ಚಿನ್ನ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಕೆಲವು ದಿನಗಳ ಹಿಂದೆ ತೀರ್ವವಾಗಿ ಇಳಿಕೆಯಾಗಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯಾಗಿದೆ. ಆದ್ರೆ ಬೆಳ್ಳಿ ಮಾತ್ರ ತನ್ನ ಸ್ಥಾನವನ್ನ ಕದಲಿಸದೇ ಕಳೆದೆರಡು ದಿನಗಳಿಂದ ಸ್ಥಿರವಾಗೇ ಇದೆ. ಈ ಮಧ್ಯೆ ಯುಎಸ್ ಡಾಲರ್ ಹೊಡೆತಕ್ಕೆ ಭಾರತದ ಚಿನ್ನದ ಮಾರುಕಟ್ಟೆ ಸ್ವಲ್ಪ ಅಲುಗಾಡಿತ್ತು, ಆದ್ರೆ ಸದಾದ ನಂತರ ಮತ್ತೆ ಚಿನ್ನ ಎದ್ದು ನಿಂತಿದೆ.
ಭರತದಲ್ಲಿ ಸತತ ಎರಡನೇ ದಿನ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ಕೆವು ದಿನಗಳ ಹಿಂದೆ ಇಳಿಕೆಯಾಗಿದ್ದ ಚಿನ್ನದ ದರ ಎರಡು ದಿನಗಳಿಂದ ಏರಿಕೆ ಆಗ್ತಾನೆ ಇದೆ. ಯುಎಸ್ ಡಾಲರ್ ಪ್ರಭಾವದಿಂದ ಇಳಿಮುಖವಾಗಿದ್ದ ಚಿನ್ನದ ಬೆಲೆ ನವೆಂಬರ್ 21ರಂದು ಮತ್ತೆ ಏರಿಕೆಯಾಗಿದೆ. ಅಲ್ಲದೆ ಬುಧವಾರ, ರಷ್ಯ ಉಕ್ರೇನ್ ಸಂಘರ್ಷದಿಂದಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಲೇ ಇದೆ.

ಇಂದು ಭಾರತದಲ್ಲಿ ಚಿನ್ನದ ಬೆಲೆಗಳು
ಭಾರತದಲ್ಲಿ ಚಿನ್ನದ ಬೆಲೆ ಗಮನಿಸಿದ್ರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,795 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 7,145 ರೂಪಾಯಿ ಇದೆ. ಭಾರತದಲ್ಲಿ ಬುಧವಾರ 71,150ರೂ. ಇದ್ದ 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ಬೆಲೆ 300 ರೂ. ಏರಿಕೆಯಾಗಿ ಗುರುವಾರ 71,450 ರೂ.ಗೆ ಏರಿಕೆಯಾಗಿದೆ. ಹಾಗೆ ಮಂಗಳವಾರ 7,11,500 ರೂ ಇದ್ದ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 3000 ರೂ. ಏರಿಕೆಯಾಗಿ 7,14,500 ರೂಪಾಯಿಯಾಗಿದೆ.
ಇನ್ನೊಂದು ಕಡೆ ನೋಡೋದಾದ್ರೆ, 77,620 ರೂಪಾಯಿ ಇದ್ದ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 330 ಏರಿಕೆಯಾಗಿ 77,950 ರೂ. ಆಗಿದೆ. ಭಾರತದಲ್ಲಿ ಬುಧವಾರ 7,76,200 ಇದ್ದ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 3,300 ರೂಗಳಷ್ಟು ಏರಿಕೆಯಾಗಿ ಇಂದು 7,79,500 ರೂಪಾಯಿಗಳಿಗೆ ತಲುಪಿದೆ.
ಬುಧವಾರ 58,220 ರೂ.ಗಳಿದ್ದ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 240 ರೂಗಳಷ್ಟು ಏರಿಕೆಯಾಗಿ 58,460 ರೂಪಾಯಿಗೆ ತಲುಪಿದೆ. ಹಾಗೆ ಬುಧವಾರ 5,82,200 ರೂ.ಗಳಷ್ಟಿದ್ದ 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ 2,400ರೂ. ಏರಿಕೆಯಾಗಿ 5,84,600 ರೂಪಾಯಿಯಾಗಿದೆ.
ಸ್ಪಾಟ್ ಚಿನ್ನದ ಬೆಲೆ
ಸ್ಪಾಟ್ ಚಿನ್ನವು 01:42 pm EST (1842 GMT)ಯಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ 0.6% ರಷ್ಟು ಏರಿಕೆಯಾಗಿ 2,647.43 ಡಾಲರ್ ಆಗಿದೆ. US ಚಿನ್ನದ ಭವಿಷ್ಯವು 0.8% ರಷ್ಟು ಏರಿಕೆಯಾಗಿ 2,651.70 ಡಾಲರ್ ಆಗಿದೆ ಎಂದು ರಾಯಿಟರ್ಸ್ ವರದಿಯಲ್ಲಿ ಹೇಳಲಾಗಿದೆ. ಇತರ ಲೋಹಗಳಲ್ಲಿ, ಪಲ್ಲಾಡಿಯಮ್ 1.8% ಇಳಿಕೆಯಾಗಿ 1,016.73 ಡಾಲರ್ ಆಗಿದ್ದು, ಪ್ಲಾಟಿನಮ್ 1.8% ಇಳಿಕೆಯಾಗಿ 956.87 ಡಾಲರ್ ಆಗಿದೆ. ಆದರೆ ಸ್ಪಾಟ್ ಬೆಳ್ಳಿ ಮಾತ್ರ 0.9% ಇಳಿಕೆಯಾಗಿ 30.92 ಡಾಲರ್ ಔನ್ಸ್‌ಗೆ ತಲುಪಿದೆ.
ಇಂದು ಭಾರತದಲ್ಲಿ ಬೆಳ್ಳಿ ದರ
ಅಮೆರಿಕಾದಲ್ಲಿ ಹೆಚ್ಚಿನ ಬಡ್ಡಿ ಕಡಿತವಾದ ನಂತರವೂ ಕೂಡ ಭಾರತದಲ್ಲಿ ಬೆಳ್ಳಿ ದರಗಳು ಮಾತ್ರ ಸ್ಥಿರವಾಗಿವೆ. ಭಾರತದಲ್ಲಿ ನವೆಂಬರ್ 21 ರಂದು ಬೆಳ್ಳಿ ಪ್ರತಿ ಗ್ರಾಂಗೆ 92 ರೂಪಾಯಿ, ಹಾಗು ಪ್ರತಿ ಕಿಲೋಗ್ರಾಂಗೆ 92,000 ರೂಪಾಯಿ ಇತ್ತು. ಅದೇ ರೀತಿ ಇಂದು ಕೂಡ ನಿನ್ನೆಯಂತೆಯೇ ಪ್ರತಿ 10 ಗ್ರಾಂಗೆ 920 ರೂಪಾಯಿ, ಹಾಗು ಪ್ರತಿ 1 ಕಿಲೋಗ್ರಾಂಗೆ 92,000 ರೂಪಾಯಿ ಇದೆ.
ಇಂದು ಚಿನ್ನದ ದರದ ಔಟ್‌ಲುಕ್
ಭಾರತದಲ್ಲಿ ಆರ್ಥಿಕ ಮತ್ತು ಸಂಸ್ಕೃತಿಕವಾಗಿ ಮಹತ್ವವನ್ನ ಹೊಂದಿರುವ ಚಿನ್ನವು ದಿನದಿಂದ ದಿನಕ್ಕೆ ದರದಲ್ಲಿ ವ್ಯತ್ಯಾಸವನ್ನ ಕಾಣ್ತಿದೆ. ಅಲ್ಲದೆ ಒಮ್ಮೆ ಗಗನಕ್ಕೆ ಏರಿದ್ದು ಮತ್ತೊಮ್ಮೆ ದೊಪ್ಪನೆ ಕುಸಿದು ಬಿದ್ದಿದೆ. ಇನ್ನು ಚಿನ್ನವನ್ನ ಕೊಂಡುಕೊಳ್ಳಲು ಸಾಲಾಗಿ ನಿಂತಿದ್ದ ಜನರಿಗೆ ಮತ್ತೆ ಬೆಲೆ ಏರಿಕೆಯ ಹೊಡೆತ ಬಿದ್ದಿದೆ. ಹಾಗೆ ಇಂದು, ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವಿನ ಯುದ್ಧದ ತೀವ್ರತೆಯಿಂದಾಗಿ ಚಿನ್ನ ಅತೀ ಹೆಚ್ಚು ವ್ಯಾಪಾರವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಇಂದು ಚಿನ್ನ ಮತ್ತು ಬೆಳ್ಳಿಯ ಔಟ್‌ಲುಕ್
ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದು ಸ್ವಲ್ಪ ಹೆಚ್ಚಿನ ವಹಿವಾಟುಗಳನ್ನು ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ದರಗಳು ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟುಗಳನ್ನ ಮಾಡುತ್ತವೆ ಎಂದು ನಾವು ನಿರೀಕ್ಷಿಸಬಹುದು.
ಹಾಗೆ ಆಗಸ್ಟ್‌ನಲ್ಲಿ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನದ ದರಗಳು ಸೋಮವಾರದ ವೇಳೆಗೆ ಸ್ಥಿರವಾಗಿರುವುದರಿಂದ, ಮಾರುಕಟ್ಟೆಯ ಜೊತೆಗೆ ಡಾಲರ್ ಮತ್ತು ಫೆಡರಲ್ ರಿಸರ್ವ್‌ನ ಬಡ್ಡಿದರದ ಮೇಲೆ ಕೂಡ ಹೆಚ್ಚು ಗಮನಹರಿಸಲಾಗಿದೆ" ಎಂದು ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications