ಬಹುತೇಕರು ಚಿನ್ನದ ಮೇಲಿನ ಹೂಡಿಕೆ ಬೆಸ್ಟ್ ಅಂತಾನೆ ಹೇಳ್ತಾರೆ. ಆದ್ರೆ ಇತ್ತೀಚಿನ ಚಿನ್ನದ ದರದ ಏರಿಕೆಯಿಂದಾಗಿ ಜನಸಾಮಾನ್ಯರು ಒಂದು ಗ್ರಾಂ ಚಿನ್ನ ಖರೀದಿಸಬೇಕೆಂದರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ (Gold Rate) ಭಾರೀ ಏರಿಕೆ ಕಂಡಿತ್ತು. ಆದ್ರೆ ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಆದ್ದರಿಂದ ಹೂಡಿಕೆದಾರರು, ವೈಯಕ್ತಿಕವಾಗಿ ಖರೀದಿ ಮಾಡುವವರು ಹಾಗೂ ಚಿನ್ನದ ವಹಿವಾಟಿನಲ್ಲಿ ಆಸಕ್ತಿ ಹೊಂದಿರುವವರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇದೀಗ ಈ ವರದಿಯಲ್ಲಿ ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಹೇಗಿದೆ (Today Gold Price) ಎಂದು ನೋಡೋಣ. ಈ ಮಾಹಿತಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ, ಖರೀದಿ ಅಥವಾ ಮಾರಾಟ ಮಾಡುವವರಿಗೆ ತುಂಬಾನೇ ಉಪಯೋಗವಾಗಲಿದೆ.

ಬೆಂಗಳೂರು - 24 ಕ್ಯಾರೆಟ್ ಚಿನ್ನದ ಬೆಲೆ
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 100ಕ್ಕೂ ಅಧಿಕ ಬೆಲೆ ಇಳಿಕೆಯಾಗಿದೆ. 1 ಗ್ರಾಂ ಚಿನ್ನಕ್ಕೆ ರೂ.12,371, 8 ಗ್ರಾಂ ರೂ.98,968, 10 ಗ್ರಾಂ ರೂ.1,23,710, ಮತ್ತು 100 ಗ್ರಾಂ ರೂ.12,37,100 ಆಗಿದೆ. ಈ ಮೂಲಕ ಇತ್ತೀಚಿನ ದಿನಗಳಿಗಿಂತ ಚಿನ್ನದ ಬೆಲೆ ಇಂದು 1 ಗ್ರಾಂಗೆ ರೂ.22, 8 ಗ್ರಾಂಗೆ ರೂ.352, 10 ಗ್ರಾಂಗೆ ರೂ.440, 100 ಗ್ರಾಂಗೆ ರೂ.4,400 ನಷ್ಟು ಇಳಿಕೆಯಾಗಿದೆ.
ಬೆಂಗಳೂರು - 22 ಕ್ಯಾರೆಟ್ ಚಿನ್ನದ ಬೆಲೆ
ಅತ್ತ 24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ 22 ಕ್ಯಾರೆಟ್ ಚಿನ್ನದ ಬೆಲೆಯೂ ಸಹಜವಾಗಿ ಇಳಿಕೆಯಾಗುತ್ತೆ. ಅದೇ ರೀತಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಚಿನ್ನಕ್ಕೆ ರೂ.11,340, 8 ಗ್ರಾಂ ರೂ.90,720, 10 ಗ್ರಾಂ ರೂ.1,13,400, ಮತ್ತು 100 ಗ್ರಾಂ ರೂ.11,34,000 ಆಗಿದೆ. ಇತ್ತೀಚಿನ ದಿನಗಳಿಗಿಂತ 1 ಗ್ರಾಂಗೆ ರೂ.40, 8 ಗ್ರಾಂಗೆ ರೂ.320, 10 ಗ್ರಾಂಗೆ ರೂ.400, 100 ಗ್ರಾಂಗೆ ರೂ.4,000 ರಷ್ಟು ಇಳಿಕೆಯಾಗಿದೆ.
ಬೆಂಗಳೂರು - 18 ಕ್ಯಾರೆಟ್ ಚಿನ್ನದ ಬೆಲೆ
18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಚಿನ್ನಕ್ಕೆ ರೂ.9,278, 8 ಗ್ರಾಂ ರೂ.74,224, 10 ಗ್ರಾಂ ರೂ.92,780, ಮತ್ತು 100 ಗ್ರಾಂ ರೂ.9,27,800 ಆಗಿದೆ. ಇತ್ತೀಚಿನ ದಿನಗಳಿಗಿಂತ 1 ಗ್ರಾಂಗೆ ರೂ.33, 8 ಗ್ರಾಂಗೆ ರೂ.264, 10 ಗ್ರಾಂಗೆ ರೂ.330, 100 ಗ್ರಾಂಗೆ ರೂ.3,300 ರಷ್ಟು ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಅಕ್ಟೋಬರ್ 10, 2025 ರ ಚಿನ್ನದ ಬೆಲೆ ನೋಡುವುದಾದ್ರೆ, ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ $3,965.59 ಆಗಿದೆ. ಹಿಂದಿನ ಮುಚ್ಚಿದ ದರದೊಂದಿಗೆ ಹೋಲಿಸಿದಾಗ ಇದು $9.45 ಕಡಿಮೆಯಾಗಿದ್ದು, ಸರಾಸರಿ 0.24% ಇಳಿಕೆಯಾಗಿದೆ ಎಂದು ವರದಿಯಾಗಿದೆ. ಈ ಕುಸಿತವು ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆಗೆ ಉತ್ತಮ ಸಮಯವಾಗಿದೆ. ಅಲ್ಲದೆ ಹುಡಿಲಕೆಗಾಗಿ ಚಿನ್ನ ಸುರಕ್ಷಿತ ಆಸ್ತಿ ಎಂದು ಪರಿಗಣಿಸಲಾಗಿದೆ.
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಹೇಗಿದೆ?
ಇನ್ನು ಬೆಳ್ಳಿ ಬೆಲೆಯಲ್ಲಿ ಏರಿಳಿತಗಳು ಆಗುತ್ತಿದ್ದರೂ, ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿಯ ಬೆಲೆ ಇಂದು ರೂ. 170 ಆಗಿದ್ದು, ನಿನ್ನೆ ರೂ. 167 ಆಗಿತ್ತು, ಅಂದರೆ ನಿನ್ನೆಗಿಂತ ಇಂದು ಗ್ರಾಂ ಗೆ ೩ ರೂಪಾಯಿ ಹೆಚ್ಚಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,360 ಆಗಿದ್ದು, ನಿನ್ನೆ ರೂ. 1,336 ಆಗಿತ್ತು, ಈ ಮೂಲಕ ನಿನ್ನೆಗಿಂತ ರೂ. 24 ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,700 ಆಗಿದ್ದು, ನಿನ್ನೆ ರೂ. 1,670 ಆಗಿತ್ತು, ನಿನ್ನೆಗೆ ಹೋಲಿಸಿದ್ರೆ ಇಂದು ರೂ. 30 ಬದಲಾವಣೆ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 17,000 ಆಗಿದ್ದು, ನಿನ್ನೆ ರೂ. 16,700 ಆಗಿತ್ತು, ಬದಲಾವಣೆ ರೂ. 300 ಆಗಿದೆ. 1000 ಗ್ರಾಂ (1 ಕಿಲೋಗ್ರಾಂ) ಬೆಳ್ಳಿ ಬೆಲೆ ಇಂದು ರೂ. 1,70,000 ಆಗಿದ್ದು, ನಿನ್ನೆ ರೂ. 1,67,000 ಆಗಿತ್ತು, ದೈನಂದಿನ ಬದಲಾವಣೆ ರೂ. 3,000 ಆಗಿದೆ. ಚಿನ್ನದ ಬೆಲೆ ತಕ್ಕ ಮಟ್ಟಿಗೆ ಇಳಿಕೆ ಕಂಡಿದ್ದು, ಇತ್ತ ಬೆಳ್ಳಿ ಬೆಲೆ ಗ್ರಾಂ ಗೆ ೩ ರೂಪಾಯಿಯಂತೆ ಏರಿಕೆ ಕಂಡಿದೆ.
ಇದಿಷ್ಟು ಇಂದಿನ ಚಿನ್ನ ಮತ್ತು ಬೆಳ್ಳಿ ದರವಾಗಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವ ಮೊದಲು, ಖರೀದಿಸುವ ಮೊದಲು ಚಿನ್ನದ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಗಮನಿಸುವುದು ಮುಖ್ಯ. ಆದ್ದರಿಂದ ಚಿನ್ನದ ಬೆಳೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದರೆ ಚಿನ್ನ, ಬೆಳ್ಳಿಯ ಮೇಲಿನ ಹೂಡಿಕೆಗಳನ್ನು ಸಮರ್ಪಕವಾಗಿ ಮಾಡಬಹುದು.


Click it and Unblock the Notifications