವಾಗ್ಲೇ ಬಸ್ ಟಿಕೆಟ್ ಹೆಚ್ಚಳದ ಸೂಚನೆ! ಎಷ್ಟಾಗಲಿದೆ ಗೊತ್ತಾ ದರ?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Power Cut: ಇಂದು ಇಲ್ಲೆಲ್ಲಾ ಇರಲ್ಲ ಕರೆಂಟ್! ಬೆಸ್ಕಾಂ ಇಲಾಖೆಯಿಂದ ಕ್ರಮ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications